ದುಬೈನಲ್ಲಿ ಗರ್ಭಿಣಿಗೆ ಚಿಕಿತ್ಸೆ ಅಲಭ್ಯ: ಮಗು ಸಾವು

27 ವಾರಗಳ ಗರ್ಭಿಣಿಯೊಬ್ಬರು ಕಳೆದ ವಾರ 6 ಖಾಸಗಿ ಆಸ್ಪತ್ರೆಗಳ ಅಂಗಳದಲ್ಲಿ ಮಲಗಿ, ತನಗೆ ತಕ್ಷಣ ಚಿಕಿತ್ಸೆ ನೀಡಿ ಎಂದು ಅಂಗಾಲಾಚಿದ್ದಾರೆ. ಆದರೆ ಯಾವೊಬ್ಬ ವೈದ್ಯನೂ ಆಕೆಯ ನೋವಿಗೆ ಸ್ಪಂದಿಸಿಲ್ಲ. ಕೊನೆಗೊಂದು ಆಸ್ಪತ್ರೆ ಆಕೆಯ ಚಿಕಿತ್ಸೆಗೆ ಮುಂದಾಯಿತು. ಆದರೆ ನವಜಾತ ಶಿಶು ಜನಿಸಿದ ಕೆಲವೇ ಗಂಟೆಗಳಲ್ಲಿ ಅಸುನೀಗಿತು. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದರೆ ಮಗು ಉಳಿಯುತ್ತಿತ್ತು ಎಂದು ಕೊನೆಗೂ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಗಮನಾರ್ಹವೆಂದರೆ, ಆ ಆರೂ ಆಸ್ಪತ್ರೆಗಳು ನೀಡಿದ ಕ್ಷುಲ್ಲಕ ಕಾರಣವೆಂದರೆ 'ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಮೊದಲೇ ಬುಕ್ಕಿಂಗ್ ಮಾಡಿಸಬೇಕಿತ್ತು!' ಎಂದು. 'ಬೆಡ್ ಇಲ್ಲದಿದ್ದರೇನಂತೆ ಖಾಲಿ ನಿಂತಿರುವ ಆಂಬುಲೆನ್ಸ್ ವಾಹನವನ್ನಾದರೂ ಕಳುಹಿಸಿಕೊಡಿ' ಎಂದು ಕೇಳಿದರೂದರೆ ಅಷ್ಟೂ ಆಸ್ಪತ್ರೆಗಳು ಅವರ ಮನವಿಯನ್ನು ನಿರ್ಲಕ್ಷ್ಯಿಸಿವೆ.
ಬಾಧಿತ ಗರ್ಭಿಣಿಯ ಹೆಸರು ಪುಷ್ಪಾ ಕೆ ಜಾಯ್. ಶಾರ್ಜಾದಲ್ಲಿ ಶಿಕ್ಷಕಿಯಾಗಿಯಾಗಿರುವ 34 ವರ್ಷದ ಈ ಮಹಿಳೆ ನವೆಂಬರ್ 8 ರಂದು ರಾತ್ರಿ 10 ಗಂಟೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದಕ್ಕೂ ಮುನ್ನ ಸುಮಾರು 10 ಗಂಟೆಗಳ ಕಾಲ 'ಲೇಬರ್ ಪೈನ್' ಅನುಭವಿಸುತ್ತಾ ದುಬೈನಲ್ಲಿರುವ 6 ಆಸ್ಪತ್ರೆಗಳನ್ನು ಪುಷ್ಪಾ ಎಡತಾಕಿದ್ದರು.












Click it and Unblock the Notifications