ಡೆಬಿಟ್ ಕಾರ್ಡ್ ಪ್ರತಿ Swipeಗೂ ಪಾಸ್ ವರ್ಡ್ ಹಾಕ್ಬೇಕು

debit cards need to be discontinued
ನವದೆಹಲಿ, ಡಿ.13: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹಲವು ಗ್ರಾಹಕಸ್ನೇಹಿ ಸುಧಾರಣೆಗಳನ್ನು ಹೊರ ತಂದಿದೆ. ಆಧಾರ್ ಕಾರ್ಡ್ ಬಳಕೆ ಹಾಗೂ ಬ್ಯಾಂಕ್ ಖಾತೆ ಆರಂಭದ ಪ್ರಕ್ರಿಯೆಯಲ್ಲಿ ಬದಲಾವಣೆ ನಂತರ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯಲ್ಲಿ ಸುಧಾರಣೆ ತರಲಾಗಿದೆ. ಈಗ ಡೆಬಿಟ್ ಕಾರ್ಡ್ ಬಳಕೆಯಲ್ಲೂ ನಿಯಮ ಬದಲಾಗಿದೆ.

ಡೆಬಿಟ್ ಕಾರ್ಡ್ ಬಳಸಿ ಸಾಮಾನ್ಯವಾಗಿ ಮಾಲ್ ಗಳನ್ನು ಬಿಲ್ ಪಾವತಿ ಮಾಡಿ ಕೊಟ್ಟ ರಸೀತಿಗೆ ಸಹಿ ಹಾಕಿ ಗ್ರಾಹಕರು ಹೊರಟು ಬಿಡುತ್ತಿದ್ದರು. ಆದರೆ, ಈಗ ಪ್ರತಿ ಬಾರಿ ಡೆಬಿಟ್ ಕಾರ್ಡ್ ಬಳಸಿ ವ್ಯವಹಾರ ನಡೆಸುವಾಗಲೂ ಪಿನ್ ಸಂಖ್ಯೆ ಹಾಕಲೇಬೇಕು.

ಎಟಿಎಂ ಗಳಲ್ಲಿ ಪ್ರತಿ ವ್ಯವಹಾರ ಪ್ರಕ್ರಿಯೆಗೂ ಪಿನ್ ಸಂಖ್ಯೆ ಬಳಸುವುದು ಕಡ್ಡಾಯಗೊಳಿಸಿದ ಹಾಗೆ ಡೆಬಿಟ್ ಕಾರ್ಡ್ ಬಳಸಿ ನಡೆಸುವ ಪ್ರತಿ ವ್ಯವಹಾರಕ್ಕೂ ಪಿನ್ ಸಂಖ್ಯೆ ನಮೂದಿಸುವುದು ಅನಿವಾರ್ಯವಾಗಲಿದೆ ಎಂದು ಆರ್ ಬಿಐ ಸೂಚಿಸಿದೆ.

ಆನ್ ಲೈನ್ ಮೂಲಕ ಡೆಬಿಟ್ ಕಾರ್ಡ್ ಬಳಸುವವರು ಪಿನ್ ಸಂಖ್ಯೆ ಇಲ್ಲದೆ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಅದೇ ರೀತಿ ಆಫ್ ಲೈನ್ ವ್ಯವಹಾರಕ್ಕೂ ಈಗ ಪಿನ್ ಸಂಖ್ಯೆ ಕಡ್ಡಾಯವಾಗಲಿದೆ.

ಡೆಬಿಟ್ ಕಾರ್ಡ್ ಗಳ ದುರ್ಬಳಕೆ, ಕಳೆದು ಹೋದ ಡೆಬಿಟ್ ಕಾರ್ಡ್ ಗಳ ಮೇಲೆ ನಿಗಾ ವಹಿಸಲು ಈ ರೀತಿ ಕ್ರಮ ಅನಿವಾರ್ಯವಾಗಿದೆ. ಇನ್ಮುಂದೆ ಡೆಬಿಟ್ ಕಾರ್ಡ್ ನಲ್ಲಿ ಗ್ರಾಹಕರ ಭಾವಚಿತ್ರ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ. ಇನ್ನಷ್ಟು ಆಧುನಿಕ ತಂತ್ರಜ್ಞಾನ ಬಳಸಿ ಕಾರ್ಡ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಆರ್ ಬಿಐ ಚಿಂತಿಸಿದೆ.

ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಬಳಕೆಯನ್ನು ಕೂಡಾ Foreign Exchange Management Act, 1999 ಕಾಯ್ದೆ ಅನುಗುಣವಾಗಿ ಬಳಕೆಗೆ ನೀಡುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚಿಸಿದೆ. ಕೆಲವು ಡೆಬಿಟ್ ಕಾರ್ಡ್ ಗಳನ್ನು ಹಿಂಪಡೆದು ಸುಧಾರಿತ ಕಾರ್ಡ್ ಗಳನ್ನು ಗ್ರಾಹಕರಿಗೆ ಒದಗಿಸುವಂತೆ ಕೂಡಾ ಆರ್ ಬಿಐ ಹೇಳಿದೆ.

ಬ್ಯಾಂಕಿನಲ್ಲಿ ಹೊಸ ಖಾತೆ ಆರಂಭಿಸಬೇಕಾದರೆ ಬ್ಯಾಂಕಿನಲ್ಲಿ ಈಗಾಗಲೇ ಖಾತೆ ಹೊಂದಿರುವ ಗ್ರಾಹಕರು ಹೊಸ ಗ್ರಾಹಕರನ್ನು ಪರಿಚಯಿಸಬೇಕಾಗಿತ್ತು.

ಹಲವು ಬ್ಯಾಂಕ್ ಗಳಲ್ಲಿ ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಈ ರೀತಿ ಹೊಸ ಗ್ರಾಹಕರಿಗೆ ಹಳೆ ಗ್ರಾಹಕರ ನೆರವು ಬೇಕಾಗಿತ್ತು. ಅದರೆ, ಈಗ ಹೊಸ ಗ್ರಾಹಕರಿಗೆ ಈ ರೀತಿ ಹಳೆ ಗ್ರಾಹಕರ ನೆರವು ಪಡೆಯಿರಿ ಎಂದು ಬ್ಯಾಂಕ್ ಗಳು ಕೇಳುವಂತಿಲ್ಲ

ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ನಲ್ಲಿ ಐಡೆಂಡಿಟಿ ಹಾಗೂ ವಿಳಾಸ ಪ್ರೂಫ್ ಆಗಿ ನೀಡಬಹುದು. ಬ್ಯಾಂಕಿನಲ್ಲಿ ಸಣ್ಣ ಉಳಿತಾಯ ಖಾತೆ ಆರಂಭಿಸಲು NREGA ಜಾಬ್ ಕಾರ್ಡ್ ಅಧಿಕೃತ ದಾಖಲೆಯಾಗಿ ಬಳಸಬಹುದು ಎಂದು ಆರ್ ಬಿಐ ಸೂಚಿಸಿದೆ.

ಐಡೆಂಡಿಟಿ ಪ್ರೂಫ್ ಗಾಗಿ ನೀಡುವ ದಾಖಲೆ(ಪಾಸ್ ಪೋರ್ಟ್ ಇತ್ಯಾದಿ) ಅಡ್ರೆಸ್ ಹಾಗೂ ಖಾತೆ ಆರಂಭದ ಅರ್ಜಿ ಯಲ್ಲಿರುವ ಅಡ್ರೆಸ್ ಒಂದೇ ಆಗಿದ್ದರೆ ಪ್ರತ್ಯೇಕ ಅಡ್ರೆಸ್ ಪ್ರೂಫ್ ನೀಡುವ ಅಗತ್ಯವಿಲ್ಲ ಎಂಬ ನಿಯಮಗಳನ್ನು ಆರ್ ಬಿಐ ಬದಲಾಯಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+