ದೀಪಾವಳಿ ವೇಳೆಗೆ ಚಿನ್ನದ ಬೆಲೆ ಮತ್ತಷ್ಟು ಕುಸಿತ

ಅಮೆರಿಕದಲ್ಲಿ ನಿರುದ್ಯೋಗ ಪರ್ವ ಕ್ಷೀಣಿಸುತ್ತಿದೆ. ಡಾಲರ್ ಮೌಲ್ಯ ಬಲಾಢ್ಯವಾಗಿಯೇ ಇದೆ. ಅಲ್ಲಿನ ಆರ್ಥಿಕತೆ ಸುಧಾರಿಸುವ ಲೆಕ್ಕಾಚಾರವಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಅವಲಂಬನೆಯಾಗುವುದು ಕಡಿಮೆಯಾಗುತ್ತಿದೆ. ಹಾಗಾಗಿ, ಚಿನ್ನದ ದರಗಳು ಮತ್ತಷ್ಟು ಕಡಿಮೆಯಾಗುವ ಅಂದಾಜಿದೆ.
ಶುಕ್ರವಾರ 10 ಗ್ರಾಂ ಚಿನ್ನ ಸುಮಾರು 300 ರೂ. ನಷ್ಟು ಕುಸಿತ ಕಂಡಿದೆ. ಆದರೆ ಈ ತಕ್ಷಣಕ್ಕೆ ಮತ್ತೆ ಬೆಲೆ ಕುಸಿತ ಆಗುವುದಿಲ್ಲವಾದರೂ ದೀಪಾವಳಿ ವೇಳೆಗೆ ಚಿನ್ನದ ದರಗಳು ಕುಸಿಯಲಿವೆ. ಚಿನ್ನದ ವಾಯಿದಾ ಮಾರುಕಟ್ಟೆಯಲ್ಲೂ ಬೆಲೆ ಕಡಿಮೆಯಾಗುತ್ತಿದೆ ಅನ್ನುವುದಕ್ಕಿಂತ ಏರುಗತಿಯಲ್ಲಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.
ಇನ್ನು, ಬೆಳ್ಳಿಯ ಬೆಲೆಗಳೂ ಕಡಿಮೆಯಾಗುವ ಅಂದಾಜಿದೆ. ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಚಿನ್ನ 10 ಗ್ರಾಂಗೆ 31,224 ರೂ. ಒಡವೆ ಚಿನ್ನ 1 ಗ್ರಾಂಗೆ 2,888 ರೂ. ಶುದ್ಧ ಬೆಳ್ಳಿ 1 ಕೆಜಿಗೆ 59,999 ರೂ.












Click it and Unblock the Notifications