ಡಿಸೆಂಬರ್ 22ರಿಂದ ಹೊಸ ಟಿವಿ ಚಾನಲ್

ಡಿವೈನ್ ವರ್ಡ್ ಚಾರಿಟಬಲ್ ಟ್ರಸ್ಟ್ ಮಾಲಕತ್ವದಲ್ಲಿ ಈ ವಾಹಿನಿ ಕಾರ್ಯನಿರ್ವಹಿಸಲಿದ್ದು ಮಂಗಳೂರಿನ ಮಿಲಾಗ್ರಿಸ್ ಮೈದಾನದಲ್ಲಿ ವಾಹಿನಿಯ ಉದ್ಘಾಟನೆ ಶನಿವಾರ ಡಿ 22ರಂದು ನಡೆಯಲಿದೆ.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮತ್ತು ಮಂಗಳೂರಿನ ಬಿಷಪ್ ಮುಂತಾದ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವೆಸ್ಟರ್ನ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಸ್ಟೀಫನ್ ಮೆಂಡಿಸ್ ವಾಹಿನಿಯ ಜವಾಬ್ದಾರಿ ನಿರ್ವಹಿಸಲಿದ್ದಾರೆ. ವಾಹಿನಿಯು ಶಿಕ್ಷಣ, ಆರೋಗ್ಯ ಮುಂತಾದ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ ಎನ್ನಲಾಗಿದೆ.
ಟಿವಿ ಕೇಬಲ್ ಮೂಲಕವಲ್ಲದೆ ಅಂತರ್ಜಾಲದ ಮೂಲಕ ವಾಹಿನಿಯ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ವೀಕ್ಷಿಸಬಹುದು. ರಾಜ್ಯ ಕ್ಯಾಥೋಲಿಕರ ಮೊದಲ ಚಾನಲ್ ಇದಾಗಿದ್ದು ಹೊಸ ಹೊಸ ಸಮಾಜಮುಖಿ ಕಾರ್ಯಕ್ರಮಗಳನ್ನು ತರಲಿದೆ ಎಂದು ಸ್ಟೀಫನ್ ಮೆಂಡಿಸ್ ತಿಳಿಸಿದ್ದಾರೆ.
ಇಂಟರ್ನೆಟ್ ನಲ್ಲಿ ಈ ಕೊಂಡಿಯ ಮೂಲಕ ವಾಹಿನಿಯ ಕಾರ್ಯಕ್ರಮ ವೀಕ್ಷಿಸಬಹುದು












Click it and Unblock the Notifications