ಪ್ರಿಯಾಂಕಾ ಗಾಂಧಿ ಅಂಗಾಂಗ ದಾನ ಮಾಡ್ತಾರಂತೆ

ಇಲ್ಲಿನ ಶ್ರೀ ಗಂಗಾರಾಮ್ ಆಸ್ಪತ್ರೆಯಲ್ಲಿ (SGRH) ಅಂಗಾಂಗ ದಾನ ಘೋಷಣೆಯ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಅವರೂ ಭಾಗಿಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಗೈರು ಹಾಜರಾದರು.
ಆದರೆ ಅನುಪಸ್ಥಿತಿಯ ಬಗ್ಗೆ ಹೇಳಿಕೊಂಡ ಪ್ರಿಯಾಂಕಾ, ನಾಣು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ದುರದೃಷ್ಟವಷಾತ್ ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಅಂಗಾಂಗ ದಾನದ ಬಗ್ಗೆ ನಾನು ಉತ್ತಮ ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ತಾವು ಪ್ರಕಟಿಸಬಹುದು ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ SMS ಮೂಲಕ ಮಾಹಿತಿ ನೀಡಿದ್ದಾರೆ.
ಪತಿ ವಾದ್ರಾ ಅವರೂ:
SGRH ಆಸ್ಪತ್ರೆಯು ಅಂಗಾಂಗ ದಾನ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ ಖ್ಯಾತಿ ಹೊಂದಿದೆ. ಪ್ರಿಯಾಂಕಾ ಅವರ ಪತಿ ವಾದ್ರಾ ಅವರೂ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು. ಆದರೂ ಅಂಗಾಂಗ ದಾನ ದಾಖಲಾತಿ ಪುಸ್ತಕವನ್ನು ಅವರ ಮನೆಗೆ ಕಳಿಸಿ, ದಂಪತಿಯ ಒಪ್ಪಿಗೆ ಪತ್ರ ಪಡೆಯುತ್ತೇವೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಿಯಾಂಕಾ ಅವರ ಇಬ್ಬರು ಮಕ್ಕಳಾದ ರಿಯಾನ್ ಮತ್ತ ಮಿರಾಯಾ ಇದೇ ಆಸ್ಪತ್ರೆಯಲ್ಲಿ ಜನ್ಮ ತಾಳಿದ್ದರು.












Click it and Unblock the Notifications