ಗುಜರಾತ್: ಬಿಜೆಪಿಯಿಂದ ಮಸ್ಲಿಮರಿಗೆ ಮಣೆಯಿಲ್ಲ

gujarat-polls-no-muslim-candidates-in-bjp-first-list
ಅಹಮದಾಬಾದ್, ನ.23: ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮಣ್ಣುಮುಕ್ಕಿಸಲು ಹರಸಾಹಸಪಡುತ್ತಿರುವ ಗುಜರಾತ್ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಬಂಡಾಯದ ಬಿಸಿ ತಾಕಿದೆ. ಬುಧವಾರ ರಾತ್ರಿ ಬಿಡುಗಡೆ ಮಾಡಿದ್ದ 46 ಅಭ್ಯರ್ಥಿಗಳ ಹೆಸರುಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ರದ್ದುಪಡಿಸಲಾಗಿದೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.

ಮೊದಲು ಬಿಡುಗಡೆ ಮಾಡಲಾಗಿರುವ 52 ಅಭ್ಯರ್ಥಿಗಳ ಪಟ್ಟಿಯಲ್ಲಿ ಗುಜರಾತ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅರ್ಜುನ್ ಮೊಧವಾಡಿಯಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕ್ತಿ ಸಿನ್ಹಾ ಅವರಿಗೆ ಟಿಕೆಟ್ ನೀಡಲಾಗಿದೆ.

ಈ ಮಧ್ಯೆ 3ನೇ ಬಾರಿಗೆ ಮುಖ್ಯಮಂತ್ರಿಯಾಗಲು ಹೊರಟಿರುವ ಹಾಲಿ ಸಿಎಂ ನರೇಂದ್ರ ಮೋದಿ ಅವರು ಡಿಸೆಂಬರ್ 13ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಮೋದಿಗೆ ಮೂರನೆ ಬಾರಿಗೆ ಮಣಿನಗರ ಕಾಯಂ: ಗಮನಾರ್ಹವೆಂದರೆ 87 ಸ್ಥಾನಗಳಿಗೆ 83 ಅಭ್ಯರ್ಥಿಗಳನ್ನು ಆಖೈರುಗೊಳಿಸಿರುವ ಬಿಜೆಪಿ, ನರೇಂದ್ರ ಮೋದಿಗೆ ಮಣಿನಗರ್ ಕ್ಷೇತ್ರವನ್ನೇ ಮೀಸಲಿಟ್ಟಿದೆ. ಮೋದಿ, ಮೂರನೆಯ ಬಾರಿಗೆ ಮಣಿನಗರ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ. ಮಣಿನಗರ ಕ್ಷೇತ್ರಕ್ಕಾಗಿ 2ನೆಯ ಹಂತದಲ್ಲಿ ಡಿಸೆಂಬರ್ 17ರಂದು ಚುನಾವಣೆ ನಡೆಯಲಿದೆ.

ನವದೆಹಲಿಯಲ್ಲಿ ಈ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ ವರಿಷ್ಠರು ಮೊದಲ ಹಂತದ ಚುನಾವಣೆಗಾಗಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ ಅಹಮದಾಬಾದ್ ಸೇರಿದಂತೆ ಇನ್ನೂ ಒಂದೆರಡು ಕಡೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಅಂತಿಮ ಕ್ಷಣದಲ್ಲಿ ಕಣಕ್ಕಿಳಿಸಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಚುನಾವಣೆ ರಣತಂತ್ರವಾಗಿ ಪಕ್ಷವು ಸೌರಾಷ್ಟ್ರ ಭಾಗದಲ್ಲಿ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಸದ್ಯಕ್ಕೆ ಪ್ರಕಟಿಸಿಲ್ಲ. ಈ ಮಧ್ಯೆ 8 ಮಂದಿ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಲಭಿಸಿಲ್ಲ. ಇನ್ನು, 30 ವರ್ಷಕ್ಕಿಂತ ಕಡಿಮೆ ವಯಸ್ಸಿನ 10 ಯುವಕರಿಗೆ ಬಿಜೆಪಿ ಟಿಕೆಟ್ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+