Amarica Military: 26 ವರ್ಷಗಳಲ್ಲಿ 10 ದೇಶಗಳ ಮೇಲೆ ದಾಳಿ, ಯುದ್ಧ ಮಾಡಿದ ಅಮೆರಿಕ: ಇದಕ್ಕೆ ಮಾಡಿದ ಖರ್ಚು, ಮೃತಪಟ್ಟವರೆಷ್ಟು
Amarica Military: ವಿಶ್ವದ ದೊಡ್ಡಣ್ಣ ಎಂದು ಹೇಳಿಕೊಳ್ಳುವ ಅಮೆರಿಕ ಇಲ್ಲಿಯ ವರೆಗೆ ಕಾಲಿಟ್ಟ ದೇಶಗಳಲ್ಲೆಲ್ಲವೂ ಕೌರ್ಯವನ್ನೇ ಮೆರೆದಿದೆ. ವಿಶ್ವದ ಸೂಪರ್ ನೇಷನ್ ಎಂದು ಹೇಳಿಕೊಳ್ಳುವ ಅಮೆರಿಕ 20ನೇ ಶತಮಾನದಿಂದಲೂ ಹಲವು ದೇಶಗಳ ತನ್ನ ಸ್ವಾರ್ಥಕ್ಕಾಗಿ ದಾಳಿಗಳನ್ನು ಮಾಡಿಕೊಂಡು ಬಂದಿದೆ. ವಿಶ್ವದ ಶಾಂತಿಯ ಹೆಸರಿನಲ್ಲಿ ಅಮೆರಿಕ ಮಾಡಿರುವ ಬಾಂಬ್ ದಾಳಿಗಳಿಂದ ಇಂದಿಗೂ ಹಲವು ದೇಶಗಳು ಚೇತರಿಸಿಕೊಂಡಿಲ್ಲ. ಅಮೆರಿಕ 2001ರಿಂದ 10ಕ್ಕೂ ಹೆಚ್ಚು ದೇಶಗಳ ಮೇಲೆ ದಾಳಿ ಮಾಡಿದೆ. ಆ ದೇಶಗಳಲ್ಲಿ ಸಾವಿರಾರು ಜನ ಅಮೆರಿಕದ ದಾಳಿಯಿಂದ ಮೃತಪಟ್ಟಿದ್ದಾರೆ. ದೇಶದ ಆರ್ಥಿಕತೆ ತೀವ್ರ ಕುಸಿತ ಕಂಡಿದೆ, ಪರಿಸರ ಸರ್ವನಾಶವಾಗಿದೆ. ಈ ಯುದ್ಧಗಳಲ್ಲಿ ಕೆಲವು ಪ್ರಮುಖ ಉಗ್ರರನ್ನು ಹೊಡೆದುರುಳಿಸುವಲ್ಲಿಯೂ ಅಮೆರಿಕ ಯಶಸ್ವಿಯಾಗಿದೆ. ಈ ರೀತಿ ಅಮೆರಿಕ ಕಳೆದ 26 ವರ್ಷಗಳಲ್ಲಿ ಸಾರಿದ ಯುದ್ಧ, ಬಾಂಬ್ ದಾಳಿಗಳ ವಿವರ ಇಲ್ಲಿದೆ.
ಅಮೆರಿಕ 20ನೇ ಶತಮಾನದಿಂದೀಚೆಗೆ ವಿಶ್ವದಾದ್ಯಂತ ಹಲವು ದೇಶಗಳ ಮೇಲೆ ನೇರ ಮಿಲಿಟರಿ ದಾಳಿ, ಆಕ್ರಮಣಕಾರಿ ಬಾಂಬ್ ದಾಳಿಗಳನ್ನು ನಡೆಸಿದೆ. ಅದರಲ್ಲಿ ಪ್ರಮುಖವಾಗಿ ವಿಯೆಟ್ನಾಂ, ಇರಾಕ್, ಅಫ್ಘಾನಿಸ್ತಾನ, ಲಿಬಿಯಾ, ಸಿರಿಯಾ, ಯುಗೊಸ್ಲಾವಿಯಾ, ಪನಾಮ, ಮತ್ತು ಗ್ರೆನಡಾ (ದ್ವೀಪ ರಾಷ್ಟ್ರ) ಮುಂತಾದ ದೇಶಗಳ ಮೇಲೆ ಸೇನಾ ಕಾರ್ಯಾಚರಣೆಯನ್ನು ಸಹ ನಡೆಸಿದೆ.

