ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರೆ ಮರೆಗೆ ಸರಿದ ರಂಗಕರ್ಮಿ ಎಎಸ್ ಮೂರ್ತಿ

By Mahesh
|
Google Oneindia Kannada News

ಬೆಂಗಳೂರು, ಡಿ.18: ಹಿರಿಯ ರಂಗಕರ್ಮಿ, ಆಕಾಶವಾಣಿಯ ಈರಣ್ಣ ಎಂದೇ ಖ್ಯಾತರಾಗಿದ್ದ, ಬೀದಿ ರಂಗಭೂಮಿಗೆ ಹೊಸ ಆಯಾಮ ನೀಡಿದ ಹಿರಿಯ ಪತ್ರಕರ್ತ ಎ ಎಸ್ ಮೂರ್ತಿ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಬಹುಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ಮೂರ್ತಿಯವರಿಗೆ 82 ವರ್ಷ ವಯಸ್ಸಾಗಿತ್ತು. ಮಂಗಳವಾರ ಬೆಳಗ್ಗೆ 8.30 ರ ಸುಮಾರಿಗೆ ಹನುಮಂತನಗರದ ಸ್ವಗೃಹದಲ್ಲಿ ಅವರು ನಿಧನರಾಗಿದ್ದಾರೆ.

ಮೃತರ ದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಕೆಎಚ್ ಕಲಾಸೌಧದಲ್ಲಿ ಇರಿಸಲಾಗುತ್ತದೆ. ಸಂಜೆ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ಹೇಳಿದೆ.

'ಆಕಾಶವಾಣಿ ಈರಣ್ಣ' ಎಂದು ಪ್ರಸಿದ್ಧರಾಗಿದ್ದ ಮೂರ್ತಿ ಅವರು ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಲಾಮಂದಿರದ ಸ್ಥಾಪಕ ಅ.ನ. ಸುಬ್ಬರಾಯರು, ತಾಯಿ ಗೌರಮ್ಮ ಅವರ ಪುತ್ರರಾಗಿ ಎ.ಎಸ್. ಮೂರ್ತಿಯವರು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ಕ್ಯಾಲಿಕೊ ಮಿಲ್ಸ್‌ನಲ್ಲಿ ಕೆಲಕಾಲ ಉದ್ಯೋಗ ಮಾಡಿಕೊಂಡಿದ್ದರು. ತಂದೆಯಿಂದ ರಕ್ತಗತವಾಗಿ ಬಂದ ಕಲೆ, ಸಾಹಿತ್ಯ, ನಾಟಕಗಳನ್ನು ಸಮರ್ಥವಾಗಿ ಮುಂದಿನ ಪೀಳಿಗೆಗೆ ದಾಟಿಸಿದವರು ಎಎಸ್ ಮೂರ್ತಿ.

ಆಕಾಶವಾಣಿಯಲ್ಲಿ ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ ನಡೆಸಿದ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದರು. ವೆಂಕಣ್ಣನ ಸಾಹಸಗಳು, ಸಮಾಜದ ಪ್ರಸ್ತುತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತಿದ್ದ, ಜನಪದ ಕಾಳಜಿಯುಳ್ಳ ಇವರ 'ಒಂದು ಮಾತು' ಕಾರ್ಯಕ್ರಮ ಅತ್ಯಂತ ಜನಪ್ರಿಯತೆ ಪಡೆದಿದೆ. ಈರಣ್ಣನಾಗಿ ಎಎಸ್ ಮೂರ್ತಿ ಇಂದಿಗೂ ಫೇಮಸ್

ತಿ.ತಾ.ಶರ್ಮ, ವೈಎನ್ಕೆ, ಶ್ರೀರಂಗ, ಲಂಕೇಶ್, ದಾರರಥಿ ದೀಕ್ಷಿತ್ ಮುಂತಾದವರ ನಾಟಕಗಳನ್ನು ರಂಗಕ್ಕೆ ಬಂದ ಕೀರ್ತಿ ಮೂರ್ತಿ ಅವರಿಗೆ ಸಲ್ಲುತ್ತದೆ.

