ಐರ್ಲೆಂಡ್ ಕಾನೂನಿಗೆ ಗರ್ಭಪಾತ: ಸವಿತಾ ಆತ್ಮಕ್ಕೆ ಶಾಂತಿ

ಇದರೊಂದಿಗೆ ಗರ್ಭಿಣಿಯ ಕೋರಿಕೆಗೆ ಸ್ಪಂದಿಸಿ, ತಕ್ಷಣ ಆಕೆಗೆ ಚಿಕಿತ್ಸೆ ನೀಡಿ, ಗರ್ಭಪಾತಕ್ಕೆ ಅವಕಾಶ ನೀಡುವ ಸಂಬಂಧದ ಕಾನೂನು ತಿದ್ದುಪಡಿಗೆ ಐರ್ಲೆಂಡ್ ಸರಕಾರ ಮುಂದಾಗಿದ್ದು, ಅದಿನ್ನು ಕಾನೂನು ರೂಪದಲ್ಲಿ ಜಾರಿಯಾಗಬೇಕಿದೆಯಷ್ಟೇ. ಆದರೆ ಹಿಂದಿನ ಅಮಾನವೀಯ ಕಾನೂನಿಗೆ ಕನ್ನಡತಿ ಸವಿತಾ ಅವರ ಬದುಕು (ಅಕ್ಟೋಬರ್ 28) ಮುರುಟಿಹೋಯಿತು ಎಂಬುದು ವಿಷಾದನೀಯ.
ಕಾನೂನು ಬದ್ಧ ಗರ್ಭಪಾತಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ವೈದ್ಯಕೀಯ ಸಲಹೆ ಮೇರೆಗೆ ಗರ್ಭಪಾತಕ್ಕೆ ಅವಕಾಶ ಇರುವಂತಹ ಕಾಯಿದೆ ರಚಿಸುವುದಾಗಿ ಸರಕಾರ ಮಂಗಳವಾರ ಘೋಷಿಸಿದೆ.
ಪ್ರಸ್ತುತ ಕ್ಯಾಥೊಲಿಕ್ ಸಂಪ್ರದಾಯದ ಐರ್ಲೆಂಡಿನಲ್ಲಿ ಗರ್ಭಪಾತವನ್ನು ಕ್ರಿಮಿನಲ್ ಅಪರಾಧ ಎಂಬ ವ್ಯಾಖ್ಯಾನಿಸಲಾಗಿದೆ. ಈ ವಿವಾದಾತ್ಮಕ ಕಾಯ್ದೆಗೆ ತಿದ್ದುಪಡಿ ತಂದು, ತಾಯಿಯು ಪ್ರಾಣಾಪಾಯದಲ್ಲಿದ್ದಾಗ ವೈದ್ಯರ ಸಲಹೆ ಮೇರೆಗೆ ಗರ್ಭಪಾತ ನಡೆಸಲು ಅವಕಾಶ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಜೇಮ್ಸ್ ರೇಲ್ಲಿ ಹೇಳಿದ್ದಾರೆ.
'ಗರ್ಭಪಾತ ತಿದ್ದುಪಡಿ ಕಾನೂನು ಸವಿತಾ ಹೆಸರಿನಲ್ಲಿರಲಿ'












Click it and Unblock the Notifications