ಫೋರ್ಬ್ ಟಾಪ್ 20: ಸೋನಿಯಾ, ಸಿಂಗ್ ಗೆ ಸ್ಥಾನ

ಫೋರ್ಬ್ಸ್ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಅವರು 12ನೇ ಸ್ಥಾನ ಹಾಗೂ ಮನಮೋಹನ್ ಸಿಂಗ್ ಅವರು 19ನೇ ಸ್ಥಾನ ಗಳಿಸಿದ್ದಾರೆ.
ಮುಂಬೈ ದಾಳಿ, ಅಸ್ಸಾಂ ಗಲಭೆ ಹಾಗೂ ಆಂತರಿಕ ರಾಜಕೀಯ ಕದನಗಳನ್ನು ಸಮರ್ಥವಾಗಿ ನಿಭಾಯಿಸಿದ ಕಾರಣ ಎಐಸಿಐ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಶೇಷವೆಂದರೆ ಸೋನಿಯಾ ಗಾಂಧಿ ಅವರ ಪುತ್ರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಕೂಡಾ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಲ್ಲ ಸೂಕ್ತ ವ್ಯಕ್ತಿ ಎಂದು ಫೋರ್ಬ್ಸ್ ಪ್ರಕಟಿಸಿದೆ.
ಆಕ್ಸ್ ಫರ್ಡ್, ಕೇಂಬ್ರಿಡ್ಜ್ ನಲ್ಲಿ ವ್ಯಾಸಂಗ ಮಾಡಿರುವ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಕ ಎಂಬು ಫೋರ್ಬ್ಸ್ ಬಣ್ಣಿಸಿದೆ.
ಭಾರತ ಉದ್ಯಮಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿ ಹಾಗೂ ಆರ್ಸೆಲರ್ ಮಿತ್ತಲ್ ಸಿಇಒ ಲಕ್ಷ್ಮಿ ಮಿತ್ತಲ್ ಅವರು ಕೂಡಾ ಟಾಪ್ 50ಯೊಳಗೆ ಸ್ಥಾನ ಪಡೆದಿದ್ದಾರೆ. ಮುಖೇಶ್ ಅಂಬಾನಿ 37ನೇ ಸ್ಥಾನ ಹಾಗೂ ಲಕ್ಷ್ಮಿ ಮಿತ್ತಲ್ 47ನೇ ಸ್ಥಾನದಲ್ಲಿದ್ದಾರೆ.
ಒಬಾಮಾ ನಂ.1: ನಿರೀಕ್ಷೆಯಂತೆ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರು ಸತತವಾಗಿ ಎರಡನೇ ವರ್ಷ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.
ವಿಶ್ವದ ಪ್ರಭಾವಿ ನಾಯಕರ ಟಾಪ್ 10 ಪಟ್ಟಿ ಹೀಗಿದೆ:
1. ಬರಾಕ್ ಒಬಾಮಾ, ಯುಎಸ್ ಅಧ್ಯಕ್ಷ
2. ಏಂಜೆಲಾ ಮರ್ಕೆಲ್, ಜರ್ಮನಿಯ ಚಾನ್ಸೆಲರ್
3. ವ್ಲಾದಿಮಿರ್ ಪುಟಿನ್, ರಷ್ಯಾದ ಅಧ್ಯಕ್ಷ
4. ಬಿಲ್ ಗೇಟ್ಸ್, ಬಿಲ್ ಹಾಗೂ ಮಿಲಿಂಡಾ ಗೇಟ್ಸ್ ಫೌಂಡೇಷನ್ ಸಹ ಸ್ಥಾಪಕ
5. ಪೋಪ್ ಬೆನೆಡಿಕ್ಟ್ XVI, ಪೋಪ್, ರೋಮ್ ಕ್ಯಾಥೋಲಿಕ್ ಚರ್ಚ್
6. ಬೆನ್ ಬರ್ನಾಕೆ, ಚೇರ್ಮನ್, ಫೆಡರಲ್ ರಿಸರ್ವ್, ಯುಎಸ್ಎ
7. ಅಬ್ದುಲ್ಲಾ ಬಿನ್ ಅಬ್ದುಲ್ಲಾ ಅಜಿಜ್ ಅಲ್ ಸೌದ್, ಕಿಂಗ್ ಸೌದಿ ಅರೇಬಿಯಾ
8. ಮಾರಿಯೋ ಡ್ರಾಗಿ, ಅಧ್ಯಕ್ಷ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್
9. ಕ್ಸಿ ಜಿನ್ ಪಿಂಗ್, ಪ್ರಧಾನ ಕಾರ್ಯದರ್ಶಿ, ಕಮ್ಯೂನಿಸ್ಟ್ ಪಕ್ಷ, ಚೀನಾ
10. ಡೇವಿಡ್ ಕೆಮರೂನ್, ಪ್ರಧಾನಿ ಯುನೈಟೆಡ್ ಕಿಂಗ್ ಡಮ್












Click it and Unblock the Notifications