'ಸೂರತ್ ಸುರಸುಂದರಿ' ನಮಿತಾಗೆ ಮೋದಿ ಗಾಳ

ಅವರು ದಕ್ಷಿಣ ಭಾರತದಲ್ಲಿ ಚಿತ್ರರಸಿಕರ ನಿದ್ದೆಗೆಡಿಸಿರುವ ಜನಪ್ರಿಯ ನಟಿ ನಮಿತಾ ಮೂಲತಃ ಗುಜರಾತಿನ ಸೂರತ್ ಸುರಸುಂದರಿ. 1998ರಲ್ಲಿ ಮಿಸ್ ಸೂರತ್ ಆಗಿ ಆಯ್ಕೆಯಾಗಿದ್ದರು. ಇಂತಿಪ್ಪ ನಮಿತಾ, ಗುಜರಾತ್ ಸಿಎಂ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಸಲಹೆಯಂತೆ ನಮಿತಾ ರಾಜಕೀಯಕ್ಕಿಳಿಯಲಿದ್ದಾರಂತೆ.
ಸದ್ಯ ಚೆನ್ನೈನಲ್ಲಿ ನೆಲೆಸಿರುವ ಈ ಸುರಸುಂದರಿ ತಮಿಳುನಾಡು ರಾಜಕೀಯಕ್ಕೆ ಅಂಕಿತವಾಗುವ ಅಂದಾಜಿದೆ. ಇದೇ ವೇಳೆ, ಚುನಾವಣೆ ರಣಾಂಗಣದಲ್ಲಿರುವ ಗುಜರಾತಿಗೆ ಬಂದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆಯೂ ನಟಿ ನಮಿತಾಗೆ ಮೋದಿ ಸೂಚನೆ ನೀಡಿದ್ದಾರೆ.
ನಮ್ಮಿ ಅಭಿಮಾನಿಗಳಲ್ಲಿ ಆತಂಕದ ಕಾರ್ಮೋಡ:
ನಮಿತಾ ರಾಜಕೀಯ ಸೇರುವ ಸುದ್ದಿಯಿಂದ ಚಿತ್ರರಸಿಕರು ನಿರಾಶೆಗೊಂಡಿದ್ದಾರೆ. ನಮಿತಾ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರಾ? ಇನ್ನು, ತಮ್ಮ ಆರಾಧ್ಯದೇವತೆಯ ದರುಶ ಸಿಗುವುದಿಲ್ಲವಾ? ಎಂದು ಆಕೆಯ ಅಭಿಮಾನಿಗಳು ಆತಂಕದಿಂದ ಕೇಳುತ್ತಿದ್ದಾರೆ.
ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಮಿತಾ ದಿವ್ಯವಾಗಿ ವಿಜೃಂಭಿಸಿದ್ದಾರೆ.












Click it and Unblock the Notifications