ಕೆಜೆಪಿ ಹಂಗಾಮಿ ಅಧ್ಯಕ್ಷ ಧನಂಜಯ್ ಬಫೂನ್

Belur Gopalakrishna
ಹಾಸನ, ನ.13: ವರ್ಷಕ್ಕೊಮ್ಮೆ ಮಾತ್ರ ಭಕ್ತಾದಿಗಳಿಗೆ ದರುಶನ ನೀಡುವ ಹಾಸನಾಂಬೆಯ ಆಶೀರ್ವಾದ ಬೇಡಿ ಬಂದ ಸಾಗರದ ಬಿಜೆಪಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕೆಜೆಪಿ ಹಂಗಾಮಿ ಅಧ್ಯಕ್ಷ ಧನಂಜಯ್ ಮೇಲೆ ಹರಿಹಾಯ್ದಿದ್ದಾರೆ.

ಕರ್ನಾಟಕ ಜನತಾ ಪಕ್ಷದ ಹಂಗಾಮಿ ಅಧ್ಯಕ್ಷ ಧನಂಜಯ್ ಕುಮಾರ್ ಒಬ್ಬ ಬಫೂನ್. ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಕೊಂಡಿರುವುದರಿಂದ ಕೆಜೆಪಿ ನೆಲಕಚ್ಚುವುದು ಖಂಡಿತ ಎಂದು ಗೋಪಾಲಕೃಷ್ಣ ಹೇಳಿದ್ದಾರೆ.

ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರಿಗೆ ಎಲ್ಲೂ ಉಳಿಗಾಲವಿಲ್ಲ. ಯಡಿಯೂರಪ್ಪ ಸಿದ್ದಲಿಂಗಸ್ವಾಮಿ, ಧನಂಜಯ್ ಕುಮಾರ್ ಜೋಡಿ ಚೆನ್ನಾಗಿದೆ ಎಂದು ಶಾಸಕ ಬೇಳೂರು ವ್ಯಂಗ್ಯವಾಡಿದರು.

ಯಡಿಯೂರಪ್ಪ ಅವರು ಬಿಜೆಪಿ ತೊರೆದರೆ ತೊಂದರೆ ಏನಿಲ್ಲ. ಅವರು ಹೋದರೆ ಭಾರಿ ನಷ್ಟವಾಗುತ್ತದೆ ಎಂದು ಹಲವರು ಭಯ ಪಡುತ್ತಿದ್ದಾರೆ. ಯಡಿಯೂರಪ್ಪ ಬಿಜೆಪಿ ಬಿಟ್ಟ ತಕ್ಷಣ ಸರ್ಕಾರ ಏನು ಪತನವಾಗುವುದಿಲ್ಲ. ಜಗದೀಶ್ ಶೆಟ್ಟರ್ ಅವರ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ಶಾಸಕ ಗೋಪಾಲಕೃಷ್ಣ ಹೇಳಿದರು.

ರಾಮ ರಾಜ್ಯದ ಗಾಂಧೀಜಿ ಕನಸು ನನಸಾಗದಿರುವುದಕ್ಕೆ ರಾಷ್ಟ್ರೀಯ ಪಕ್ಷಗಳೇ ಕಾರಣ. ಪ್ರಾದೇಶಿಕ ಪಕ್ಷಗಳಿದ್ದರೆ ಕೇಂದ್ರದ ಮೂಗು ಹಿಡಿದು ಕೆಲಸ ಮಾಡಿಸಬಹುದು. ಮುಂದಿನ ಹತ್ತು ಕರ್ನಾಟಕವನ್ನು ಮಾದರಿ ರಾಜ್ಯ ಮಾಡಬೇಕೆಂಬುದು ನನ್ನ ಗುರಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂಬುದು ಸಾಬೀತಾಗಿರುವ ಸಂಗತಿ. ಕೆಜೆಪಿ ಕೂಡಾ ಹೆಚ್ಚುಕಾಲ ಉಳಿಯುವುದಿಲ್ಲ. ಯಡಿಯೂರಪ್ಪ ಅವರ ಕನಸು ನನಸಾಗುವುದಿಲ್ಲ ಎಂದು ಗೋಪಾಲಕೃಷ್ಣ ಹೇಳಿದರು.

ಬಿಜೆಪಿ ಪಕ್ಷದ ಹಿರಿಯ ಮುಖಂಡ, ಸಂಸತ್ ಸದಸ್ಯರಾದ ಅನಂತ್‌ ಕುಮಾರ್ ಅವರು ಇಷ್ಟರಲ್ಲಾಗಲೇ ಮುಖ್ಯಮಂತ್ರಿಯಾಗಬೇಕಾಗಿತ್ತು. ಆದರೆ ಅವರಿಗೆ ಸಿಎಂ ಹುದ್ದೆ ತಪ್ಪಿಸಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಈ ಹಿಂದೆ ಬಾಂಬ್ ಸಿಡಿಸಿದ್ದರು.

ನನ್ನ ರಾಜಕೀಯ ಗುರುಗಳು ಬಂಗಾರಪ್ಪನವರು. ಅವರಿಂದ ನಾನು ರಾಜಕೀಯ ಕಲಿತೆ ಮತ್ತು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಪುಟ್ಟಸ್ವಾಮಿಯವರಿಗೆ ಯಾಕೆ ಸ್ಥಾನ ನೀಡಿದರು? ಸದಾನಂದ ಗೌಡ ಅವರನ್ನು ಸ್ಥಾನದಿಂದ ಕೆಳಗಿಳಿಸಿರುವುದು ಸಾರ್ವಜನಿಕವಾಗಿ ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಸದಾನಂದ ಗೌಡರಿಗೆ ರಾಜ್ಯಾದ್ಯಕ್ಷ ಸ್ಥಾನ ನೀಡಬೇಕು ಎಂದು ಶಾಸಕ ಬೇಳೂರು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಯಡಿಯೂರಪ್ಪ ಮಂತ್ರಾಲಯಕ್ಕೆ : ಕೆಜೆಪಿ ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ತಮ್ಮ ಆಪ್ತರ ಜೊತೆ ಸೇರಿ ಮಂಗಳವಾರ ಸಂಜೆ ರಾಯಚೂರಿಗೆ ತೆರಳಲಿದ್ದಾರೆ. ಬುಧವಾರ ಬೆಳಗೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಆಶೀರ್ವಾದ ಬೇಡಲಿದ್ದಾರೆ.

ಮುಂದಿನ ವಾರದಿಂದ ರಾಜ್ಯ ಪ್ರವಾಸ ಆರಂಭಿಸುವ ಸಾಧ್ಯತೆಯಿದ್ದು, ಈ ಬಗ್ಗೆ ಇನ್ನೂ ಚರ್ಚೆ ನಡೆದಿದೆ. ಯಡಿಯೂರಪ್ಪ ಅವರ ಪ್ರವಾಸದ ವೇಳಾಪಟ್ಟಿ ಇನ್ನೂ ಸಿದ್ದವಾಗಿಲ್ಲ ಎಂದು ಕೆಜೆಪಿ ಮೂಲಗಳು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+