ಅಮೆರಿಕ ಸೇನೆ ದಾಳಿ ನಡೆಸಿದ ಪ್ರಮುಖ ದೇಶಗಳು
ಏಷ್ಯಾದಲ್ಲಿ ನಡೆಸಿದ ದಾಳಿಗಳು: ವಿಯೆಟ್ನಾಂ, ಕೊರಿಯಾ, ಇರಾಕ್, ಅಫ್ಗಾನಿಸ್ತಾನ, ಸಿರಿಯಾ, ಯೆಮೆನ್, ಪಾಕಿಸ್ತಾನ ಹಾಗೂ ಫಿಲಿಪೈನ್ಸ್ ದೇಶಗಳ ಮೇಲೆ ದಾಳಿ ಮಾಡಿದೆ.
ಮಧ್ಯಪ್ರಾಚ್ಯ: ಇರಾಕ್, ಲಿಬಿಯಾ, ಸಿರಿಯಾ, ಯೆಮೆನ್ ಹಾಗೂ ಇರಾನ್.
ಲ್ಯಾಟಿನ್ ಅಮೆರಿಕ/ಕ್ಯಾರಿಬಿಯನ್: ಕ್ಯೂಬಾ, ಪನಾಮ, ಗ್ರೆನಡಾ, ಡೊಮಿನಿಕನ್ ರಿಪಬ್ಲಿಕ್, ನಿಕರಾಗುವಾ ಹಾಗೂ ಗ್ವಾಟೆಮಾಲಾ
ಯೂರೋಪ್/ಇತರೆ: ಯುಗೊಸ್ಲಾವಿಯಾ, ಕೊಸೊವೊ, ಸೊಮಾಲಿಯಾ, ಸುಡಾನ್ ದೇಶಗಳ ಮೇಲೂ ಅಮೆರಿಕ ದಾಳಿ ಮಾಡಿತ್ತು.
Amarica Military ಅಮೆರಿಕ ದಾಳಿಗಳ ಹಿನ್ನೆಲೆ
ವಿಶ್ವದಲ್ಲಿ ತಾನು ಸೂಪರ್ ನೇಷನ್ ಹಾಗೂ ಸೂಪರ್ ನೇಷನ್ ಆಗಿಯೇ ಮುಂದುವರಿಯಬೇಕು ಎನ್ನುವುದು ಅಮೆರಿಕದ ಆಸೆ. ಈ ಆಸೆಗೆ ಅಮೆರಿಕ ನಡೆಸಿದ ದಾಳಿಗಳ ಪಟ್ಟಿ ದೊಡ್ಡದಿದೆ. 2001ರ ಸೆಪ್ಟೆಂಬರ್ 11ರಂದು ನ್ಯೂಯಾರ್ಕ್ ಮತ್ತು ಅಮೆರಿಕದ ರಾಜಧಾನಿಯ ಮೇಲಿನ ನಡೆದ ದಾಳಿಯ ನಂತರ ಅಮೆರಿಕ ಮೂರು ಪೂರ್ಣ ಪ್ರಮಾಣದ ಯುದ್ಧಗಳಲ್ಲಿ ಭಾಗಿಯಾಗಿದೆ. ಡ್ರೋನ್ ದಾಳಿಯಿಂದ ಆಕ್ರಮಣಕಾರಿ ಬಾಂಬ್ ದಾಳಿಗಳು ಸಹ ಇದರಲ್ಲಿ ಸೇರಿವೆ. ಕನಿಷ್ಠ 10 ದೇಶಗಳ ಮೇಲೆ ಬಾಂಬ್
ದಾಳಿ ಮಾಡಲಾಗಿದೆ. ಅಲ್ಲದೆ ಇದರಲ್ಲಿ ಕೆಲವೊಮ್ಮೆ ಒಂದೇ ವರ್ಷದ ಅವಧಿಯಲ್ಲಿ ವಿವಿಧ ದೇಶಗಳ ಮೇಲೆ ಹಲವು ಬಾರಿ ಬಾಂಬ್ ದಾಳಿ ಮಾಡಿರುವುದು ಸಹ ಇದೆ.
