ಖುರಾನ್ ಪಠಿಸದ ಪುತ್ರನ ಕೊಂದುಸುಟ್ಟ ಮಹಾತಾಯಿ

london-indian-woman-kills-son-failing-to-memorise-quran
ಲಂಡನ್, ಡಿ.7‌: ಆಕೆ ಹೇಳಿಕೇಳಿ ಗಣಿತದಲ್ಲಿ ಸ್ನಾತಕೋತ್ತರ ಪದವೀಧರೆ. ಬದುಕಿನಲ್ಲಿ ಎಲ್ಲವೂ ಶಿಸ್ತುಬದ್ಧವಾಗಿ, ಕರಾರುವಕ್ಕಾಗಿ ಲೆಕ್ಕಾಚಾರದಂತೆ ನಡೆಯಬೇಕು ಎಂದು ಬಯಸಿದ್ದಳು. ಆದರೆ ಆಕೆಯ ಮುದ್ದುಮಗನಿಗೆ ಇದೆಲ್ಲ ಹೇಗೆ ಗೊತ್ತಾಬೇಕು.

ಮೊದ್ದುಮಗ ಅಮ್ಮ ಹೇಳಿದಂತೆ ಮುಸ್ಲಿಮರ ಪವಿತ್ರವಾದ ಖುರಾನ್‌ ಅನ್ನು ಪಠಿಸಿ, ನೆನಪಿಟ್ಟುಕೊಳ್ಳುವಲ್ಲಿ ತಡಬಡಾಯಿಸಿದ್ದಾನೆ. ಅಮ್ಮನಿಗೆ ಅಷ್ಟು ಸಾಕಾಗಿತ್ತು. ಮಗ ಬದುಕಿನ ಲೆಕ್ಕಾಚಾರ ತಪ್ಪುತ್ತಿದ್ದಾನೆ ಎಂದು ಭಾವಿಸಿದವಳೇ ಅವನನ್ನು ನಾಯಿಗೆ ಬಡಿದಂತೆ ಬಡಿದು ಸಾಯಿಸಿದಳು.

ಆಕೆಯ ದಾಹ ಅಲ್ಲಿಗೇ ಸಾಯಲಿಲ್ಲ. ಮುಂದೆ ಮಗನ ಶವ ತನ್ನನ್ನು ತಪ್ಪಿತಸ್ಥವಾಗಿಸುತ್ತದೆ ಎಂದು ಆ ಶವವನ್ನು ಸುಟ್ಟುಬಿಟ್ಟಿದ್ದಾಳೆ. ಬ್ರಿಟೀಷ್‌ ಕೋರ್ಟ್ ಆ ಭಾರತೀಯ ಮೂಲದ ಮಹಾತಾಯಿಯನ್ನುಈಗ ಅಪರಾಧಿ ಎಂದು ಘೋಷಿಸಿದೆ.

ಎರಡು ವರ್ಷಗಳ ಹಿಂದೆ ಜುಲೈಯಲ್ಲಿ ಆಕೆ ಪೊಂಟಕನ್ನದಲ್ಲಿರುವ ( Pontcanna, Cardiff) ಮನೆಯಲ್ಲಿ ಮಗ ಯಾಸೀನ್‌ ಇಗೆಯನ್ನು ನಾಯಯಿಯಂತೆ ಥಳಿಸಿ ಕೊಂದು ಬಳಿಕ ಶವವನ್ನು ಸುಟ್ಟು ಹಾಕಿದ್ದಾಳೆ. ಸಾರಾ ಇಗೆಯ (33) ಈ ಅಪರಾಧ ಕಾರ್ಡಿಫ್ ಕ್ರೌನ್‌ ಕೋರ್ಟಿನಲ್ಲಿ ಬುಧವಾರ ಸಾಬೀತಾಗಿದೆ. ನ್ಯಾಯಾಲಯ Sara Egeಗೆ ಶಿಕ್ಷೆಯ ಸ್ವರೂಪವನ್ನು ಇನ್ನೂ ಪ್ರಕಟಿಸಿಲ್ಲ.

ಮೊದಲು ಯಾಸೀನ್‌ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಸತ್ತಿದ್ದಾನೆಂದು ಭಾವಿಸಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅವನು ಸತ್ತು ಕೆಲವು ತಾಸು ಕಳೆದ ಬಳಿಕ ದೇಹ ಸುಟ್ಟಿರುವ ಸಂಗತಿ ತಿಳಿಯಿತು.

ಮಗನ ಸಾವಿಗೆ ಗಂಡನೇ ಹೊಣೆ. ಕೊಲೆಯ ಆರೋಪವನ್ನು ಹೊತ್ತುಕೊಳ್ಳದಿದ್ದರೆ ಗಂಡ ನನ್ನನ್ನು ಕೊಂದು ನನ್ನ ಪರಿವಾರದವರಿಗೂ ಹಿಂಸೆ ಕೊಡುವ ಬೆದರಿಕೆಯೊಡ್ಡಿದ್ದ ಎಂದು ಹೇಳಿ ಸಾರಾ ತಾನು ನಿರ್ದೋಷಿ ಎಂದು ವಾದಿಸಿದರೂ ನ್ಯಾಯಾಲಯ ಅವಳ ವಾದವನ್ನು ಒಪ್ಪಿಕೊಳ್ಳಲಿಲ್ಲ.

ಟ್ಯಾಕ್ಸಿ ಚಾಲಕನಾಗಿರುವ 38 ವರ್ಷದ ಯೂಸುಫ್ (Yousuf Ege) ಮಗನನ್ನು ಹಾಫಿಜ್‌ (ಖುರಾನ್‌ ಪಠನ) ಮಾಡುವ ಸಲುವಾಗಿ ಸಮೀಪದ ಮಸೀದಿಗೆ ಸೇರಿಸಿದ್ದ. ಆದರೆ ಯಾಸೀನ್‌ ಖುರಾನ್‌ ಬಾಯಿಪಾಠ ಮಾಡಲಿಲ್ಲ. ಈ ಸಿಟ್ಟಿನಲ್ಲಿ ಸಾರಾ ಮಗನನ್ನು ಥಳಿಸಿ, ಕೊಂದು, ಸುಟ್ಟುಹಾಕಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+