ಮಕ್ಕಳು ತಿನ್ನುವ ಚಾಕೊಲೇಟಿನಲ್ಲಿ ಹುಳುಗಳು ಪ್ರತ್ಯಕ್ಷ!

kasargod-worms-found-in-branded-flashbag-chocolate
ಕಾಸರಗೋಡು, ನ.14: ಮಕ್ಕಳ ದಿನಾಚರಣೆ ಕಾಲಿಟ್ಟಿದೆ. ಮಕ್ಕಳಿಗೆ ಪಂಚಪ್ರಾಣವೆನಿಸುವ ಚಾಕೊಲೇಟಿನಲ್ಲಿ ಹುಳುಗಳೂ ಪ್ರತ್ಯಕ್ಷವಾಗಿವೆ. ನಗರದ ಮೇಲಾಪರಂಬ ಬಳಿಯಿರುವ ಬೇಕರಿಯಲ್ಲಿ ನಿನ್ನೆ ಮಂಗಳವಾರ ಖರೀದಿಸಿದ ಚಾಕೊಲೇಟಿನಲ್ಲಿ ಈ ಹುಳುಗಳು ಪ್ರತ್ಯಕ್ಷವಾಗಿವೆ!

ಚಾಕೊಲೆಟ್ ತಿಂದ ಫಸಲ್ ರಹಮಾನ್ ಅವರ 2 ವರ್ಷದ ಮಗು ವಾಂತಿ ಮಾಡಿಕೊಂಡಾಗ ಅನುಮಾನ ಬಂದು ಚಾಕೊಲೇಟಿನತ್ತ ದೃಷ್ಟಿ ಹರಿಸಿದಾಗ ಅದರಲ್ಲಿ ಹುಳುಗಳು ಇದ್ದುದು ಪತ್ತೆಯಾಗಿವೆ.

ಈ ಚಾಕೊಲೆಟ್ ಸ್ಥಳೀಯವಾಗಿ ತಯಾರಾಗಿದ್ದು, ಪೊಟ್ಟಣದ ಮೇಲೆ ಚಾಕೊಲೆಟ್ ತಯಾರಿಸಿದ ದಿನಾಂಕ ಸೇರಿದಂತೆ ಯಾವುದೇ ಮೂಲ ವಿವರ ನಮೂದಾಗಿಲ್ಲ. Flashbag ಬ್ರ್ಯಾಂಡ್ ಹೆಸರಿನ ಈ ಚಾಕೊಲೆಟ್, ಮಲಪ್ಪುರಂನ ತಿರೂರಿನ ವ್ಯಾಪಾರಿಯೊಬ್ಬರು ಈ ಚಾಕೊಲೆಟ್ ವಿತರಣೆ ಮಾಡಿದ್ದಾರೆ ಎಂದು ಕಾಸರಗೋಡು ವೃತ್ತದ ಆಹಾರ ನಿರೀಕ್ಷಕ ಎಂ ಟಿ ಅನೂಪ್ ಕುಮಾರ್ ಹೇಳಿದ್ದಾರೆ.

ಚಾಕೊಲೇಟಿನಲ್ಲಿನ ಗೋಡಂಬಿ/ಬಾದಾಮಿಗೆ ಹುಳುಗಳು ಆಕರ್ಷಿತಗೊಂಡಿರಬಹುದು. ಹಾಗಾಗಿ ಚಾಕೊಲೇಟಿನಲ್ಲಿ ಹುಳುಗಳು ಪ್ರತ್ಯಕ್ಷವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+