ಅಂಬಾನಿ HSBC ಖಾತೆ ಸಂಖ್ಯೆಗಳು ಬಹಿರಂಗ

a-kejriwal-reveals-anil-mukesh-ambani-swiss-account-nos
ಮುಂಬೈ, ಡಿ.10: ಅಂಬಾನಿ ಸೋದರರಾದ ಮುಕೇಶ್ ಮತ್ತು ಅನಿಲ್ ಅಂಬಾನಿ ಇಬ್ಬರೂ ನೂರಾರು ಕೋಟಿ ರೂ. ಕಪ್ಪುಹಣವನ್ನು ಸ್ವಿಸ್ ಬ್ಯಾಂಕುಗಳಲ್ಲಿಟ್ಟಿದ್ದಾರೆ ಎಂದು ಕಳೆದ ತಿಂಗಳು ಬಿರುಗಾಳಿ ಎಬ್ಬಿಸಿದ್ದ ಅರವಿಂದ್ ಕೇಜ್ರಿವಾಲಾ ಅವರು ಇದೀಗ, ಇಬ್ಬರೂ ಸೋದರರ HSBC ಬ್ಯಾಂಕ್ ಖಾತೆಗಳನ್ನು ಬಹಿರಂಗಪಡಿಸಿದ್ದಾರೆ.

ಸರಿಯಾಗಿ ಒಂದು ತಿಂಗಳ ಹಿಂದೆ ತಮ್ಮ ವಿರುದ್ಧ ಕೇಜ್ರಿವಾಲಾ ತಮ್ಮ ವಿರುದ್ಧ ಮಾಡಿದ್ದ ಆರೋಪಗಳನ್ನು ಮುಕೇಶ್ ಮತ್ತು ಅನಿಲ್ ಅಂಬಾನಿ ಸೋದರರು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ಅವರ ಖಾತೆ ಸಂಖ್ಯೆಗಳನ್ನು ಬಹಿರಂಗಪಡಿಸುವ ಮೂಲಕ ಭಾರತದಲ್ಲಿನ ಪ್ರಭಾವಿ ವ್ಯಕ್ತಿಗಳು ಸ್ವಿಸ್ ಬ್ಯಾಂಕುಗಳಲ್ಲಿ ಅಪಾರ ಪ್ರಮಾಣದ ಕಪ್ಪು ಹಣ ಇಟ್ಟಿದ್ದಾರೆ ಎಂಬುದಕ್ಕೆ ಪುರಾವೆ ಸಹಿತ ಹೊಸ ತಿರುವು ನೀಡಿದ್ದಾರೆ.

ಹೌದು ಅನಿಲ್ ಮತ್ತು ಮುಕೇಶ್ ಅಂಬಾನಿ ಅವರ ಎಚ್ಎಸ್ ಬಿಸಿ ಖಾತೆ ಸಂಖ್ಯೆಗಳು ಅನುಕ್ರಮವಾಗಿ 5090160983 ಮತ್ತು 5090160984. ಈ ಅಕೌಂಟ್ ನಂಬರುಗಳನ್ನು ಬಹಿರಂಗಪಡಿಸಿದ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲಾ ಅವರು ಸ್ವಿಸ್ ಖಾತೆಗಳಿಗೆ ಸಂಬಂಧಿಸಿದಂತೆ ಕಳೆದ ತಿಂಗಳು ತಾವು ಬಹಿರಂಗಪಡಿಸಿದ ಅಷ್ಟೂ ಮಾಹಿತಿ ಖಚಿತವಾಗಿದೆ ಎಂದು ಪುನರುಚ್ಛರಿಸಿದರು.

ಆದಾಯ ತೆರಿಗೆ ಇಲಾಖೆಯ ಬಳಿ ಈ ಸ್ವಿಸ್ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರ ಇದೆ. ಆದರೂ ಆದಾಯ ತೆರಿಗೆ ಇಲಾಖೆ ಕೈಕಟ್ಟಿಕೊಂಡು ಕುಳಿತಿದೆ ಎಂದು ಕೇಜ್ರಿವಾಲಾ ತೀವ್ರ ಅಸಮಾಧಾನ ವ್ಯಕ್ತಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+