ಚುನಾವಣೆ ಅಖಾಡದಲ್ಲಿ ನಾನಾ ಕೋಣಗಳ ಆರ್ಭಟ

ನಡೆಸಲಿ ಪಾಪ, ಯಾರದೇನೂ ಅಭ್ಯಂತರವಿಲ್ಲ. ಆದರೆ ಅನೇಕ ಪಕ್ಷಗಳ ನಾಯಕರು ತಮ್ಮ ಪಕ್ಷದ ವತಿಯಿಂದ ಎಲ್ಲ 224 ಸ್ಥಾನಗಳಿಗೂ ಅಭ್ಯರ್ಥಿಗಳನ್ನೂ ನಿಲ್ಲಿಸುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ.
ಸಾಮಾನ್ಯವಾಗಿ, ಈ ಹಿಂದೆ ಚುನಾವಣೆಗಳೆಂದರೆ ಮುಖಾಮುಖಿ ಅಥವಾ ತ್ರಿಕೋಣ ಅಬ್ಬಬ್ಬಾ ಅಂದರೆ ಚತುಷ್ಕೋನ ಸ್ಪರ್ಧೆ ಏರ್ಪಡುತ್ತಿದ್ದವು. ಆದರೆ ಈ ಬಾರಿ ಇದೇನಿದು ಕೋನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊನೆಗೆ ಕೋಣ ಯಾರು ಎಂಬುದನ್ನು ಮತದಾರ ಪ್ರಭು ನಿರ್ಧರಿಸಬೇಕಾಗುತ್ತದೆ.
ಕುತೂಹಲದ ಸಂಗತಿಯೆಂದರೆ ಇವರು ಸಾಮೂಹಿಕಕೋಣ ಸ್ಪರ್ಧೆಯೊಂದಿಗೆ ಕಣಕ್ಕಿಳಿಯುತ್ತೇವೆ ಎಂದಷ್ಟೇ ಹೇಳುತ್ತಿಲ್ಲ. ಮೆಜಾರಿಟಿಯೊಂದಿಗೆ ಗೆಲ್ಲುತ್ತೇವೆ. ಮತ್ತು ಇಂತಿಷ್ಟೇ ಸ್ಥಾನಗಳನ್ನು ಬಾಚಿಕೊಳ್ಳುತ್ತೇವೆ ಎಂದೂ roof top ನಿಂದ ಹೇಳುತ್ತಿದ್ದಾರೆ. ಮೆಜಾರಿಟಿಯಲ್ಲಿರುವ ಪ್ರಜ್ಞಾವಂತ ಮತದಾರ ಪ್ರಬುದ್ಧನಾಗಿದ್ದು ಯಾರಿಗೆ ಯಾವ ಸ್ಥಾನ ನೀಡಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿಯಾಗಿದೆ ಎಂಬುದು ಈ ಜಾಣ ರಾಜಕಾರಣಿಗಳಿಗೆ ತಿಳಿದಂತಿಲ್ಲ.
ಇನ್ನು ಕೆಲವು ಪಕ್ಷಗಳ ನಾಯಕರು ತಮ್ಮದು ಏಕಾಂಗಿ ಸ್ಪರ್ಧೆ. ಯಾರೊಂದಿಗೂ ಚುನಾವಣೆ ಪೂರ್ವ ಕೈಜೋಡಿಸುವುದಿಲ್ಲ ಎಂದು ಆಣೆ-ಪ್ರಮಾಣ ಮಾಡುತ್ತಿದ್ದಾರೆ.
224 ಸ್ಥಾನಗಳಿಗೂ ನಿಲ್ಲುವುದಾಗಿ ಪಟ್ಟಿ ಕಟ್ಟುತ್ತಿರುವ ಪಕ್ಷಗಳು:
BJP, Congress, JDS, BSR Congress, KJP, KMP (ಅದೇ ಖೇಣಿದು). ಉಳಿದಂತೆ ಕಳೆದ ವಿಧಾನಸಭೆಯಲ್ಲಿ ಕರ್ನಾಟಕವನ್ನು ಇನ್ನಿಲ್ಲದಂತೆ ಮಣ್ಣುಮುಕ್ಕಿಸಿದ ಪಕ್ಷೇತರ ಅಭ್ಯರ್ಥಿಗಳು ಈ ಬಾರಿಯೂ ಎಲ್ಲ 224 ರಲ್ಲೂ ಸ್ಪರ್ಧಿಸಿ, ಮತ್ತೆ ಆಪರೇಶನ್ ಟೇಬಲ್ ಮೇಲೆ ಮಲಗಿಕೊಳ್ಳುತ್ತಾರಾ? ಎಂದು ಬೇಸತ್ತ ಮತದಾರ ಅಭ್ಯರ್ಥಿಗಳತ್ತ ಕೆಕ್ಕರಿಸಿಕೊಂಡು ನೋಡಬೇಕಿದೆ.












Click it and Unblock the Notifications