ಕಳ್ಳತನದ 3 ಯುವತಿಯರನ್ನು ಕಂಬಕ್ಕೆ ಕಟ್ಟಿ ಥಳಿತ

salem-theft-3-teen-girls-tied-to-lamp-post-beaten
ಸೇಲಂ, (ತಮಿಳುನಾಡು), ಡಿ.11: ಕಳ್ಳತನದ ಆರೋಪ ಹೊರಿಸಿ, ಹದಿಹರೆಯದ ಮೂವರು ಬಾಲಕಿಯರನ್ನು ಕಂಬಕ್ಕೆ ಕಟ್ಟಿ ಹಾಕಿ, ಥಳಿಸಿರುವ ಅಮಾನವೀಯ ಘಟನೆ ನಿನ್ನೆ ನಡೆದಿದೆ.

ನಗರದ ಟೈಲರ್ ಅಂಗಡಿಯೊಂದರಲ್ಲಿ ಈ ಮೂರೂ ಯುವತಿಯರು 1,000 ರೂಪಾಯಿ ಕದ್ದಿದ್ದಾರೆಂದು ಹೀಗೆ ಸಾರ್ವಜನಿಕರೆದುರೇ ಹಿಂಸಿಸಲಾಗಿದೆ. ಕಳ್ಳತನ ಮಾಡಿದ್ದಾರೆಂದು ಆರೋಪಿಸಿ, ಮೂವರನ್ನೂ ಸೆರೆ ಹಿಡಿದರು. ಆನಂತರ ಅವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಅದಾದನಂತರ ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಶಿಕ್ಷೆಯಿಂದ ಪಾರು ಮಾಡಿ, ಆಸ್ಪತ್ರೆಗೆ ಸೇರಿಸಿದ್ದಾರೆ.

ಪೊಲೀಸರ ಪ್ರಕಾರ ಮೂರೂ ಬಾಲಕಿಯರು ಹೊಲೆಯಕ್ಕೆ ಕೊಟ್ಟಿದ್ದ ಬಟ್ಟೆಯನ್ನು ಪಡೆಯಲು ಟೈಲರ್ ಅಂಗಡಿಗೆ ಹೋಗಿದ್ದಾರೆ. ಆದರೆ ಟೈಲರ್ ಯಾವತ್ತೂ ನಿಮ್ಮನ್ನು ನೋಡಿಯೇ ಇಲ್ವಲ್ಲ ಎಂದು ಆ ಹುಡುಗಿಯರಿಗೆ ಹೇಳಿದ್ದಾನೆ.

ಆನಂತರ ಪಕ್ಕದಲ್ಲೇ ಇದ್ದ ಮನಯೊಳಗೆ ಹೋಗಿ ತನ್ನ ಹೆಂಡತಿಯನ್ನು ಹುಡುಗಿಯರ ಬಗ್ಗೆ ವಿಚಾರಿಸಿದ್ದಾನೆ. ಆದರೆ ಹಂಡತಿ ಜತೆ ಮತ್ತೆ ಅಂಗಡಿಗೆ ಬಂದು ನೋಡುವಷ್ಟರಲ್ಲಿ ಹುಡುಗಿಯರು ಸಾವಿರ ರೂ ಕದ್ದಿರುವುದು ಬೆಳಕಿಗೆ ಬಂತು ಎಂದು ಅಂಗಡಿಯಾತ ಹೇಳಿದ್ದಾನೆ.

ಹಾಗೆ ದುಡ್ಡು ಕದ್ದು ಓಡಿಹೋಗಿದ್ದ ಹುಡುಗಿಯರು ಸೋಮವಾರ ಬೆಳಗ್ಗೆ ಮತ್ತೆ ಟೈಲರ್ ಅಂಗಡಿ ಎದುರು ಕಾಣಿಸಿಕೊಂಡಿದ್ದಾರೆ. ಇದನ್ನು ಗಮನಿಸಿ ಅಂಗಡಿಯಾತ ಸುತ್ತಮುತ್ತ ಇದ್ದವರನ್ನು ಗುಡ್ಡೆ ಹಾಕಿ ಆ ಹುಡುಗಿಯರು ಕಳ್ಳತನ ಮಾಡಿರುವ ಬಗ್ಗೆ ಹೇಳಿದ್ದಾನೆ. ತದನಂತರ ಮೂವರನ್ನು ಕಂಬಕ್ಕೆ ಕಟ್ಟಿ ಹಾಕಿ ಮನಸೋಇಚ್ಛೇ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+