2001ರಿಂದ ಕನಿಷ್ಠ 10 ದೇಶಗಳ ಮೇಲೆ ದಾಳಿ
ಇನ್ನು ಅಮೆರಿಕ 2001ರಿಂದ ಕನಿಷ್ಠ 10ಕ್ಕೂ ಹೆಚ್ಚು ದೇಶಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಅಫ್ಘಾನಿಸ್ತಾನ, ಇರಾಕ್, ಯೆಮೆನ್, ಪಾಕಿಸ್ತಾನ, ಸೊಮಾಲಿಯಾ, ಲಿಬಿಯಾ, ಸಿರಿಯಾ, ವೆನೆಜುವೆಲಾ, ನೈಜೀರಿಯಾ ಹಾಗೂ ಇರಾನ್ ದೇಶಗಳು ಸೇರಿವೆ.
ಅಮೆರಿಕ ದಶಕಗಳ ನಡೆಸಿದ ಯುದ್ಧದಲ್ಲಿ ಮೃತಪಟ್ಟವರು
ಅಮೆರಿಕ ವಿಶ್ವದ ಶಾಂತಿಗಾಗಿ ಎನ್ನುವ ಹೆಸರಿನಲ್ಲಿ ನಡೆಸಿದ ದಾಳಿಗಳಿಂದ ಮಕ್ಕಳು ಸೇರಿದಂತೆ ಸಾವಿರಾರು ಜನ ಮೃತಪಟ್ಟಿದ್ದಾರೆ. ಅಂದಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು ಭಯೋತ್ಪಾದನೆಯ ಮೇಲಿನ ಯುದ್ಧ ಎನ್ನುವ ಹೆಸರಿನಲ್ಲಿ ಜಾಗತಿಕ ಮಿಲಿಟರಿ ಅಭಿಯಾನವನ್ನು ಪ್ರಾರಂಭಿಸಿದ್ದರು. ಇದು ಅಮೆರಿಕದ ವಿದೇಶಾಂಗ ನೀತಿಯನ್ನು ಮರುರೂಪಿಸಿತು ಮತ್ತು ಹಲವಾರು ದೇಶಗಳಲ್ಲಿ ಯುದ್ಧಗಳು, ಆಕ್ರಮಣಗಳು ಮತ್ತು ವಾಯುದಾಳಿಗಳನ್ನು ನಡೆಸುವುದಕ್ಕೆ ಕಾರಣವಾಯಿತು.
2001ರಿಂದ ಅಮೆರಿಕ ನೇತೃತ್ವದಲ್ಲಿ ನಡೆದ ದಾಳಿಗಳಲ್ಲಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಅಘ್ಗಾನಿಸ್ತಾನ, ಪಾಕಿಸ್ತಾನ, ಇರಾಕ್, ಸಿರಿಯಾ ಹಾಗೂ ಯೆಮೆನ್ ದೇಶಗಳಲ್ಲಿ 940,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆಹಾರ, ಆರೋಗ್ಯ ರಕ್ಷಣೆ ಹಾಗೂ ಯುದ್ಧ ಸಂಬಂಧಿತ ಕಾಯಿಲೆಗಳ ಸೇರಿದಂತೆ ಹಲವು ಸಮಸ್ಯೆಗಳನ್ನು ಸಹ ಈ ದೇಶಗಳು ಎದುರಿಸಿವೆ. ಅಮೆರಿಕವು ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಸಿದ ಈ ಸಂಘರ್ಷಗಳಲ್ಲಿ ಅಂದಾಜು $5.8 ಟ್ರಿಲಿಯನ್ (493 ಲಕ್ಷ ಕೋಟಿ ರೂ.)ಖರ್ಚು ಮಾಡಿದೆ. ಇನ್ನು ಅಮೆರಿಕ 2001 ನಡೆಸಿದ ಯುದ್ಧಗಳ ಒಟ್ಟು ಅಂದಾಜು ವೆಚ್ಚವೇ ಬರೋಬ್ಬರಿ (8,00,000 ಕೋಟಿ ರೂ.) ಆಗುತ್ತದೆ.
