ಬೆಂಗಳೂರು-ಬೆಳಗಾವಿ ನಡುವೆ ಸ್ಪೈಸ್ ಜೆಟ್ ವಿಮಾನ

ಕರ್ನಾಟದಲ್ಲಿ ಸ್ಪೈಸ್ ಜೆಟ್ ಸಂಸ್ಥೆಯ ನಾಲ್ಕನೇ ತಾಣವಾಗಿ ಬೆಳಗಾವಿ ಆಯ್ಕೆಗೊಂಡಿದೆ. ಸ್ಪೈಸ್ ಜೆಟ್ ವಿಮಾನಗಳು ಈಗಾಗಲೇ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ನಗರದಲ್ಲಿ ಸಂಚರಿಸುತ್ತಿದೆ.
ಬೆಂಗಳೂರು ಬೆಳಗಾವಿ ದೈನಂದಿನ ವಿಮಾನ SG3301 ಬೆಂಗಳೂರು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಳಗ್ಗೆ 7.40 ಗಂಟೆಗೆ ಬಿಟ್ಟು ಬೆಳಗಾವಿಯನ್ನು 8. 30 ಗಂಟೆಗೆ ತಲುಪಲಿದೆ.
ಬೆಳಗಾವಿಯನ್ನು 8.50 ಕ್ಕೆ ಬಿಡುವ ಇನ್ನೊಂದು ವಿಮಾನ ಬೆಂಗಳೂರನ್ನು ಬೆಳಗ್ಗೆ 9.35 ಕ್ಕೆ ತಲುಪಲಿದೆ ಎಂದು ಸಂಸ್ಥೆ ಹೇಳಿದೆ.
ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ Bombardier Q400 ಏರ್ ಕ್ರಾಫ್ಟ್ ಗಳನ್ನು ಈ ಮಾರ್ಗದಲ್ಲಿ ಬಳಸಲಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಈ ಏರ್ ಕ್ರಾಫ್ಟ್ ಸುಮಾರು 78 ಪ್ರಯಾಣಿಕರನ್ನು ಒಮ್ಮೆಗೆ ಕರೆದೊಯ್ಯಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿ ನಡುವೆ ಸೆಪ್ಟೆಂಬರ್ 27,2012 ರಿಂದ ವಿಮಾನ ಹಾರಾಟ ಆರಂಭಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸ್ಥೆ ಹೇಳಿದೆ.
ಸೆಪ್ಟೆಂಬರ್ 30, 2011ರಿಂದ ಮಂಗಳೂರು ಮತ್ತು ಹೈದರಾಬಾದ್ ನಡುವೆ ಸ್ಪೈಸ್ ಜೆಟ್ ಏರ್ ಲೈನ್ಸ್ ದೈನಂದಿನ ಹಾರಾಟವನ್ನು ಆರಂಭವಾದ ಬೆನ್ನಲ್ಲೇ ಹುಬ್ಬಳ್ಳಿ-ಬೆಂಗಳೂರು ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗಿತ್ತು.
ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಿಂಗ್ ಫಿಷರ್ ವಿಮಾನಗಳು ಸಂಚಾರ ಸ್ಥಗಿತಗೊಳಿಸಿದ್ದು ಬೇಡಿಕೆ ಇನ್ನಷ್ಟು ತೀವ್ರಗೊಳ್ಳಲು ಕಾರಣವಾಗಿತ್ತು.












Click it and Unblock the Notifications