ನಿನ್ನೆ ಫೇಸ್ ಬುಕ್ ನಲ್ಲಿ ಅತಿಹೆಚ್ಚು Like ಆದ ಚಿತ್ರ?
ನ್ಯೂಯಾರ್ಕ್, ನ.7: ಬರಾಕ್ ಒಬಾಮಾ ನಿನ್ನೆ ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಈ ವೇಳೆ ಜನ ಅಪಾರ ಸಂತಸಪಟ್ಟಿದ್ದಾರೆ. ಅದರಲ್ಲೂ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಜನ ತಮ್ಮ ಸಂತೋಷವನ್ನು ಖಡಕ್ಕಾಗಿಯೇ ವ್ಯಕ್ತಪಡಿಸಿದ್ದಾರೆ.
ಏನೆಂದರೆ ಅಮೆರಿಕ ಅಧ್ಯಕ್ಷರಾ ಬರಾಕ್ ಒಬಾಮಾ ನಿನ್ನೆ ಪುನರಾಯ್ಕೆಯಾಗುತ್ತಿದ್ದಂತೆ ತಮ್ಮ ಧರ್ಮಪತ್ನಿ ಮಿಷೆಲ್ ಒಬಾರಾರನ್ನು ಮನಸಾರೆ ಬಿಗಿದಪ್ಪಿ ಮುದ್ದಾಡಿದರು. ಆ ರಸಘಳಿಗಾಗಿ ಕಾಯುತ್ತಿದ್ದ ನೂರಾರು ಫೋಟೋಗ್ರಾಫರುಗಳು ಒಂದೇ ಸಮನೆ ಕ್ಲಿಕ್ಕಿಸತೊಡಗಿದ್ದಾರೆ.
ಆದರೆ ಒಬ್ಬ ಫೋಟೋಗ್ರಾಫರ್ ಕ್ಲಿಕ್ಕಿಸಿದ ಫೋಟೋ ಮಾತ್ರ ಅದ್ಭುತವಾಗಿ ಮೂಡಿಬಂದಿತ್ತು. ಅದು ಆ ಕ್ಷಣಕ್ಕೆ ಸಾಕ್ಷಿಯಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂದು ಅರಿವಿಗೆ ಬಂದಿದ್ದೇ ತಡ ಆ ಫೋಟೋ ಅಂತರ್ಜಾಲದಲ್ಲಿ ಕ್ಷಣಾರ್ಧದಲ್ಲಿ ಇಡೀ ವಿಶ್ವದ ಮೂಲೆ ಮೂಲೆಗೂ ತಲುಪಿತು.

ಸರಿ ಜನರೂ ತಮ್ಮ ಬಂಧುವೇ ಅಮೆರಿಕದ ಅಧ್ಯಕ್ಷರಾದರೇನೋ ಎಂಬಷ್ಟು ಸಂತಸಪಟ್ಟ, ಫೋಟೋ ವೀಕ್ಷಿಸಿದ್ದಾರೆ. ಹಾಗಾಗಿ Facebook ನಲ್ಲಿ ಅತಿ ಹೆಚ್ಚು Liked ಬಟನ್ ಒತ್ತಿಸಿಕೊಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನೀವೂ ಸೇರಿದಂರೆ 3,00,000 ಮಂದಿ ಆ ಚಿತ್ರವನ್ನು like ಮಾಡಿದ್ದರೆ, 3,50,000 ಬಾರಿ share ಸಹ ಆಗಿದೆ. 1,44,000 ಮಂದಿ comment ಹಾಕಿದ್ದಾರೆ. ಇದು ನಿಜಕ್ಕೂ ಅಭೂತಪೂರ್ವ ದಾಖಲೆಯೇ!
ಇನ್ನು, Twitter ಲೆಕ್ಕಾಚಾರಕ್ಕೆ ಬಂದರೆ ಒಬಾಮಾ ಅಭಿಮಾನಿಗಳು 6,30,000 ಬಾರಿ retweet ಮಾಡಿದ್ದಾರೆ. 2,13,000 favourite ಬಟನ್ ಒತ್ತಿ, ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. Twitter ಖಾತೆಗೆ ಇದೂ ಐತಿಹಾಸಿಕ ದಾಖಲೆಯೇ.
ಅಂದಹಾಗೆ ಚುನಾವಣೆ ಪ್ರಚಾರಕ್ಕಾಗಿ ಬರಾಕ್ ಒಬಾಮಾ ಅವರು ಮಾಹಿತಿ ತಂತ್ರಜ್ಞಾನ ಯುಗದ ಹೆಮ್ಮೆಯ ಕೊಡುಗೆಯಾದ ಸಾಮಾಜಿಕ ಜಾಲವನ್ನು ಗರಿಷ್ಠ ಪ್ರಮಾಣದಲ್ಲಿ ಪ್ರಯೋಜನ ಪಡೆದಿದ್ದಾರೆ. Hats-off to Facebook and Twitter !












Click it and Unblock the Notifications