ಅಫ್ಘಾನಿಸ್ತಾನ ಯುದ್ಧ (2001-2021)
ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ನಡೆಸಿದ ಬಹದೊಡ್ಡ ದಾಳಿಗಳಲ್ಲಿ ಅಫ್ಗಾನಿಸ್ತಾನದ ಮೇಲಿನ ದಾಳಿಯೂ ಸಹ ಪ್ರಮುಖವಾಗಿದೆ. ಈ ಭಾಗದಲ್ಲಿ ಅಲ್-ಖೈದಾ ಉಗ್ರಗಾಮಿ ಸಂಘಟನೆ ಸರ್ವನಾಶಕ್ಕೆ ಅಮೆರಿಕ ಮುಂದಾಗಿತ್ತು. ಈ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್‌ನನ್ನು ಕೊಲ್ಲುವಲ್ಲಿಯೂ ಅಮೆರಿಕ ಯಶಸ್ವಿಯಾಗಿತ್ತು. ಆದಾಗ್ಯೂ, ಸಶಸ್ತ್ರ ಹೊಂದಿದ್ದ ಅಲ್-ಖೈದಾ ಉಗ್ರಗಾಮಿ ಸಂಘಟನೆಯ ಉಗ್ರಗಾಮಿಗಳು ಯುಎಸ್ ಮತ್ತು ಮಿತ್ರ ಪಡೆಗಳ ವಿರುದ್ಧ ದೀರ್ಘಕಾಲದ ಪ್ರತಿರೋಧವನ್ನು ನಡೆಸಿದವು.
ಈ ಯುದ್ಧವು ಯುಎಸ್ ಇತಿಹಾಸದಲ್ಲಿ ಅತ್ಯಂತ ದೀರ್ಘವಾದ ಸಂಘರ್ಷ ಎಂದು ಪರಿಗಣಿಸಲಾಗುತ್ತದೆ. ಈ ಯುದ್ಧ ಪೂರ್ಣಗೊಳ್ಳುವ ವೇಳೆಗೆ ಅಮೆರಿಕದ ನಾಲ್ಕು ಅಧ್ಯಕ್ಷರು ಬದಲಾಗಿದ್ದರು. 2021 ರಲ್ಲಿ ಅಂತಿಮವಾಗಿ ಯುದ್ಧ ಮುಗಿಯುವ ವೇಳೆಗೆ 20 ವರ್ಷಗಳೇ ಕಳೆದಿದ್ದವು. ಈ ಯುದ್ಧದ ನಂತರ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿತು.
ಬ್ರೌನ್ ವಿಶ್ವವಿದ್ಯಾಲಯದ ಯುದ್ಧ ವೆಚ್ಚ ಯೋಜನೆಯ ವಿಶ್ಲೇಷಣೆಯ ಪ್ರಕಾರ, ಯುದ್ಧದಲ್ಲಿ ನೇರ ಪರಿಣಾಮವಾಗಿ ಅಂದಾಜು 241,000 ಜನರು ಸಾವನ್ನಪ್ಪಿದ್ದಾರೆ. ಯುಎಸ್ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳ ಕನಿಷ್ಠ 3,586 ಸೈನಿಕರು ಯುದ್ಧದಲ್ಲಿ ಕೊಲ್ಲಲ್ಪಟ್ಟರು.
ಇರಾಕ್ ಯುದ್ಧ (2003-2011)
2003ರ ಮಾರ್ಚ್ 20ರಂದು ಜಾರ್ಜ್ ಬುಷ್ ಎರಡನೇ ಯುದ್ಧವನ್ನು ಪ್ರಾರಂಭಿಸಿದ್ದರು. ಈ ಬಾರಿ ನಡೆದ ಯುದ್ಧವು ಇರಾಕ್ ದೇಶದ ವಿರುದ್ಧವಾಗಿತ್ತು. ಅಲ್ಲಿನ ಅಧ್ಯಕ್ಷ ಸದ್ದಾಂ ಹುಸೇನ್ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ, ಎಂದು ದೂರಿದ್ದ ಅಮೆರಿಕ ಈ ದೇಶದ ಮೇಲೆ ದಾಳಿ ಮಾಡಿತ್ತು. ಆದರೆ ಅಂತಿಮವಾಗಿ ಅಮೆರಿಕದ ಹೇಳಿಕೆಯು ಸುಳ್ಳು ಎಂದು ಸಾಬೀತಾಯಿತು. 2023ರ ಮೇ 1ರಂದು ಜಾರ್ಜ್ ಬುಷ್ ಉದ್ದೇಶ ಪೂರ್ಣಗೊಂಡಿದೆ ಮತ್ತು ಇರಾಕ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಗಳು ಅಂತ್ಯವಾಗಿದೆ ಎಂದು ಘೋಷಿಸಿದ್ದರು. ಆದಾಗ್ಯೂ ನಂತರದ ವರ್ಷಗಳಲ್ಲಿ ಸಶಸ್ತ್ರ ಗುಂಪುಗಳಿಂದ ಹಿಂಸಾಚಾರ ಮತ್ತು ISIL (Islamic State of Iraq and the Levant) ಉಗ್ರಗಾಮಿ ಸಂಘಟನೆ ಉದಕ್ಕೆ ಕಾರವಾಗಿತ್ತು.
