70 ವರ್ಷದ ಪಾಕ್ ಮಹಿಳೆಗೆ ಹದಿನಾರರ ಪ್ರೇಮ

ಸಿಂಧ್ ಪ್ರಾಂತ್ಯದ ಬೆಹ್ರಾಂ ಪಿಠಾಫಿ ಗ್ರಾಮದ ಹನೀಫಾ ತನ್ನ ಸೋದರ ಸಂಬಂಧಿಯ ಮಗ ರಶೀದ್ ಜತೆ ಪ್ರೇಮ ಸಂಬಂಧ ಹೊಂದಿದ್ದಾಳೆ ಎಂದು ಖುದ್ದು ಆಕೆಯ ಗಂಡ ಬಶೀರ್ ಅಹಮದ್ ಹೇಳಿದ್ದಾನೆ. ಆದರೆ ಹನೀಫಾ ಈ ಪ್ರೇಮವನ್ನು ಅಲ್ಲಗಳೆದಿದ್ದಾಳೆ.
ಈ ಸಂಬಂಧ ತನಗೆ ನ್ಯಾಯ ಕೊಡಿಸುವಂತೆ ಹನೀಫಾ ಪಿಠಾಫಿ ಬುಡಕಟ್ಟು ಮುಖಂಡರು ಮತ್ತು ಸ್ಥಳೀಯ ರಾಜಕಾರಣಿಗಳ ಮೊರೆಹೋಗಿದ್ದಾಳೆ. ಪತಿರಾಯ ಅಹಮದ್, ತನ್ನ ಸೋದರ ಜಹೂರ್ ಬಕ್ಸ್ ಹಾಗೂ ಮತ್ತೊಬ್ಬ ಸಂಬಂಧಿಯ ಜತೆಗೂಡಿ ಹನೀಫಾ ಮೇಲೆ ಆರೋಪ ಹೊರಿಸಿದ್ದಾರೆ. ತದನಂತರ ಆಕೆಗೆ ಚಿತ್ರ ಹಿಂಸೆ ನೀಡಿ, ಮನೆಯಿಂದ ಹೊರಹಾಕಿದ್ದಾರೆ.
ಪತಿರಾಯ ಅಹಮದ್ ಇತ್ತೀಚೆಗೆ ಎರಡನೆಯ ಮದುವೆಯಾಗಿದ್ದು, ಹನೀಫಾ ಜತೆ ಮದುವೆಗೆ ಖರ್ಚು ಮಾಡಿದ್ದ 20 ಸಾವಿರ ರೂ. ಗಳನ್ನು ವಾಪಸ್ ಮಾಡುವಂತೆ ಹನೀಫಾರ ಸೋದರರಿಗೆ ದುಂಬಾಲು ಬಿದ್ದಿದ್ದಾನೆ. ಗ್ರಾಮಕ್ಕೆ ಭೇಟಿ ನೀಡಿದ್ದ ಪೊಲೀಸರು ವಿಚಾರಣೆಯ ಬಳಿಕ ಪತಿರಾಯ ಅಹಮದನ ಕುಕೃತ್ಯವನ್ನು ದೃಢಪಡಿಸಿದ್ದಾರೆ.












Click it and Unblock the Notifications