ಕೈಹಿಡಿದ ಇತಿಹಾದ್ ಏರ್ವೇಸ್; ಕಿಂಗ್ ಮಲ್ಯ ಮತ್ತೆ ಗಗನಕ್ಕೆ

ಮುಂಬೈ, ಡಿ.11: ಭಾರತದ ಆಗಸದಲ್ಲಿ ಶುಭ ಸುದ್ದಿಯೊಂದು ತೇಲಿಬಂದಿದೆ. ಕಳೆದೊಂದು ವರ್ಷದಿಂದ ಆಕಾಶದಲ್ಲಿ ಗೋತಾ ಹೊಡೆಯುತ್ತಿದ್ದ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಗೆ ಆಪದ್ಬಾಂಧವನಾಗಿ ಅಬು ಧಾಬಿ ಏರ್ ಲೈನ್ಸ್ ಕಂಪನಿಯೊಂದು ಕೈಹಿಡಿದಿದೆ. ಇದರಿಂದ ಇದೇ 18ರಂದು 57ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಕಿಂಗ್ ಮಲ್ಯಗೆ ಈ ಬಾರಿ ಹ್ಯಾಪಿ ಬರ್ಥ್ ಡೆ ಭರ್ಜರಿಯಾಗಲಿದೆ.

ಉದ್ಯೋಗಿಗಳಿಗೆ ಸಂಬಳಗಳನ್ನು ಕೊಡದಷ್ಟೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ KFA ಗೆ ಕೊಲ್ಲಿ ರಾಷ್ಟ್ರವಾದ ಅಬು ಧಾಬಿಯ ಇತಿಹಾದ್ ಏರ್ ವೇಸ್ ಸಂಸ್ಥೆ ಜೀವದಾನ ನೀಡಿದೆ. ಅದರಂತೆ Etihad Airways ಶೇ. 48ರಷ್ಟು ಪಾಲು ಪಡೆದು KFA ವಿಮಾನ ಸಂಚಾರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲಿದೆ.

Etihad Airways to gain 40 percent share in Vijay Mallya KFA

Etihad Airways ಮೊದಲ ಕಂತಿನಲ್ಲಿ ಬರೋಬ್ಬರಿ 3000 ಕೋಟಿ ರೂ.ಗಳನ್ನು KFAನಲ್ಲಿ ಹೂಡಿಕೆ ಮಾಡಲಿದೆ. ಎರಡನೆಯ ಕಂತಿನಲ್ಲಿ ಮತ್ತೂ 1,800 ಕೋಟಿ ರೂ. ತೊಡಗಿಸಲಿದೆ. ಅರ್ಥಾತ್ ಶೇ. 48ರಷ್ಟು ಪಾಲು ಅಂದರೆ 4,8000 ಕೋಟಿ ರೂ.ಗೆ KFA ಭಾಗಶಃ ಮಾರಾಟವಾದಂತಾಗಿದೆ.

ಕಳೆದ ವಾರಾಂತ್ಯ ಈ ಸಂಬಂಧ ಎರಡೂ ಸಂಸ್ಥೆಗಳ ಮಧ್ಯೆ ಒಪ್ಪಂದವೇರ್ಪಟ್ಟಿದೆ. ಎರಡೂ ಸಂಸ್ಥೆಗಳ ವಕ್ತಾರರು ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಇದರಿಂದ KFA ಪ್ರಯಾಣಿಕರು ಅದಕ್ಕಿಂತ ಹೆಚ್ಚಾಗಿ ಸಿಬ್ಬಂದಿ ತಕ್ಷಣಕ್ಕೆ ನೆಮ್ಮದಿಯ ನಿಟ್ಟುಸಿರುಬಿಡಬಹುದಾಗಿದೆ.

ಕಿಂಗ್ ಮಲ್ಯಗೆ ತಮ್ಮ KFA ಕಂಪನಿಯ ಆಡಳಿತ ಚುಕ್ಕಾಣಿಯನ್ನು ಮಾರಾಟ ಮಾಡಿಕೊಳ್ಳದೆ ಅನ್ಯ ಮಾರ್ಗವಿರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ತಮ್ಮ ಸಂಸ್ಥೆ ಆಡಳಿತವನ್ನು ಕೊಲ್ಲಿ ವಿಮಾನ ಸಂಸ್ಥೆಗೆ ಒಪ್ಪಿಸಿ, ಕೈತೊಳೆದುಕೊಂಡಿದ್ದಾರೆ. ಅಕ್ಟೋಬರ್ 1 ರಿಂದ KFA ವಿಮಾನಗಳು ನೆಲಬಿಟ್ಟು ಹಾರಿಲ್ಲ.

ಉದ್ದಿಮೆಯ ಮೂಲಗಳ ಪ್ರಕಾರ ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನಗಳು ಮತ್ತೆ ಹಾರಾಡಬೇಕೆಂದರೆ ಕನಿಷ್ಠ 3,000 ಕೋಟಿ ರೂ. ಅಗತ್ಯವಿತ್ತು. ಸಂಬಳಗಳು 70 ಕೋಟಿ ರೂ, ಪೆಟ್ರೋಲಿಯಂ ಕಂಪನಿಗಳಿಗೆ ಸಾಲ 950 ಕೋಟಿ ರೂ. ವಿಮಾನ ನಿಲ್ದಾಣ ಪ್ರಾಧಿಕಾರಗಳಿಗೆ 500 ಕೋಟಿ ರೂ. ಎಸ್ ಬಿಐ ಬ್ಯಾಂಕ್ ಸಾಲ 1,500 ಕೋಟಿ ರೂ. Etihad Airways ಶೇ. 48ರಷ್ಟು ಪಾಲು ಪಡೆದು ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನಗಳಿಗೆ ಮತ್ತೆ ಇಂಧನ ತುಂಬಬಹುದಾಗಿದೆ.

ಕಳೆದ ವರ್ಷ Etihad Airways ಸಂಸ್ಥೆಯು Virgin Australia, Air Berlin ಮತ್ತು Air Seychellesನಲ್ಲಿ ಪಾಲುದಾರಿಕೆ ಖರೀದಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+