ಅಮೆರಿಕ ನಡೆಸಿದ ಡ್ರೋನ್ ಯುದ್ಧಗಳು
ಇನ್ನು ಅಮೆರಿಕ ಕೆಲವೊಂದು ಪೂರ್ಣ ಪ್ರಮಾಣವಲ್ಲದ ಅಥವಾ ಯುದ್ಧವಲ್ಲ ದಾಳಿಗಳನ್ನೂ ಸಹ ಮಾಡಿದೆ. 2000ರ ದಶಕದ ಮಧ್ಯಭಾಗದಲ್ಲಿ ಸಿಐಎ ಅಫ್ಗಾನ್ ಗಡಿಯುದ್ದಕ್ಕೂ ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ಡ್ರೋನ್ ದಾಳಿಗಳನ್ನು ಪ್ರಾರಂಭಿಸಿತ್ತು. ಅಲ್-ಖೈದಾ ಮತ್ತು ತಾಲಿಬಾನ್ ಉಗ್ರರು ಇಲ್ಲಿ ನೆಲೆಸಿದ್ದಾರೆ ಎಂದು ಹೇಳಿಕೊಂಡಿತ್ತು. ಒಬಾಮಾ ಅವರು ಪಾಕಿಸ್ತಾನದಲ್ಲಿ ಡ್ರೋನ್ ದಾಳಿಗಳನ್ನು ವಿಸ್ತರಿಸಿದ್ದರು. ಅದೇ ಸಮಯದಲ್ಲಿ, ಶಂಕಿತ ಅಲ್-ಖೈದಾ ಅಂಗಸಂಸ್ಥೆಗಳ ವಿರುದ್ಧ ಯುಎಸ್ ಸೊಮಾಲಿಯಾದಲ್ಲಿ ವಾಯುದಾಳಿಗಳನ್ನು ನಡೆಸಿತ್ತು. ಇದೇ ಸಂದರ್ಭದಲ್ಲಿ ಯೆಮೆನ್‌ನಲ್ಲಿ, ಯುಎಸ್ ಪಡೆಗಳು ಅಲ್-ಖೈದಾ ನಾಯಕರ ವಿರುದ್ಧ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದವು. ಇದು ಭಾರೀ ಅನಾಹುತಕ್ಕೆ ಕಾರಣವಾಗಿತ್ತು.
ಲಿಬಿಯಾ ವಿರುದ್ಧ ಅಸಮಾಧಾನ
2011 ರಲ್ಲಿ ಲಿಬಿಯಾ ನಾಯಕ ಮುಅಮ್ಮರ್ ಗಡಾಫಿ ವಿರುದ್ಧದ ದಂಗೆಯ ಸಮಯದಲ್ಲಿ, ಯುಎಸ್ ಲಿಬಿಯಾದಲ್ಲಿ ನ್ಯಾಟೋ ನೇತೃತ್ವದ ಹಸ್ತಕ್ಷೇಪ ವ್ಯಕ್ತಪಡಿಸಿತ್ತು. ಅಮೆರಿಕದ ಪಡೆಗಳು ವಾಯು ಮತ್ತು ಕ್ಷಿಪಣಿ ದಾಳಿಗಳನ್ನು ಪ್ರಾರಂಭಿಸಿದ್ದವು. ನಂತರ ಗಡಾಫಿಯನ್ನು ಪದಚ್ಯುತಗೊಳಿಸಿ ಕೊಲ್ಲಲಾಗಿತ್ತು. ಮುಂದೆ ಲಿಬಿಯಾದಲ್ಲಿ ಅಸ್ಥಿರತೆ ಮತ್ತು ಬಣ ಹೋರಾಟ ಶುರುವಾಯಿತು.
