ಅಪ್ಪಳಿಸಿದ ಮತ್ತೊಂದು ಸ್ಯಾಂಡಿ: ಗರಬಡಿದ ಅಮೆರಿಕ

another-superstorm-sandy-affect-us-flights-cancelled
ವಾಷಿಂಗ್ಟನ್. ನ.8: ಸ್ಯಾಂಡಿ ಚಂಡಮಾರುತದ ರುದ್ರನರ್ತನ ತಹಬಂದು ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುತ್ತಿರುವಾಗಲೇ ಅಮೆರಿಕಕ್ಕೆ ಮತ್ತೊಂದು ಸ್ವರೂಪದ ಸ್ಯಾಂಡಿ ಚಂಡಮಾರುತ ಅಪ್ಪಳಿಸಿದೆ.

ಆದರೆ ಈ ಬಾರಿಯ ಚಂಡಮಾರುತ ನಿರೀಕ್ಷಿತವಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಅಮೆರಿಕ ಸನ್ನದ್ಧವಾಗಿದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಜನರನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಅಟ್ಲಾಂಟಿಕ್ ಸಾಗರದಿಂದ ಈ ಬಾರಿ ಚಂಡಮಾರುತ ಎದ್ದಿದೆ.

ಹೊಸ ಸ್ವರೂಪದ ಚಂಡಮಾರುತದಿಂದಾಗಿ 1,000 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. United Airlines ಮತ್ತು American Airlines ಒಂದು ದಿನದ ಮಟ್ಟಿಗೆ (ಬುಧವಾರ) ವಿಮಾನ ಯಾನವನ್ನು ರದ್ದುಗೊಳಿಸಿದೆ.

ವಾಷಿಂಗ್ಟನ್ ಭಾಗದಲ್ಲಿ ಹೊಸ ಚಂಡಮಾರುತದಿಂದಾಗಿ ಮಂಜುಗಡ್ಡೆಗಳು ಸುರಿಯುತ್ತಿವೆ. ಸಮುದ್ರ ತೀರದಲ್ಲಿ 2.3 ಮೀಟರ್ ಎತ್ತರದ ಅಲೆಗಳು ಎದ್ದಿವೆ. ಮಾರುತಗಳು ಗಂಟೆಗೆ 96 ಕಿಮೀ ವೇಗದಲ್ಲಿ ಸುಳಿಯುತ್ತಿದೆ. ಇದು ನ್ಯೂಯಾರ್ಕಿನ JFK airport ನಿಂದ 30 ಕಿಮೀ ದೂರದಲ್ಲಿದೆ ಎಂದು ಅಮೆರಿಕದ ಹವಾಮಾನ ಇಲಾಖೆ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+