ಅತ್ಯಾಚಾರಿಗೆ ಕೊನೆಗೂ 22 ವರ್ಷದ ಜೈಲುಶಿಕ್ಷೆ ಪ್ರಾಪ್ತಿ

molestation-madrasa-teacher-gets-22-years-ri-kasargod
ಕಾಸರಗೋಡು, ಡಿ.21: ಅತ್ಯಾಚಾರಿಗಳಿಗೆ ಶಿಕ್ಷೆಯೇ ಆಗೋಲ್ಲ. ಕಾನೂನು ಚೌಕಟ್ಟಿನಿಂದ ಅವರು ಸುಲಭವಾಗಿ ಪಾರಾಗುತ್ತಾರೆ. ಅವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹ ಎಲ್ಲಡೆಯಿಂದಲೂ ಕೇಳಿಬರುತ್ತಿರುವ ಹೊತ್ತಿನಲ್ಲೇ ಸ್ಥಳೀಯ ನ್ಯಾಯಾಲಯವೊಂದು ನಿನ್ನೆ ಗುರುವಾರ ಅಪರೂಪದ ತೀರ್ಪು ನೀಡಿದೆ.

ಚಾರಿತ್ರಿಕ ತೀರ್ಪೊಂದರಲ್ಲಿ ಕಾಸರಗೋಡು ಜಿಲ್ಲಾ ಸೆಷನ್ಸ್ ಕೋರ್ಟ್ ಬಾಲಕಿಯ ಮೇಲೆ ಬಲಾತ್ಕಾರ ನಡೆಸಿದ ಯುವಕನಿಗೆ 22 ವರ್ಷಗಳ ಸುಧೀರ್ಘ ಕಾಲದ ಕಠಿಣ ಶಿಕ್ಷೆ ವಿಧಿಸಿದೆ.

ಆರೋಪಿಯು ಮದರಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದು, 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ತಪ್ಪಿತಸ್ಥನು ಮುನಕಾಡವು ನಿವಾಸಿ ಎಟಿ ಅಯೂಬ್ (28). ಪ್ರಕರಣದಲ್ಲಿ ಆರೋಪಿ ಅಯೂಬ್ ಅತ್ಯಾಚಾರ, ದೈಹಿಕ ಹಲ್ಲೆ, ಜೀವ ಬೆದರಿಕೆ ಮತ್ತು ಸಾಕ್ಷ್ಯ ನಾಶ ಆರೋಪಗಳನ್ನು ಎದುರಿಸುತ್ತಿದ್ದ.

ಅತ್ಯಾಚಾರ, ದೈಹಿಕ ಹಲ್ಲೆಗಾಗಿ ತಲಾ 10 ವರ್ಷದ ಮತ್ತು ಸಾಕ್ಷ್ಯ ನಾಶಕ್ಕೆ 2 ವರ್ಷದ ಕಠಿಣ ಶಿಕ್ಷೆಯನ್ನು ಕೋರ್ಟ್ ಆರೋಪಿ ಅಯೂಬ್ ಗೆ ವಿಧಿಸಿದೆ. ಅಡೂರು ಇನ್ಸ್ ಪೆಕ್ಟರ್ ಟಿಪಿ ರಂಜಿತ್ ಅವರು ತನಿಖಾಧಿಕಾರಿಯಾಗಿದ್ದರು. ಪ್ರಕರಣದಲ್ಲಿ ಒಟ್ಟು 25 ಮಂದಿ ಪ್ರತ್ಯಕ್ಷ ಸಾಕ್ಷಿಗಳು ಸಾಕ್ಷ್ಯ ನುಡಿದಿದ್ದರು.

2008ರ ಆಗಸ್ಟ್ 10ರಂದು ಈ ಪ್ರಕರಣ ನಡೆದಿತ್ತು. ಮದರಸಾ ಶಾಲೆಯಲ್ಲಿ ಪಾಠ ಹೇಳಿಕೊಡುತ್ತೇನೆ ಎಂದು ಕೋಣೆಯೊಂದಕ್ಕೆ ಬಾಲಕಿಯನ್ನು ಕರೆದೊಯ್ದ ಆರೋಪಿ ಅಯೂಬ್, ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+