ಕಿಂಗ್ ಫಿಷರ್ ನೆಲಕಚ್ಚಿದೆ, ಮಲ್ಯ ಹಾರುತ್ತಿದ್ದಾರೆ

Vijay Mallya
ಬೆಂಗಳೂರು, ಅ.23: ಕಿಂಗ್ ಫಿಷರ್ ವಿಮಾನ ಸಿಬ್ಬಂದಿ ಜೊತೆ ಮಾತುಕತೆ ಮತ್ತೊಮೆ ಮುರಿದು ಬಿದ್ದಿದೆ. ಒಂದು ತಿಂಗಳ ಸಂಬಳ 24 ಗಂಟೆಯೊಳಗೆ ನೀಡುವ ಭರವಸೆ ಹುಸಿಯಾಗಿದೆ. ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಅವರ ಹುಟ್ಟಹಬ್ಬದ ಗಿಫ್ಟ್ ರೂಪದಲ್ಲಿ ಆರಂಭವಾದ ಕಿಂಗ್ ಫಿಷರ್ ಸಂಕಷ್ಟ ಮುಂದುವರೆದಿದ್ದರೆ, ಜೂ ಮಲ್ಯ ಮಜಾ ಉಡಾಯಿಸುತ್ತಾ ಊರೂರು ಸುತ್ತುತ್ತಿದ್ದಾರೆ.

ಹುಡುಗಿಯರ ಹಿಂದೆ ಸುತ್ತುತ್ತಾ ಕಿಂಗ್ ಫಿಷರ್ ಕ್ಯಾಲೆಂಡರ್ ಗೆ ಮಾಡೆಲ್ ಹುಡುಕಾಟದಲ್ಲಿ ನಿರತರಾಗಿರುವ ಸಿದ್ದಾರ್ಥ್ ಮಲ್ಯ ಈ ಬಗ್ಗೆ ಟ್ವಿಟರ್ ನಲ್ಲಿ ಆಗಾಗ್ಗೆ ಅಪ್ಡೇಟ್ಸ್ ಕೊಡುತ್ತಾ ಬಂದಿದ್ದಾರೆ.

ಈ ನಡುವೆ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ನೆಲಕಚ್ಚಿದ್ದರೂ ಅವರ ಖಾಸಗಿ ವಿಮಾನ ಸಂಚಾರ ಅಬಾಧಿತವಾಗಿದೆ. ಕಿಂಗ್‌ಫಿಷರ್‌ನ ಹಾರಾಟ ಪರವಾನಗಿ ಅಮಾನತು ಆಗಿರಬಹುದು. ಆದರೆ ವಿಜಯ್ ಮಲ್ಯ ತನ್ನ ಖಾಸಗಿ ಜೆಟ್ ಮೂಲಕ ಜಗತ್ತನ್ನು ಸುತ್ತುವುದನ್ನು ಮಾತ್ರ ನಿಲ್ಲಿಸಿಲ್ಲ.

ಮಲ್ಯ ಬಳಿ ಎರಡು ಪರವಾನಗಿಗಳಿದ್ದವು. ಮೊದಲನೆಯದು ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯದ್ದಾದರೆ, ಇನ್ನೊಂದು ತನ್ನ ಖಾಸಗಿ ವಿಮಾನದ್ದಾಗಿದೆ. ಎರಡನೇ ಪರವಾನಗಿ ಇನ್ನೂ ಜಾರಿಯಲ್ಲಿರುವುದರಿಂದ ತನ್ನ ಖಾಸಗಿ ವಿಮಾನಕ್ಕಾಗಿ ಆರು ಮಂದಿ ಪೈಲಟ್‌ಗಳು ಮತ್ತು ಗಗನಸಖಿಯರ ತಂಡವನ್ನು ಮಲ್ಯ ಹೊಂದಿದ್ದಾರೆ.

ಕಿಂಗ್‌ಫಿಷರ್‌ನ ಪೈಲಟ್‌ಗಳು ಮತ್ತು ಉದ್ಯೋಗಿಗಳಿಗೆ ಕಳೆದ ಮಾರ್ಚ್‌ನಿಂದ ಸಂಬಳ ಪಾವತಿಯಾಗದಿದ್ದರೂ, ಮಲ್ಯ ಅವರ ಖಾಸಗಿ ಜೆಟ್‌ನ ಉದ್ಯೋಗಿಗಳಿಗೆ ಮಾತ್ರ ನಿರಂತರವಾಗಿ ಸಂಬಳ ಪಾವತಿಯಾಗುತ್ತಿದೆಯಂತೆ.

ಮಲ್ಯ ಅವರ ಏರ್ ಬಸ್ ಕಾರ್ಪೊರೇಟರ್ ಜೆಟ್ (ACJ) ನಂತರ VT-VJM (VJM - ವಿಜಯ್ ಮಲ್ಯ ಅವರ ಆಪ್ತ ಹೆಸರು) ಡಿಲಕ್ಸ್ 22 ಸೀಟುಗಳ ಏರ್ ಬಸ್ ಸದಾ ಕಾಲ ಮಲ್ಯ ಸೇವೆಗೆ ಸಿದ್ಧವಾಗಿರುತ್ತದೆ.

ಮಲ್ಯ ವಿದೇಶದಲ್ಲಿರುವಾಗ ಅವರಿಗೆ ಪ್ರತಿ ದಿನ ಕನಿಷ್ಠ 250 ಡಾಲರ್ ದಿನಭತ್ಯೆ ಸಿಗುತ್ತದೆ. ಪೈಲಟ್ ಗಳ ಮುಷ್ಕರ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆ ಮುಚ್ಚಿದರೂ, ಖಾಸಗಿ ಜೆಟ್ ಸೇವೆಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಅವರು ಉತ್ತರ ನೀಡಿದ್ದರು' ಎಂದು ಪೈಲಟ್ ಒಬ್ಬರು ಹೇಳಿದ್ದಾರೆ.

ಸಾಲದ ಹೊರೆ ತಾಳಲಾರದೆ ಕಿಂಗ್‌ಫಿಷರ್ ಉದ್ಯೋಗಿ ಪತ್ನಿಯೊಬ್ಬರು ಇತ್ತೀಚೆಗೆ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನೂ ಅನೇಕರು ಇದೇ ದಾರಿಯನ್ನು ಹಿಡಿದಲ್ಲಿ ಅಚ್ಚರಿಯಿಲ್ಲ ಎಂದು ಉದ್ಯೋಗಿಯೊಬ್ಬರು ಹೇಳುತ್ತಾರೆ.

ಅಲ್ಲದೆ ವಿಮಾನಯಾನ ಮಾರುಕಟ್ಟೆ ಕುಸಿತ ಅನುಭವಿಸಿರುವುದರಿಂದ ಹೊಸ ಕೆಲಸ ಹುಡುಕುವುದು ಸಹ ಪೈಲಟ್ ಗಳಿಗೆ ಕಷ್ಟವಾಗುತ್ತಿದೆ.

ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ 4000 ಉದ್ಯೋಗಿಗಳ ಪೈಕಿ 2000 ಉದ್ಯೋಗಿಗಳಿಗೆ ಈ ವರ್ಷದ ಮಾರ್ಚ್ ತಿಂಗಳಿನ ತನಕ ಸಂಬಳ ನೀಡಿದೆ. ನಂತರ ಯಾರೊಬ್ಬರಿಗೂ ಸಂಬಳ ನೀಡುವಲ್ಲಿ ವಿಫಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+