ಮೋದಿ 3 ಡಿ ಅವತಾರಕ್ಕೆ 216 ಕೋಟಿ ಖರ್ಚು

Narendra Modi's 3D avatar irks Oppn
ಅಹಮದಾಬಾದ್, ನ.19: ವಿಭಿನ್ನ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಎಲ್ಲರನ್ನು ಸೆಳೆಯುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಹೊಸ ವಿಕ್ರಮ ಸಾಧಿಸಿದ್ದಾರೆ. ತಂತ್ರಜ್ಞಾನ ಬಳಕೆ ಮಾಡಿ ಏಕಕಾಲಕ್ಕೆ ವಿವಿಧೆಡೆ ಹೇಗೆ ಪ್ರಚಾರ ಮಾಡಬಹುದು ಎಂಬುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ಆದರೆ, ಮೋದಿ ಅವರ ಈ 2ಡಿ ಪ್ರಚಾರ ವಿಧಾನಕ್ಕೆ ವಿಪಕ್ಷಗಳು ಕಿಡಿಕಾರಿದೆ.

ನರೇಂದ್ರ ಮೋದಿ ಅವರು ಏಕಕಾಲಕ್ಕೆ ನಾಲ್ಕು ನಗರಗಳಲ್ಲಿ ಭಾನುವಾರ(ನ.18) ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾರೆ. ಅಹಮದಾಬಾದ್, ವಡೋದರಾ, ರಾಜ್ ಕೋಟ್ ಮತ್ತು ಸೂರತ್ ನ ಜನತೆ ಏಕ ಕಾಲಕ್ಕೆ ಈ ಹೈಟೆಕ್ ಪ್ರಚಾರ ಭಾಷಣಕ್ಕೆ ಸಾಕ್ಷಿಯಾದರು. 3ಡಿ ತಂತ್ರಜ್ಞಾನ ಬಳಸಿ ಮೂರು ಆಯಾಮಗಳಲ್ಲಿ ಮೋದಿಯನ್ನು ತೋರಿಸಲಾಗಿತ್ತು.

3ಡಿ ಹೋಲೊಗ್ರಾಫಿಕ್ ಟೆಕ್ನಾಲಜಿ ಮತ್ತು ಸೆಟಲೈಟ್ ಸಂಪರ್ಕದ ಮೂಲಕ ಮೋದಿ ಗಾಂಧಿ ನಗರದ ಸ್ಟುಡಿಯೋದಿಂದ ಏಕ ಕಾಲಕ್ಕೆ ನಾಲ್ಕೂ ಸಮಾವೇಶಗಳನ್ನುದ್ದೇಶಿಸಿ ಮಾತನಾಡಿದ್ದರು.

ಅಹ್ಮದಾಬಾದಿನಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿದ್ದು, ಮಾಜಿ ಸಚಿವ ಮತ್ತು ಮೋದಿಯ ಆಪ್ತ ಅಮಿತ್ ಶಾ ಹಾಗೂ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಪುರುಷೋತ್ತಮ್ ರೂಪಾಲ ಉಪಸ್ಥಿತರಿದ್ದರು. ನಾಲ್ಕು ಕಡೆ ಏಕಕಾಲಕ್ಕೆ ನೇರ ಪ್ರಸಾರದಲ್ಲಿ ಈ ರೀತಿ ಪ್ರಚಾರ ಮಾಡಿದ್ದು ದೇಶದಲ್ಲಿ ಇದೇ ಮೊದಲು ಎನ್ನಬಹುದು.

ಕೇಶುಭಾಯಿ ಕಿಡಿ: 3ಡಿ ವ್ಯವಸ್ಥೆಗೆ ಸುಮಾರು 219 ಕೋಟಿ ರು ವೆಚ್ಚವಾಗಿದೆ. ಮೋದಿ ನಡೆಸಿದ ಪ್ರತಿ ಸಾರ್ವಜನಿಕ ಸಮಾವೇಶದ ವೆಚ್ಚ ಸುಮಾರು 54 ಕೋಟಿ ರು ಗಳಾಗುತ್ತದೆ ಎಂದು ಗುಜರಾತ್ ಪರಿವರ್ತನ್ ಪಾರ್ಟಿ(ಜಿಪಿಪಿ) ಮುಖಂಡ ಕೇಶುಭಾಯಿ ಪಟೇಲ್ ಆರೋಪಿಸಿದ್ದಾರೆ.

ಗುಜರಾತಿನ ಸಮಸ್ಯೆಗಳಿಗೆ ಮೋದಿಯೇ ನೇರ ಕಾರಣ, ದುಂದು ವೆಚ್ಚ ಮಾಡುವ ಮೂಲಕ ಮತ್ತೊಮ್ಮೆ ತಾವೆಷ್ಟು ಜನಪರ ಎಂಬುದನ್ನು ಮೋದಿ ಸಾಬೀತುಮಾಡಿದ್ದಾರೆ ಎಂದು ಕೇಶುಭಾಯಿ ವ್ಯಂಗ್ಯ ಮಾಡಿದ್ದಾರೆ.

ಡಿಸೆಂಬರ್ 20 ರ ನಂತರ ಜನರ ಆಕ್ರೋಶದ ಸುನಾಮಿ ಬಿಜೆಪಿಯನ್ನು ಗುಜರಾತಿನಿಂದ ಕಿತ್ತೊಗೆಯುವುದನ್ನು ನಾನು ನೋಡಬೇಕಿದೆ ಎಂದು ಪಟೇಲ್ ಹೇಳಿದರು.

ನಾನು ಹನುಮಂತ ನಿಜ: ಮೋದಿ ಒಬ್ಬ ಕೋತಿ ಎಂದು ಕಾಂಗ್ರೆಸ್ ನಾಯಕರೊಬ್ಬರು ಹಾಸ್ಯ ಮಾಡಿದ್ದನ್ನು ಮೋದಿ ಸ್ವಾಗತಿಸಿದ್ದಾರೆ. ಬಹುಶಃ ಕಾಂಗ್ರೆಸ್ ನಾಯಕರಿಗೆ ರಾಮಾಯಣ ನೆನಪಿಲ್ಲ ಎಂದು ಕಾಣುತ್ತದೆ. ವಾನರ ಸೈನ್ಯವೇ ರಾವಣನ ದಹನಕ್ಕೆ ಸಹಾಯ ಮಾಡಿದ್ದು ಎಂಬುದನ್ನು ಓದಿ ತಿಳಿದುಕೊಳ್ಳಲಿ.

ನಾನು ಹನುಮಾನ್ ಹಾಗೂ ಕೋತಿ ಎಂದು ಕರೆಸಿಕೊಳ್ಳುವುದರಲ್ಲಿ ನನಗೆ ಯಾವುದೇ ಮುಜುಗರವಿಲ್ಲ. ಇನ್ನೊಬ್ಬ ಕಾಂಗ್ರೆಸ್ ನಾಯಕರು ನನ್ನನ್ನು ಇಲಿ ಎಂದು ಕರೆದಿದ್ದಾರೆ.

ಇಲಿ ಅಥವಾ ಮೂಷಿಕ ಗಣಪತಿಯ ವಾಹನ ಎಂಬುದು ಅವರಿಗೆ ತಿಳಿದಿಲ್ಲವೇ? ಗಣಪತಿಯನ್ನು ಹೊತ್ತು ತಿರುಗುವ ಸೌಭಾಗ್ಯ ಎಲ್ಲರಿಗೂ ಎಲ್ಲಿ ಸಿಗುತ್ತದೆ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+