ಪ್ಲೇ ಬಾಯ್ ಪ್ರಧಾನಿಗೆ ಮತ್ತೆ ಮದ್ವೆಯಂತೆ
ರೋಮ್, ಡಿ.19: ಹುಣಸೆ ಮರಕ್ಕೆ ಮುಪ್ಪಾದರೂ ಹುಳಿ ಮುಪ್ಪೇ ಎಂಬ ಗಾದೆಯ ಪ್ರತ್ಯಕ್ಷ ರೂಪದಂತೆ ಇರುವ ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಮತ್ತೆ ಮದ್ವೆಯಾಗುತ್ತಿದ್ದಾರಂತೆ. ಇದರಲ್ಲಿ ಏನು ತಪ್ಪು ಆಗ್ಲಿ ಬಿಡಿ ಎನ್ನಬಹುದಾದರೂ, ಬೆರ್ಲುಸ್ಕೋನಿಗೂ ಮದ್ವೆ ನಿಶ್ಚಯ ಆಗಿರೋ ಹುಡ್ಗಿ ಇರುವ ವಯಸ್ಸಿನ ಅಂತರ ಕಂಡು ಎಲ್ಲರೂ ಹೌಹಾರಿದ್ದಾರೆ.
ಬೆತ್ತಲಾಗಿ ಆಚರಿಸುವ ಬುಂಗಾ ಬುಂಗಾ ಪಾರ್ಟಿ ಮಾಡಿಕೊಂಡು ವರ್ಲ್ಡ್ ಫೇಮಸ್ ಆಗಿದ್ದ ರಸಿಕ ಬೆರ್ಲುಸ್ಕೋನಿಗೆ ಈಗ 76 ವಯಸ್ಸು. ಆತ ಮದ್ವೆಯಾಗ ಬಯಸಿರುವುದು ತಮಗಿಂತಲೂ 50 ವರ್ಷ ಕಿರಿಯ ಯುವತಿ ಜೊತೆಗೆ ಎಂಬುದು ಗಮನಾರ್ಹ.

ಎರಡು ಬಾರಿ ಮದುವೆಯಾಗಿದ್ದ ಬೆರ್ಲುಸ್ಕೋನಿ, 28 ವರ್ಷದ ಟೀವಿ ನಿರೂಪಕಿ ಫ್ರಾನ್ಸಿಸ್ಕಾ ಪಾಸ್ಕಾಲೆಯನ್ನು ತಮ್ಮ ಹೊಸ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ದಪ್ಪ ಅಕ್ಷರಗಳಲ್ಲಿ ಪ್ರಕಟಿಸಿದೆ.
ಫ್ರಾನ್ಸಿಸ್ಕಾ ಒಳಗೂ ಹೊರಗೂ ಅತ್ಯಂತ ಸುಂದರವಾಗಿ ಕಾಣುವ ವ್ಯಕ್ತಿ. ಅವಳಿಂದ ನಿರಂತರ ಸುಖದ ಅನುಭವ ಪಡೆದಿದ್ದೇನೆ. ಈಗ ಅಧಿಕೃತವಾಗಿ ಆಕೆ ನನ್ನ ಮಡದಿಯಾಗುತ್ತಿದ್ದಾಳೆ ಎಂದು 5 ಮಕ್ಕಳ ತಂದೆ ಬೆರ್ಲುಸ್ಕೋನಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಬೆರ್ಲುಸ್ಕೋನಿ ಎರಡನೇ ಹೆಂಡತಿ 2008ರಲ್ಲಿ ದೂರವಾಗಿದ್ದಳು. ಬೆರ್ಲೆಸ್ಕೋನಿ ಮುಂದಿನ ಫೆಬ್ರವರಿಯಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ. ಇದರ ಬೆನ್ನಲ್ಲೇ ನಿಶ್ಚಿತವಾಗಿರುವ ಯುವತಿಯೊಂದಿಗೆ ಅವರು ದೈಹಿಕ ಸಂಬಂಧ ಹೊಂದಿದ್ದು ಒತ್ತಡದ ಮದ್ವೆಗೆ ಒಪ್ಪಿದ್ದಾರೆ ಎನ್ನಲಾಗಿದೆ.
ದಿನಕ್ಕೆ 5 ಬಾರಿ ಸೆಕ್ಸ್: ಕಳೆದ ವರ್ಷ ಬೆರ್ಲ್ಕುಸ್ಕೋನಿ ಅವರ ಸೆಕ್ಸ್ ಸಾಮರ್ಥ್ಯದ ಬಗ್ಗೆ ಅವರ ಆಪ್ತ ವೈದ್ಯರು ಹೇಳಿದ್ದು ಕೇಳಿ ಇಡೀ ವಿಶ್ವವೇ ಬೆರಗಾಗಿತ್ತು.
"ಬೆರ್ಲುಸ್ಕೋನಿ ಪ್ರತಿದಿನ 5 ಸಲ ಸೆಕ್ಸ್ ಮಾಡುವಷ್ಟು ಪೌರುಷ ಹೊಂದಿದ್ದಾರೆ" ಎಂದು ಅವರ ಪರ್ಸನಲ್ ಡಾಕ್ಟರ್ ಕ್ಯಾಂಡಿಡ್ ಖಾಸಗಿ ರೇಡಿಯೋವೊಂದಕ್ಕೆ ತಿಳಿಸಿದ್ದರು.
ಬೆರ್ಲುಸ್ಕೋನಿ 60ರ ಹರೆಯ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಪೌರುಷ ಹೊಂದಿದ್ದಾರೆ. ಇವರು ದಿನಕ್ಕೆ ಹಲವು ಬಾರಿ ಸೆಕ್ಸ್ ಮಾಡಬಲ್ಲರು. ದಿನಕ್ಕೆ 4 ಅಥವಾ 5 ಸಲ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ" ಎಂದು ವೈದ್ಯರು ಹೇಳಿದ್ದನ್ನು ಟೆಲಿಗ್ರಾಫ್ ವರದಿ ಮಾಡಿತ್ತು.
ಸಿಲ್ವಿಯೊ ವಿವಾದಿತ ರಾಜಕಾರಣಿಯಾಗೇ ಬೆಳೆದವರು. ಮೈ ಮೇಲೆ ಸಾಕಷ್ಟು ಸೆಕ್ಸ್ ಕ್ಯಾಂಡಲ್ ಕೇಸ್ ಗಳನ್ನು ಹಾಕಿಕೊಂಡರೂ ನಗುನಗುತ್ತಾ ಉಳಿದಿದ್ದಾರೆ. ಇಬ್ಬರು ಯುವತಿಯರು ಸಲಿಂಗಕಾಮ ನಡೆಸುವುದನ್ನು ನೋಡಿ ಮಜಾ ತೆಗೆದುಕೊಳ್ಳುವುದರಲ್ಲೇ ಆನಂದ ಹೊಂದುತ್ತಿದ್ದ ಬೆರ್ಲುಸ್ಕೋನಿ ಸೆಕ್ಸ್ ಪ್ರಕರಣಗಳ ಕಾರಣ ಹುದ್ದೆ ಕಳೆದುಕೊಂಡಿದ್ದು ಈಗ ಇತಿಹಾಸ.












Click it and Unblock the Notifications