ಮೆಕ್ ಡೊನಾಲ್ಡ್ ತಿಂಡಿಯಲ್ಲಿ ಸಿಕ್ತು ಮೂಗುನತ್ತು!

ತಕ್ಷಣ ಹರಸಾಹಸ ಪಟ್ಟು ಮಗುವಿನ ಬಾಯಿಗೆ ಕೈಹಾಕಿ ಉಪಾಯವಾಗಿ ತಿಂಡಿಯಲ್ಲಿ ಹೊರಗೆಳಿದಿದ್ದಾಳೆ. ತಿಂಡಿಯನ್ನು ಪುಡಿಪುಡಿ ಮಾಡಿ ನೋಡಿದಾಗ ಆಕೆಯ ಕಣ್ಣಿಗೆ ಬಿತ್ತು ಮೂಗುನತ್ತು. ಅದೂ ಬೆಳ್ಳಿಯದ್ದು!
ಸದ್ಯ ದೊಡ್ಡ ದುರಂತದಿಂದ ಪಾರಾದ ಎಂದು ಮಹಾತಾಯಿ ನಿಟ್ಟುಸಿರು ಬಿಟ್ಟಳಾದರೂ ತಕ್ಷಣ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದಾಳೆ. McDonald ಕಂಪನಿ ಸರಬರಾಜು ಮಾಡಿದ burrito ಎಂಬ ಮೊಟ್ಟೆ ತಿಂಡಿಯಲ್ಲಿ ಈ ದೊಡ್ಡ ಮೂಗುನತ್ತು ಸಿಕ್ಕಿದೆ.
ಆಶ್ಚರ್ಯದ ಸಂಗತಿಯೆಂದರೆ ತಿಂಡಿಯ ಮಾರಾಟ ಮಾಡಿದ ರೆಸ್ಟೋರೆಂಟಿನವರನ್ನು ಆಕೆ ತರಾಟೆಗೆ ತೆಗೆದುಕೊಳ್ಳಲು ಹೋದರೆ 'ಅಯ್ಯೋ! ಅಷ್ಟೇನಾ? ಅದಕ್ಕೆಲ್ಲ ಯಾಕೆ ರಂಪಾಟ ಮಾಡುತ್ತೀರೀ? ಇಂಥದ್ದೆಲ್ಲ ಸಿಗೋದು ಮಾಮೂಲು' ಎಂದು ಆಕೆಯನ್ನು ಸಾಗಹಾಕಿದ್ದಾರೆ. ಇದರಿಂದ ಮತ್ತಷ್ಟಯ ಸಿಟ್ಟಿಗೆದ್ದ ಮಹಿಳೆ ಸೀದಾ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಕುತೂಹಲದ ಸಂಗತಿಯೆಂದರೆ McDonald ಕಂಪನಿಯು ತಿಂಡಿಯನ್ನು ತಯಾರಿಸುವ ತನ್ನ ನೌಕರರಿಗೆ ಕಡಿಮೆ ಆಭರಣ ಧರಿಸುವಂತೆ ತಾಕೀತು ಮಾಡುತ್ತದೆ. ಆದರೂ ಇಷ್ಟೊಂದು ದೊಡ್ಡದ ಮೂಗುನತ್ತು ಅದ್ಹೇಗೆ ತಿಂಡಿಯಲ್ಲಿ ಕಾಣಿಸಿಕೊಂಡಿತೋ!?












Click it and Unblock the Notifications