ಕೊನೆಗೂ ಸಂಬಳ ಬಟವಾಡೆ ಮಾಡಿದ ಕಿಂಗ್ ಮಲ್ಯ

vijay-mallya-kfa-employees-start-getting-salaries
ಮುಂಬೈ, ನ.19: ಆರೇಳು ತಿಂಗಳಿಂದ ಸಂಬಳಗಳಿಲ್ಲದೆ ಪಡದಾಡುತ್ತಿದ್ದ ಕಿಂಗ್ ಫಿಶರ್ ಏರ್ ಲೈನ್ಸ್ (KFA) ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಸಿಕ್ಕಿದೆ. ದೀಪಾವಳಿ ವೇಳೆಗೇ 3 ತಿಂಗಳ ಸಂಬಳವನ್ನಾದರೂ ನೀಡುವುದಾಗಿ ಆಶ್ವಾಸನೆ ನೀಡಿದ್ದ KFA ಇದೀಗ ಹಲವು ಸಿಬ್ಬಂದಿಗೆ ಸಂಬಳ ಬಟವಾಡೆ ಮಾಡಿದೆ.

ಕಂಪನಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಉದ್ಯೋಗಿಗಳು ಇದ್ದಾರೆ. ಆದರೆ ಎಲ್ಲರಿಗೂ ಸಂಬಳಗಳು ಪಾವತಿಯಾಗಿಲ್ಲ. ಬದಲಿಗೆ ಮಾಸಿಕ 20,000 ರೂ. ಗಿಂತ ಕಡಿಮೆ ಸಂಬಳ ಪಡೆಯುವವರಿಗಷ್ಟೇ ಆದ್ಯತೆಯ ಮೇರೆಗೆ ವಿತರಣೆಯಾಗುತ್ತಿದೆ.

ಅಂದರೆ ಹೆಚ್ಚು ಸಂಬಳ ಪಡೆಯುವ ತಾಂತ್ರಿಕ ಸಿಬ್ಬಂದಿ, ಪೈಲಟ್, ಇಂಜಿನಿಯರ್ ಮುಂತಾದ ಆಯಕಟ್ಟಿನ ಉದ್ಯೋಗಿಗಳಿಗೆ ಸಂಬಳಗಳನ್ನು ನೀಡಲು KFA ಇನ್ನೂ ಶಕ್ತ್ಯವಾಗಿಲ್ಲ. ಕಳೆದ ವಾರ ಒಂದಷ್ಟು ಸಿಬ್ಬಂದಿಗೆ ಸಂಬಳಗಳು ಸಿಕ್ಕಿವೆ.

20,000 ರೂ. ಸಂಬಳ ಪಡೆದ ಉದ್ಯೋಗಿಗಳಲ್ಲಿ ಈ ಮಾಹಿತಿ ನೀಡಿದ್ದು, ಕೆಲವರಿಗೆ ಈ ವಾರ ಸಂಬಳ ಬಟವಾಡೆ ಮಾಡುವುದಾಗಿ ಕಂಪನಿ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಉದ್ಯೋಗಿಗಳಿಗೆ ಆರೇಳು ತಿಂಗಳಿಂದ ಸಂಬಳ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+