ಅಮೆರಿಕ ಸಂಸದೆ ಭಗವದ್ಗೀತೆ ಮೇಲೆ ಪ್ರಮಾಣ ವಚನ

ಪಾಶ್ಚಿಮಾತ್ಯ ದೇಶಗಳು ಅದರಲ್ಲೂ ಅಮೆರಿಕದ 'ಅರ್ಥ'ಹೀನ ಸಂಸ್ಕೃತಿಯನ್ನು ಕಂಡು ನಮ್ಮವರೂ ಹಾಳಾಗುತ್ತಿದ್ದಾರೆ ಎಂಬ ಟೀಕೆಗಳು ಎಲ್ಲೆಡೆ ಕೇಳಿಬರುತ್ತಿರುವ ಇಂದಿನ ದಿನಮಾನದಲ್ಲಿ ನಮ್ಮ ಸಂಸ್ಕೃತಿಯನ್ನು ಡೆಮಾಕ್ರಾಟ್ ಸಂಸದೆ ತುಳಸಿ ಗಬಾರ್ಡ್ ಅವರು ಜಗತ್ತಿಗೆ ಎತ್ತಿ ತೋರಿಸಿದ್ದಾರೆ.
ಹವಾಯಿ ಕ್ಷೇತ್ರದಿಂದ ಅಮೆರಿಕ ಸಂಸತ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಹಿಂದೂ ಮಹಿಳೆ ತುಳಸಿ ಗಬಾರ್ಡ್ ಅವರು ಮುಂದಿನ ಜನವರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಆಗ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿ, ಭಾರತೀಯತೆಯನ್ನು ಎತ್ತಿಹಿಡಿಯುವುದಾಗಿ ಹೇಳಿದ್ದಾರೆ.
31 ವರ್ಷದ ತುಳಸಿ ಗಬಾರ್ಡ್ ಅವರು ರಾಜಕೀಯ ಮನೆತನದಿಂದಲೇ ಬಂದವರು. ಅವರ ಮಾತಾಪಿತೃಗಳು ಹವಾಯಿ ದ್ವೀಪದಲ್ಲಿ ಖ್ಯಾತ ರಾಜಕಾರಣಿಗಳು. ತಮ್ಮ 21ನೇ ವಯಸ್ಸಿನಿಂದಲೂ ಸಮಾಜ ಸೇವೆ/ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications