ಮೈಸೂರು ಮಹಾರಾಜರ ಕುದುರೆಗಾಡಿ ಹರಾಜಿಗಿದೆ

ಈ ಆಕರ್ಷಕ ಕುದುರೆಗಾಡಿಯು (ಒಮ್ಮೆ ಪಕ್ಕದ ಚಿತ್ರ ನೋಡೀ) ಇದೇ ನವೆಂಬರ್ 24ರಂದು ದೂರದ ಲಂಡನ್ನಿನಲ್ಲಿ ಹರಾಜಿಗೆ ನಿಲ್ಲಲಿದೆ. ಐತಿಹಾಸಿಕ, ವಿಶೇಷಾಕರ್ಷಣೆಯ ವಾಹನಗಳ ಹರಾಜು ಸಂಸ್ಥೆ Historics at Brooklands ಭಾರತದ ಈ ಅಪೂರ್ವ ಕುದುರೆಗಾಡಿಯನ್ನು ಮಾರಾಟಕ್ಕೆ ನಿಲ್ಲಿಸಿದೆ.
ಇಂಗ್ಲೆಂಡಿನ ವ್ಯಾಪಾರಿಯೊಬ್ಬರು 2 ವರ್ಷಗಳ ಹಿಂದೆ ಈ ಕುದುರೆಗಾಡಿ ಕೋಚ್ ಅನ್ನು ಖರೀದಿಸಿದ್ದರು. ಅದಕ್ಕೆ ಅಲ್ಪಸ್ವಲ್ಪ ರಿಪೇರಿ, ಬಣ್ಣ ಹಚ್ಚಿ ವ್ಯಾಪಾರಕ್ಕೆ ಇಟ್ಟಿದ್ದಾರೆ.
ಈ coach ಗಾಡಿ 1825ನೇ ಇಸ್ವಿಗೆ ಸೇರಿದ್ದು. ಬ್ರಿಟೀಷರೇ ಇದನ್ನು ಮೈಸೂರಿಗೆ ಕಳಿಸಿಕೊಟ್ಟಿದ್ದರು ಎಂಬ ಐತಿಹ್ಯವೂ ಇದೆ. ಯುರೋಪ್ ರಾಜಮನೆತನದವರು ಯಾರಾದರೂ ಮೈಸೂರಿಗೆ ಅತಿಥಿಗಳಾಗಿ ಬಂದಾಗ ಅವರ ಸಂಚಾರಕ್ಕೆ ಇದನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.
1974ರಲ್ಲಿ ಆಸ್ಟ್ರೇಲಿಯಾದಲ್ಲಿ ಮಹಾರಾಜರೇ ಈ ಮನಮೋಹಕ ಗಾಡಿಯನ್ನು ಮಾರಿಬಿಟ್ಟರು. ಅದೀಗ ಸುಮಾರು 1 ಕೋಟಿ ರೂ. ಗೆ ಮಾರಾಟವಾಗುವ ಅಂದಾಜಿದೆ.












Click it and Unblock the Notifications