1964ರಲ್ಲಿ ಅಭಿನಯ ತರಂಗ ರಂಗಶಾಲೆ ಆರಂಭಿಸಿದರು. ಸಾಹಿತ್ಯ, ಸಂಸ್ಕೃತಿ ಅಧ್ಯಯನ, ರಂಗಶಾಲೆಯಾಗಿ ಇದು ರೂಪುಗೊಂಡಿತು. ನಂತರ ಪ್ರಾರಂಭಿಸಿದ್ದು ಬಿಂಬ ಸಂಸ್ಥೆ. ಹನುಮಂತನಗರ ಮತ್ತು ವಿಜಯನಗರದಲ್ಲಿ ಮಕ್ಕಳಿಗಾಗಿ ರೂಪಿಸಿದ ರಂಗಭೂಮಿ.

ಅಭಿನಯ ತರಂಗದಿಂದ ಭಾನುವಾರದ ರಂಗಶಾಲೆಯ ಪ್ರಾಂಶುಪಾಲರಾಗಿ ಅಶೋಕಬಾದರದಿನ್ನಿ, ಬಿ. ಚಂದ್ರಶೇಖರ್, ಎಚ್.ಜಿ. ಸೋಮಶೇಖರ್‌ರಾವ್, ಗೌರಿದತ್ತು ಮುಂತಾದವರು ಕಾಣಿಸಿಕೊಂಡಿದ್ದಾರೆ.

ಬೀದಿನಾಟಕಗಳಿಗೆ ಹೊಸ ಆಯಾಯ ನೀಡಿದ ಮೂರ್ತಿ ಅವರು 'ಗೆಳೆಯರ ಗುಂಪು' ರಾಜಾಜಿನಗರದ ರಾಮಮಂದಿರದ ಬಳಿ ಪ್ರದರ್ಶಿಸಿದ ಮೊದಲ ನಾಟಕ 'ಕಟ್ಟು'. ನಂತರ ಹಲವಾರು ನಾಟಕಗಳ ಪ್ರದರ್ಶನ. ಪಪೆಟ್‌ಲ್ಯಾಂಡ್, ಜನಪ್ರಿಯತೆ ಗಳಿಸಿತ್ತು.

* ಅಧ್ಯಕ್ಷತೆ, ಕುಡ್ಕ, ಹುಚ್ಚ, ನಿರೀಕ್ಷೆ, ಶುದ್ಧಶುಂಠಿ, ಲೇಡೀಸ್ ಓನ್ಲಿ, ಡನ್‌ಲಪ್‌ಗರ್ಲ್, ಚೈನಾದೋಸ್ತಿ, ಜನ್ಮಾಂತ್ರೀಯ ಮುಂತಾದ 80ಕ್ಕೂ ಅಧಿಕ ನಾಟಕಗಳನ್ನು ರಚಿಸಿದ್ದಾರೆ.
* ಮಕ್ಕಳ ನಾಟಕಗಳು-ಮಲೆಯ ಮಕ್ಕಳು, ಸೋಲದ ಸೋಲಿಗರು, ಜಂಬೂಸವಾರಿ ಮುಂತಾದ 17 ನಾಟಕಗಳು.
* ಬೊಂಬೆನಾಟಕ-ಸಂಗೀತ ಸಂಸ್ಕಾರ, ಟ್ವಿಂಕಲ್ ಟ್ವಿಂಕಲ್
* ಬೀದಿನಾಟಕಗಳು-ಕಟ್ಟು, ನಿಜವ ಹೇಳಬಲ್ಲಿರಾ, ಬಸ್‌ಸ್ಟಾಪ್, ಕುರ್ಚಿ ಮೊದಲಾದ 27 ನಾಟಕ
* ರೇಡಿಯೋ ನಾಟಕಗಳು, ಚಲನಚಿತ್ರಗಳಿಗೆ ಬರೆದ ಸಂಭಾಷಣೆ, ನಟನೆ. ಟಿ.ವಿ. ಧಾರಾವಾಹಿ, ಚಲನಚಿತ್ರಗಳಲ್ಲೂ ನಟಿಸಿದ್ದಾರೆ.
* ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಪ್ರಶಸ್ತಿ ಸಂದೇಶ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ರಂಗ ನಿರಂತರ ಪ್ರಶಸ್ತಿ ಮುಂತಾದವು ಸಂದಿದೆ.

English summary
We announce the sad demise of Theater artist, journalist, AIR news presenter 'eeranna' A S Murthy ( 83) in Hanumanthanagar Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X