ಹೈದಾರಾಬಾದಿನಲ್ಲಿ ಮತ್ತೆ ಚಿಗುರೊಡೆದ ಐಟಿ

Hyderabad IT sector demand
ಹೈದರಾಬಾದ್, ನ.15: ಮುತ್ತಿನ ನಗರಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ಮತ್ತೊಮ್ಮೆ ಚಿಗುರೊಡೆದಿದೆ. ಇದರ ಪರಿಣಾಮ ರಿಯಲ್ ಎಸ್ಟೇಟ್ ಕ್ಷೇತ್ರ ಕೂಡಾ ಸಂತಸಗೊಂಡಿದೆ.

ಸೈಬರ್ ಸಿಟಿಯಲ್ಲಿ ಕಚೇರಿ ಸ್ಥಳಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ಪ್ರಸಕ್ತ ವರ್ಷದಲ್ಲಿ ಐಟಿ ಕ್ಷೇತ್ರದಲ್ಲಿ ಶೇ 15 ರಷ್ಟು ಪ್ರಗತಿ ಕಾಣುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಐಟಿ ಕಚೇರಿ ಸ್ಥಳ ಸುಮಾರು 20 ಮಿಲಿಯನ್ ಚ.ಅ ವಿಸ್ತೀರ್ಣ ದಾಟುವ ನಿರೀಕ್ಷೆಯಿದೆ. ದೇಶದ ಶೇ 12 ರಷ್ಟು ಐಟಿ ಕಚೇರಿ ಸ್ಥಳದ ಪ್ರತಿನಿಧಿಯಾಗಿ ಹೈದರಾಬಾದ್ ಬೆಳೆಯಲಿದೆ ಎಂದು ಆಂಧ್ರಪ್ರದೇಶದ ಐಟಿ ಸಚಿವ ಪೊನ್ನಲ ಲಕ್ಷ್ಮಯ್ಯ ಅವರು elindia ಸಮಾರಂಭದಲ್ಲಿ ಹೇಳಿದ್ದಾರೆ.

2011-12 ರಲ್ಲಿ ಸುಮಾರು 60 ಲಕ್ಷ ಚ.ಅ ವಿಸ್ತೀರ್ಣದ ಐಟಿ ಕಚೇರಿ ಸ್ಥಳ ಹೊಂದಿತ್ತು. ಅದರ ಹಿಂದಿನ ವರ್ಷ 50 ಲಕ್ಷ ಚ.ಅ ಕಚೇರಿ ಸ್ಥಳವಿತ್ತು. ನಂತರ ಶೇ 70ರಷ್ಟು ಕಂಪನಿಗಳು ತಮ್ಮ ಕಚೇರಿಗಳ ವಿಸ್ತರಣೆ ಮಾಡಿದ್ದವು.

ಹೈದರಾಬಾದಿನಲ್ಲಿ ಈಗ ಸುಮಾರು 1,206 ಐಟಿ ಕಂಪನಿಗಳಿದ್ದು, ದೇಶದ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಗಳ ಒಟ್ಟಾರೆ ಉದ್ಯೋಗಿಗಳಲ್ಲಿ ಶೇ 12 ರಷ್ಟು ಮಾನವ ಸಂಪನ್ಮೂಲವನ್ನು ಹೊಂದಿದೆ.

ಮತ್ತೊಮ್ಮೆ ಐಟಿ ಬಂಡವಾಳ ಹೂಡಿಕೆ ಪ್ರದೇಶ ಸೃಷ್ಟಿಸಿ ಮುಂದಿನ 25 ವರ್ಷಗಳಲ್ಲಿ ಸುಮಾರು 15 ಲಕ್ಷ ನೇಮಕಾತಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಸಚಿವ ಲಕ್ಷ್ಮಯ್ಯ ಹೇಳಿದ್ದಾರೆ.

ಇ ಆಡಳಿತಕ್ಕೆ ಒತ್ತು ಕೊಟ್ಟಿರುವ ಆಂಧ್ರಪ್ರದೇಶ 2013 ಅಂತ್ಯದೊಳಗೆ ಎಲ್ಲಾ ಪಂಚಾಯತಿಗಳಿಗೂ ಇಂಟರ್ನೆಟ್ ಸೌಲಭ್ಯ ಒದಗಿಸಲು ಬದ್ಧವಾಗಿದೆ. ಇದಕ್ಕಾಗಿ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್ವರ್ಕ್ ನೆರವು ಪಡೆಯಲಾಗಿದೆ ಸುಮಾರು 2,000 ಕೋಟಿ ರು ವೆಚ್ಚದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಲಕ್ಷ್ಮಯ್ಯ ಹೇಳಿದ್ದಾರೆ.

ಐಟಿ ಕ್ಷೇತ್ರದ ಅಲಿಖಿತ ನಿಯಮದ ಪ್ರಕಾರ ಪ್ರತಿ 100 ಚ.ಅಡಿಗೆ ಒಂದು ಕೆಲಸ ಸೃಷ್ಟಿಸಬೇಕಾಗುತ್ತದೆ. 2010-11ರಲ್ಲಿ ಸುಮಾರು 60,000 ಸಾವಿರ ಜನರನ್ನು ನೇಮಕಾತಿ ಮಾಡುವ ಕಡೆ 15,000 ಅಭ್ಯರ್ಥಿಗಳು ಮಾತ್ರ ಉದ್ಯೋಗ ಸೇರಿದ್ದಾರೆ.

ಸರ್ಕಾರಿ ಸ್ವಾಮ್ಯದ ಜವಹಾರ್ ಲಾಲ್ ಜ್ಞಾನ ಕೇಂದ್ರದ ಮೂಲಕ ಕ್ಯಾಂಪಸ್ ಸಂದರ್ಶನ ನಡೆಸಿದ 33 ಕಂಪನಿಗಳು 2009-10 ರಲ್ಲಿ 2,030 ಫ್ರೆಶರ್ ಗಳನ್ನು ಮಾತ್ರ ಆಯ್ಕೆ ಮಾಡಿದೆ.

2010-11 ರಲ್ಲಿ ಈ ಸಂಖ್ಯೆ 1,370ಕ್ಕೆ ಇಳಿದಿದೆ. ಆಂಧ್ರದಲ್ಲಿ ಇರುವ ಟೆಕ್ಕಿ ತಲೆಗಳ ಲೆಕ್ಕ ಹಾಕಿದರೆ 2.7 ಲಕ್ಷ ದಾಟುವುದಿಲ್ಲ. ಅಚ್ಚರಿ ಎಂದರೆ ಕಳೆದ ಆರು ತಿಂಗಳಿನಲ್ಲಿ 4 ಮಿಲಿಯನ್ ಚದರ ಅಡಿ ಭೂ ಪ್ರದೇಶ ಐಟಿ ಕಂಪನಿಗಳಿಗೆ ಬುಕ್ ಆಗಿತ್ತು. ಹೀಗಾಗಿ ತೆಲಂಗಾಣ ಮೂಲದ ಪದವೀಧರರು ಬೆಂಗಳೂರು ಬಸ್ ಹತ್ತಿದ್ದರು. ಈಗ ಮತ್ತೊಮ್ಮೆ ಹೈದರಾಬಾದ್ ಕಡೆ ತೆರಳುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+