ಇರಾಕ್ ಮತ್ತು ಸಿರಿಯಾ
2014 ರಿಂದ ಅಮೆರಿಕ ISIL (ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಲೆವಾಂಟ್) ಇರಾಕ್ ಮತ್ತು ಸಿರಿಯಾದಲ್ಲಿ ನೆಲೆಸಿರುವ ಉಗ್ರಗಾಮಿ ಸಂಘಟನೆಯನ್ನು ಸರ್ವನಾಶ ಮಾಡುವುದಾಗಿ ಹೇಳಿ, ಸಿರಿಯಾದಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಮಧ್ಯಪ್ರವೇಶಿಸಿತು. ಇರಾಕ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಆಧರಿಸಿ, ಅಮೆರಿಕವು ಸಿರಿಯಾದಲ್ಲಿ ನಿರಂತರ ವಾಯುದಾಳಿಗಳನ್ನು ನಡೆಸಿತು. ಸ್ಥಳೀಯ ಪಾಲುದಾರ ಪಡೆಗಳನ್ನು ಬೆಂಬಲಿಸಿತು. ಇದು ಈ ಭಾಗದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಯಿತು. ಹಲವರು ತಮ್ಮ ನೆಲೆಗಳನ್ನು ಕಳೆದುಕೊಂಡರು.
ಇರಾಕ್‌ನಲ್ಲಿ, ಅಮೆರಿಕ ಪಡೆಗಳು ಇರಾಕಿ ಪಡೆಗಳಿಗೆ ಸಲಹೆ ನೀಡಿತು. ಇರಾನ್‌ನ ಪ್ರಭಾವವನ್ನು ಎದುರಿಸಲು ಪ್ರಯತ್ನಿಸಿತು. ಟ್ರಂಪ್ ಆದೇಶದ ಮೇಲೆ 2020 ರ ದಾಳಿಯಲ್ಲಿ ಇರಾನಿನ ಜನರಲ್ ಖಾಸೆಮ್ ಸೊಲೈಮಾನಿಯನ್ನು ಅಮೆರಿಕ ಪಡೆಗಳು ಕೊಂದಿದ್ದವು.
ಸುಳ್ಳಾಯ್ತು ಅಮೆರಿಕ ಅಧ್ಯಕ್ಷ ನೀಡಿದ್ದ ಭರವಸೆ
ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನು ಎರಡನೇ ಬಾರಿ ಅಧಿಕಾರಕ್ಕೆ ಬಂದರೆ ಅಮೆರಿಕ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸುವುದಾಗಿ ಹೇಳಿತ್ತು. ಇರಾನ್ vs ಇಸ್ರೇಲ್, ರಷ್ಯಾ vs ಉಕ್ರೇನ್ ದೇಶಗಳ ನಡುವಿನ ಯುದ್ಧವನ್ನು ನಿಲ್ಲಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ವರ್ಷದ ಒಳಗೆ ವಿಶ್ವದ ವಿವಿಧ ದೇಶಗಳಿಗೆ ಸಂಕಷ್ಟ ಎದುರಾಯ್ತು.
ಅಮೆರಿಕ ನಡೆಸಿದ ಯುದ್ಧಗಳಿಗೆ ಸಂಬಂಧಿಸಿದಂತೆ ಜನ ಹೆಚ್ಚಾಗಿ ಕೇಳುವ ಪ್ರಶ್ನೆಗಳು
1. ಅಮೆರಿಕ 2001 ನಂತರ ಯಾವ ದೇಶಗಳ ಮೇಲೆ ದಾಳಿ ಮಾಡಿದೆ
ಅಫ್ಗಾನಿಸ್ತಾನ, ಇರಾಕ್, ಸಿರಿಯಾ, ಲಿಬಿಯಾ ಹಾಗೂ ಯೆಮೆನ್ ಸೇರಿದಂತೆ ಹಲವು ದೇಶಗಳಲ್ಲಿ ಅಮೆರಿಕ ಸೇನಾ ದಾಳಿ ಮತ್ತು ವಾಯುದಾಳಿಗಳನ್ನು ನಡೆಸಿದೆ.
