ವಿಮಾನದಲ್ಲಿ ಮಹಿಳೆಯ ತಡವಿದ್ದಕ್ಕೆ ಭಾರತೀಯ ಟೆಕ್ಕಿಗೆ ಶಿಕ್ಷೆ

45ರ ಹರೆಯದ ಶ್ರೀನಿವಾಸ ಎಸ್ ಎರ್ರಮಲ್ಲಿ ಆರೋಪಿ ಸಾಫ್ಟ್ ವೇರ್ ಇಂಜಿನಿಯರ್. ಎರ್ರಮಲ್ಲಿಗೆ ಗರಿಷ್ಠ 2 ವರ್ಷಗಳ ಕಾರಾಗೃಹ ವಾಸ ಹಾಗೂ 2,50,000 ಡಾಲರ್ ದಂಡ ವಿಧಿಸಲಾಗಿದೆ.
ಈತ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದೆ. ಸದ್ಯಕ್ಕೆ ಎರ್ರಮಲ್ಲಿಗೆ ಶಿಕ್ಷೆಯನ್ನು ಮುಂದೂಡಲಾಗಿದೆ. 2013ರ ಎಪ್ರಿಲ್ 26ರಂದು ಶಿಕ್ಷೆ ಜಾರಿಗೊಳ್ಳುವ ನಿರೀಕ್ಷೆಯಿದೆ.
ಲೈಂಗಿಕ ಕ್ರಿಯೆಗೆ ಪ್ರಚೋದನಕಾರಿಯಾಗಿ: ಎರ್ರಮಲ್ಲಿಯು 2011ರ ಜೂನ್ 14ರಂದು ಚಿಕಾಗೊದ ಮಿಡ್ ವೇ ಏರ್ ಪೋರ್ಟ್ ಗೆ ಹೊರಟಿದ್ದ ಸೌತ್ ವೆಸ್ಟ್ ಏರ್ ಲೈನ್ಸ್ ವಿಮಾನದ ಪ್ರಯಾಣಿಕನಾಗಿದ್ದ ಎಂದು ವಿಚಾರಣೆಯ ವೇಳೆ ಸಾಕ್ಷಾಧಾರಗಳಿಂದ ತಿಳಿದು ಬಂದಿದೆ.
ಮಹಿಳೆ ಹಾಗೂ ಆಕೆಯ ಪತಿ ವಿಮಾನದಲ್ಲಿ ಪ್ರಯಾಣಿಸಿದ್ದು, ಮಹಿಳೆಗೆ ಸಮೀಪದಲ್ಲೇ ಕಿಟಕಿಯ ಹತ್ತಿರ ಎರ್ರಾಮಿಲಿ ಕುಳಿತಿದ್ದ. ಲೈಂಗಿಕ ಕ್ರಿಯೆಗೆ ಪ್ರಚೋದನಕಾರಿಯಾಗಿ ಎರ್ರಮಲ್ಲಿ ತನಗೆ ಮೂರು ಸಲ ತಡವಿದ್ದಾನೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಯಾಣದ ವೇಳೆ ಎರಡು ಮೂರು ಬಾರಿ ಮಹಿಳೆಯನ್ನು ಸ್ಪರ್ಶಿಸಿದ್ದಾಗಿ ಎರ್ರಮಲ್ಲಿಯೂ ಒಪ್ಪಿಕೊಂಡಿದ್ದಾನೆ.












Click it and Unblock the Notifications