ಸೇಲ್ಸ್ ಗರ್ಲ್ ಎಂಎಂಎಸ್: ಮಾಲ್ ಮ್ಯಾನೇಜರ್ ಸೆರೆ

ವೈಟ್ ಫೀಲ್ಡ್ ನಲ್ಲಿರುವ ಕುಂದಲಹಳ್ಳಿಯ ಬಳಿಯಿರುವ ಸಂಸಾರ್ ಮಾಲ್ ನಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಬಾಧಿತ ಯುವತಿಯ ಕುಂದಲಹಳ್ಳಿ ನಿವಾಸಿ ಎಂದು ಗುರುತಿಸಲಾಗಿದ್ದು, ಆರೋಪಿ ಅಶ್ರಫ್ ನನ್ನು ಬಂಧಿಸಲಾಗಿದೆ.
ಬಾಧಿತ ಯುವತಿ 2 ತಿಂಗಳ ಹಿಂದೆ ಸಂಸಾರ್ ಮಾಲ್ ನಲ್ಲಿ ಕೆಲಸಕ್ಕೆ ಸೇರಿದ್ದಳು. ಆರಂಭದಿಂದಲೂ ಅವಳ ಹಿಂದೆ ಬಿಂದಿದ್ದ ಆರೋಪಿ ಅಶ್ರಫ್, ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಕಳೆದ ತಿಂಗಳು 17ರಂದು ಆಕೆಗೆ ಊಟೋಪಚಾರ ಮಾಡಿದ ಅಶ್ರಫ್ ಊಟದಲ್ಲಿ ಮತ್ತುಬರಿಸುವ ಔಷಧ ನೀಡಿ ಆಕೆಯ ಪ್ರಜ್ಞೆ ತಪ್ಪಿಸಿದ್ದ. ಬಳಿಕ ಅವಳನ್ನು ಬೆತ್ತಲು ಮಾಡಿ ತನ್ನ ಮೊಬೈಲಿನಲ್ಲಿ ಅದನ್ನೆಲ್ಲ ಚಿತ್ರೀಕರಿಸಿದ್ದ.
ಬಳಿಕ, ತನ್ನ ವಿರುದ್ಧ ದೂರು ನೀಡಿದರೆ ಅಥವಾ ಯಾರಿಗಾದರೂ ಹೇಳಿದರೆ ಮೊಬೈಲಿನಲ್ಲಿರುವ ಎಂಎಂಎಸ್ ಅನ್ನು ಎಲ್ಲ ಮೊಬೈಲುಗಳಿಗೂ ಕಳಿಸುವುದಾಗಿ ಬೆದರಿಸಿದ್ದ. ಇದರಿಂದ ಆತಂಕಕ್ಕೀಡಾದ ಯುವತಿ, ಅವನ ಲೈಂಗಿಕ ಕಿರುಕುಳವನ್ನು ಸಹಿಸಿಕೊಂಡಿದ್ದಳು. ಆ
ಆದರೆ ಇದು ಅತಿರೇಕಕ್ಕೆ ಹೋದಾಗ ಅವನಿಂದ ದೂರವಾಗಲು ನಿಶ್ಚಯಿಸಿ, ಕೆಲಸಕ್ಕೆ ಗುಡ್ ಬೈ ಹೇಳಿದ್ದಾಳೆ. ಆದರೂ ಅವನು ಪೀಡೆಯಂತೆ ಹಿಂದೆ ಬಿದ್ದಿದ್ದಾನೆ. ಆಗ ಅನ್ಯ ಮಾರ್ಗ ಕಾಣದೆ ಸೋದರಿಯ ಜತೆಗೂಡಿ ಪೊಲೀಸ್ ಠಾಣೆ ಹಾದಿ ತುಳಿದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.












Click it and Unblock the Notifications