2. ಅಫ್ಗಾನಿಸ್ತಾನ ಯುದ್ಧವನ್ನು ಅಮೆರಿಕ ಯಾಕೆ ಆರಂಭಿಸಿತು
2001ರ ಸೆಪ್ಟೆಂಬರ್ 11 ಉಗ್ರ ದಾಳಿಯ ನಂತರ ಅಲ್-ಖೈದಾ ಸಂಘಟನೆ ವಿರುದ್ಧ ಅಮೆರಿಕ ಅಫ್ಗಾನಿಸ್ತಾನದಲ್ಲಿ ಯುದ್ಧ ಆರಂಭಿಸಿತು.
3. ಇರಾಕ್ ಯುದ್ಧಕ್ಕೆ ಪ್ರಮುಖ ಕಾರಣವೇನು
ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಅಮೆರಿಕ 2003ರಲ್ಲಿ ದಾಳಿ ನಡೆಸಿತು.
4. ಅಮೆರಿಕದ ಯುದ್ಧಗಳಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ
ಅಂದಾಜು 9 ಲಕ್ಷಕ್ಕೂ ಹೆಚ್ಚು ಜನರು ಈ ಯುದ್ಧಗಳು ಮತ್ತು ದಾಳಿಗಳಿಂದ ಮೃತಪಟ್ಟಿದ್ದಾರೆ.
5. ಅಮೆರಿಕ ಯುದ್ಧಗಳಿಗೆ ಎಷ್ಟು ಹಣ ಖರ್ಚು ಮಾಡಿದೆ
2001 ನಂತರ ನಡೆದ ಯುದ್ಧಗಳಿಗೆ ಅಮೆರಿಕ ಸುಮಾರು 5.8 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚು ಹಣ ಖರ್ಚು ಮಾಡಿದೆ.
-
Premium Petrol Price: ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರ ಏರಿಕೆ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಇರಾನ್ ಸೇನೆಗೆ ಎಚ್ಚರಿಕೆ ಸಂದೇಶ ರವಾನಿಸಿದ ಸೌದಿ ಅರೇಬಿಯಾ, ಪರಿಸ್ಥಿತಿ ಭೀಕರ | Iran Conflict -
200 ಸೇನಾ ತಜ್ಞರನ್ನ ಮಧ್ಯಪ್ರಾಚ್ಯಕ್ಕೆ ಕಳುಹಿಸಿದ ಉಕ್ರೇನ್, ನಿಮಗೆ ಟೈಂ ಬಂತು ಅಂತಿದ್ದಾರೆ ಜನ | Iran Conflict -
ಮಧ್ಯಪ್ರಾಚ್ಯ ಮುಳುಗುವಂತೆ ಮಾಡುತ್ತಿದೆ ಇರಾನ್ ಸಂಘರ್ಷ, ಅಮೆರಿಕದ ಹೊಸ ರಣತಂತ್ರ | Iran Conflict -
ಇರಾನ್ ದೇಶದ ಸಾಲು ಸಾಲು ನಾಯಕರ ಕಥೆ ಮುಗಿಯಿತು, ಯುದ್ಧ ಮತ್ತಷ್ಟು ಜೋರಾಯ್ತು | Iran Conflict -
ಇರಾನ್ ಸಂಘರ್ಷದ ಪರಿಣಾಮ ಹೊಸ ಸಮುದ್ರ ಮಾರ್ಗ ರೂಪಿಸಲು ಶುರುವಾಯ್ತು ಒತ್ತಡ... Iran Conflict -
19,000 ರೂಪಾಯಿ ತಲುಪುವ ಭೀತಿಯಲ್ಲಿ ಕಚ್ಚಾತೈಲ ಬೆಲೆ, ದಿಢೀರ್ ಪೆಟ್ರೋಲ್ & ಡೀಸೆಲ್ ಸಂಚಲನ... Crude Oil -
ಇರಾನ್ ಸಂಘರ್ಷ ಪರಿಣಾಮ ತೈಲ ಸಂಸ್ಕರಣಾ ಘಟಕಗಳೇ ಉಡೀಸ್, ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯ ಭೀತಿ... Iran Conflict -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ













Click it and Unblock the Notifications