ಮುಖ್ಯಮಂತ್ರಿ ಮೋದಿ ಕಮಾಲ್ ಗೆ ಗುಜರಾತ್ ಸನ್ನದ್ಧ

ಗುಜರಾತಿನ 95 ಕ್ಷೇತ್ರಗಳಲ್ಲಿ ಇಂದು 2ನೆಯ ಹಂತದ ಮತದಾನ ನಡೆಯುತ್ತಿದೆ. ರಜಾ ಮೂಡಿನಲ್ಲಿರುವ ಭಾರಿ ಸಂಖ್ಯೆಯ ಮತದಾರರು ಅತ್ಯುತ್ಸಾಹದಿಂದ ಮತಗಟ್ಟೆವರೆಗೂ ತೆರಳಿ ಮತ ಹಾಕುತ್ತಿದ್ದಾರೆ. ಮಣಿನಗರದಲ್ಲಿ ಸ್ಪರ್ಧಿಸಿರುವ ಮೋದಿ, ತಮ್ಮ ಮತ ಕ್ಷೇತ್ರವಾದ ರಾಣಿಪತ್ ನಲ್ಲಿ ಇಂದು ಬೆಳಗ್ಗೆ 9.30ಕ್ಕೆ ಮತ ಚಲಾಯಿಸಿದ್ದಾರೆ.
ಈ ಬಾರಿ ಮತದಾನದ ಪ್ರಮಾಣ ಗರಿಷ್ಠವಾಗಿದ್ದು, ಶಾಂತಿಯುತವಾಗಿ ನಡೆದಿರುವುದು ನೋಡಿದರೆ ಜನ ಇನ್ನೂ ಮೋದಿಯತ್ತ ಒಲವು ಹೊಂದಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಬಿಜೆಪಿ ಪಕ್ಷದ ಚುನಾವಣಾ ವೀಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಬಿಗಿ ಬಂದೋಬಸ್ತ್ ಮತ್ತು ಭಾರಿ ಸಂಖ್ಯೆಯ ಅಭಿಮಾನಿಗಳ ಮಧ್ಯೆ ಮತಕೇಂದ್ರಕ್ಕೆ ತೆರಳಿದ ಮೋದಿ ಉತ್ಸಾಹದಿಂದ ಮತ ಚಲಾಯಿಸಿದರು. 2002ರಿಂದ ಮೋದಿ ಇಲ್ಲಿಂದ ಆರಿಸಿಬರುತ್ತಿದ್ದಾರೆ. 2007ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸುಮಾರು 75,000 ಮತಗಳಿಂದ ಸೋಲಿಸಿದ್ದರು.
ಇದೇ ವೇಳೆ, ಪ್ರತಿಸ್ಪರ್ಧಿ ಶ್ವೇತಾ ಭಟ್ ಮಣಿನಗರದಲ್ಲಿ ಮತ ಚಲಾಯಿಸಿದರು. ಮತದಾರನ ನಿರ್ಣಯ ಏನೆಂಬುದು ಆಚೆನಾಳಿದ್ದು, ಅಂದರೆ ಗುರುವಾರ (ಡಿಸೆಂಬರ್ 20) ಬಹಿರಂಗವಾಗಲಿದೆ. ಅದಕ್ಕೂ ಮುನ್ನ ಮಹಾ ಫಲಿತಾಂಶದ ದಿಕ್ಸೂಚಿಯಾಗಿ ಇಂದು ಸಂಜೆಯಿಂದ exit poll ಫಲಿತಾಂಶಗಳು ಹೊರಬೀಳಲಿವೆ.
ಗುರುವಾರ ಪ್ರಕಟಗೊಳ್ಳಲಿರುವ ತಾಜಾ ಫಲಿತಾಂಶಕ್ಕಾಗಿ kannada.oneindia ತಾಣಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ.












Click it and Unblock the Notifications