ಉದ್ಯೋಗ ಇಲ್ದಿದ್ರೂ ಪತ್ನಿಗೆ ಜೀವನಾಂಶ ಕೊಡ್ಲೇಬೇಕು

'ತಾನು ಬಡವ ಮತ್ತು ನಿರುದ್ಯೋಗಿ ಎಂದು ಪತಿ ಹೇಳುವಂತಿಲ್ಲ. ತನ್ನ ವಿಚ್ಛೇದಿತ ಪತ್ನಿಯ ಪ್ರತಿ ತಿಂಗಳ ಜೀವನ ನಿರ್ವಹಣೆಯ ವೆಚ್ಚವನ್ನು ನೀಡುವುದು ಆತನ ಜವಾಬ್ದಾರಿ' ಎಂದು ನ್ಯಾಯಮೂರ್ತಿ ಜಿ. ರಾಜಸೂರ್ಯ ತೀರ್ಪಿನಲ್ಲಿ ಹೇಳಿದ್ದಾರೆ. 'ನಿರುದ್ಯೋಗಿಯಾದರೂ ಆತ ಒಂದಷ್ಟು ಹಣವನ್ನು ತನ್ನ ಪತ್ನಿಯ ಜೀವನ ನಿರ್ವಹಣೆಗಾಗಿ ನೀಡಬೇಕು' ಎಂದು ಅವರು ಹೇಳಿದರು.
ಕೌಟುಂಬಿಕ ನ್ಯಾಯಾಲಯವೊಂದು ಮಾರ್ಚ್ 3ರಂದು ಸದರಿ ದಂಪತಿಗೆ ವಿಚ್ಛೇದನ ನೀಡುವಾಗ ಮಧ್ಯಂತರವಾಗಿ ಪತಿರಾಯ ತನ್ನ ಪತ್ನಿಗೆ ಪ್ರತಿ ತಿಂಗಳು 2,000 ರೂ.ನೀಡಬೇಕು ಎಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಪೀಠ ಈ ತೀರ್ಪು ನೀಡಿದೆ.
ಗಮನಾರ್ಹವೆಂದರೆ 'ತನ್ನ ನಿರ್ವಹಣಾ ವೆಚ್ಚವನ್ನು ಮಾಸಿಕ 7,000 ರೂ. ಗೆ ಹೆಚ್ಚಿಸಬೇಕು' ಎಂದು ಪತ್ನಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ಇದೇ ವೇಳೆ ತಿರಸ್ಕರಿಸಿ, 2,000 ರೂ. ಸಾಕು ಎಂದು ಸ್ಪಷ್ಟಪಡಿಸಿತು.
ಇದೇ ವೇಳೆ, ನ್ಯಾಯಾಲಯದ ವೆಚ್ಚವಾಗಿ 3,000 ರೂ. ಗಳನ್ನು ಪತ್ನಿಗೆ ನೀಡುವಂತೆಯೂ ಪತಿಗೆ ಕೋರ್ಟ್ ಸೂಚಿಸಿತು. ಹಾಗೆಯೇ, 2007 ರಿಂದ ವಿಚ್ಛೇದನ ಪ್ರಕರಣವನ್ನು ಇತ್ಯರ್ಥಪಡಿಸದ ಕೌಟುಂಬಿಕ ನ್ಯಾಯಾಲಯವನ್ನು ತರಾಟೆಗೆ ತೆಗೆದುಕೊಂಡ ಮಧುರೈ ವಿಭಾಗೀಯ ಪೀಠವು ಇನ್ನು ಮೂರು ತಿಂಗಳಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಸೂಚಿಸಿತು.












Click it and Unblock the Notifications