ಬಿಜೆಪಿಗೆ ಮುಖಭಂಗ:ಎಂಇಎಸ್ ಪಾಲಾದ ಬೆಳಗಾವಿ ತಾ.ಪ

ಎಂಇಎಸ್ ಜಯಭೇರಿ ಬಾರಿಸಿದರೆ ಬಿಜೆಪಿ ಮುಖಭಂಗ ಅನುಭವಿಸಿದೆ.
ತಾಲೂಕು ಪಂಚಾಯತಿ ಅಧ್ಯಕ್ಷರಾಗಿ ಪ್ರತಾಪ್ ಕೋಳಿ ಮತ್ತು ಉಪಾಧ್ಯಕ್ಷರಾಗಿ ರೀಟಾ ಬೆಳಗಾಂವ್ಕರ್ ಆಯ್ಕೆಯಾಗಿದ್ದಾರೆ.
40 ಸದಸ್ಯರ ಬೆಳಗಾವಿ ತಾಲೂಕು ಪಂಚಾಯತಿಯಲ್ಲಿ ಎಂಇಎಸ್ 16, ಬಿಜೆಪಿ 14, ಕಾಂಗ್ರೆಸ್ 8 ಮತ್ತು ಪಕ್ಷೇತರರು 2 ಸದಸ್ಯರನ್ನು ಹೊಂದಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಸಮರ್ಪಕ ನಿಲುವಿನಿಂದ ಎಂಇಎಸ್ ಜಯಭೇರಿ ಬಾರಿಸಿದೆ. ಇಬ್ಬರು ಪಕ್ಷೇತರ ಸದಸ್ಯರು ಎಂಇಎಸ್ ಪರ ನಿಷ್ಠೆ ತೋರಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಮಾಧ್ಯಮಗಳನ್ನು ಉದ್ದೇಶಿಸಿ ಮರಾಠಿಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಪ್ರತಾಪ್ ಕೋಳಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ದಿಟ್ಟ ಹೆಜ್ಜೆ ಇಡಲಾಗುವುದು.
ಬೆಳಗಾವಿ ತಾಲೂಕು ಪಂಚಾಯತಿಯ ಕಾಗದಪತ್ರಗಳನ್ನು ಕನ್ನಡದ ಬದಲು ಮರಾಠಿಯಲ್ಲಿ ಮುದ್ರಿಸಲಾಗುವುದು. ಬೆಳಗಾವಿಯಲ್ಲಿರುವ ಮರಾಠಿ ಭಾಷಿಗರಿಗೆ ಸೂಕ್ತ ಸ್ಥಾನಮಾನ, ಭದ್ರತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಪ್ರತಾಪ್ ಕೋಳಿ ಬಿಜೆಪಿಯ ಗಜಾನನ ನಾಯಕ್ ಅವರನ್ನು ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡಿಗರ ಮತ್ತು ಕರ್ನಾಟಕದ ಸ್ವಾಭಿಮಾನದ ಪ್ರತೀಕವಾಗಿ ಕೆಲವೇ ದಿನಗಳ ಕೆಳಗೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ರಾಜ್ಯಕ್ಕೆ ಸಮರ್ಪಣೆಯಾಗಿತ್ತು. ಅದರ ಬೆನ್ನಲ್ಲೇ ಬೆಳಗಾವಿ ತಾಲೂಕು ಪಂಚಾಯತಿ ಎಂಇಎಸ್ ಪಾಲಾಗಿದ್ದು ದುರಂತವೇ ಸರಿ..












Click it and Unblock the Notifications