ಬರೀ 50 ಕೋಟಿನಾ? ಬೆಲೆಯನ್ನೇ ಕಟ್ಟಲಾಗದಂತಹ ಗೆಳತಿ!

'ಅಲ್ಲಾ ಸ್ವಾಮಿ! ನಿಮ್ಮ (ಮೋದಿ) ಎಣಿಕೆಯಲ್ಲಿ ಕೇವಲ 50 ಕೋಟಿ ಅಷ್ಟೇನಾ ಇರೋದು. ಆಕೆ ನನ್ನ ಅಮೂಲ್ಯ. ಬೆಲೆಕಟ್ಟಲಾಗದಂತಹುದು' ಎಂದು ತಮ್ಮ ಗೆಳತಿಯ ಬಗ್ಗೆ ಕೆಣಕಿದ ಮೋದಿಗೆ ಶಶಿ ಸಮಾ ಗೂಸಾ ಕೊಟ್ಟಿದ್ದಾರೆ.
'ತರೂರ್ ಪತ್ನಿ ಸುನಂದಾ ಪುಷ್ಕರ್ ಒಂದು ಕಾಲಕ್ಕೆ ಅವರ ರೂ 50 ಕೋಟಿಯ ಗೆಳತಿಯಾಗಿದ್ದರು. ಇಷ್ಟು ದುಬಾರಿ ಗೆಳತಿಯನ್ನು ನೀವೇನಾದರೂ ನೋಡಿದ್ದಾರಾ?' ಎಂದು ಚುನಾವಣಾ ರ‍್ಯಾಲಿಯಲ್ಲಿ ಮೋದಿ ತಮ್ಮ ಪಕ್ಷದ ಕಾರ್ಯಕರ್ತರನ್ನು ನಿನ್ನೆ ಪ್ರಶ್ನಿಸಿದ್ದರು.
ಇಂದು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮಾರುತ್ತರ ನೀಡಿರುವ ತರೂರ್ ಅವರು ಹೀಗೆ ಹೇಳಿದ್ದಾರೆ: @narendramodi My wife is worth a lot more than your imaginary 50 crores. She is priceless. But you need2be able2love some1 2understand that.
'2010ರ ಐಪಿಎಲ್ ಪಂದ್ಯದಲ್ಲಿ ತಂಡವೊಂದರ ಮೇಲೆ ರೂ 50 ಕೋಟಿ ರೂಪಾಯಿ ಹೂಡಿದ್ದ ಸುನಂದಾ ಪುಷ್ಕರ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ' ಎಂದು ವಿದೇಶಾಂಗ ಸಚಿವರಾಗಿದ್ದ ತರೂರ್ ಅಂದು ಸಂಸತ್‌ನಲ್ಲಿ ಹೇಳಿದ್ದರು.
'ಅದೇ ವಿವಾದಕ್ಕೆ ಸಂಬಂಧಿಸಿದಂತೆ ನಂತರ ಅವರು ರಾಜೀನಾಮೆಯನ್ನೂ ನೀಡಿದ್ದರೂ. ಮುಂದೆ ಅದೇ ರೂ 50 ಕೋಟಿ ಹೂಡಿದ್ದ ಗೆಳತಿಯನ್ನೇ ಮದುವೆಯಾದರು. ಆ ವಿವಾದ ಇನ್ನೂ ಇತ್ಯರ್ಥವಾಗದೆ ಉಳಿದಿದ್ದರೂ ಮರಳಿ ತರೂರ್ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ' ಎಂದು ಮೋದಿ ವ್ಯಂಗ್ಯವಾಡಿದ್ದರು.












Click it and Unblock the Notifications