ಹಸುಳೆ ಮೇಲೆ ಅತ್ಯಾಚಾರ, ಪ್ಯಾಸ್ಕಲ್ ಗೆ ಬೇಲ್

ಪ್ಯಾಸ್ಕಲ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ 1 ಲಕ್ಷ ರು ಮೌಲ್ಯದ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ನೀಡಬೇಕು ಮಾತ್ತು ತನಿಖೆಗೆ ಸಹಕರಿಸಬೇಕು ಎಂಬ ಷರತ್ತನ್ನು ವಿಧಿಸಿ ಜಾಮೀನು ನೀಡಿದೆ.
ಹಸುಗೂಸಿನ ಮೇಲೆ ಜನ್ಮ ಕೊಟ್ಟ ತಂದೆಯೇ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪ ಹೊತ್ತಿರುವ ಫ್ರೆಂಚ್ ರಾಯಭಾರಿ ಕಚೇರಿ ಸಿಬ್ಬಂದಿ ಪಾಸ್ಕಲ್ ಮಜೂರಿಯರ್ ಅವರನ್ನು ಹೈಗ್ರೌಂಡ್ ಪೊಲೀಸರು ಜೂನ್ 19, ಮಂಗಳವಾರ ಬೆಳಗ್ಗೆ ಬಂಧಿಸಿದ್ದರು.
ವೈದ್ಯಕೀಯ ತಪಾಸಣೆಗಾಗಿ ಪಾಸ್ಕಲ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಪ್ರಮಾಣಪತ್ರ ಪಡೆದು ತನಿಖೆ ಕೈಗೊಳ್ಳಲಾಗಿತ್ತು ಎಂದು ಡಿಸಿಪಿ(ಕೇಂದ್ರ) ರವಿಕಾಂತೇಗೌಡ ಹೇಳಿದ್ದಾರೆ.
ಫ್ರೆಂಚ್ ರಾಯಭಾರಿ ಕಚೇರಿಯ ಸಿಬ್ಬಂದಿ ಎನ್ನುವುದಕ್ಕೆ ಯಾವುದೇ ದಾಖಲೆ ಹೊಂದಿರದ ಫಾಸ್ಕಲ್ ಸಾಧಾರಣ ವೀಸಾದಲ್ಲಿದ್ದಾನೆ. ಪೊಲೀಸರ ಕ್ರಮ ಕೈಗೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು Ministry of External Affairs (MEA)ವಿದೇಶಾಂಗ ಸಚಿವಾಲಯ ಕೂಡಾ ಒಪ್ಪಿಗೆ ಸೂಚಿಸಿತ್ತು.
ಆರೋಪಿ ಪಾಸ್ಕಲ್ 2001ರಲ್ಲಿ ಮದುವೆಯಾಗಿದ್ದನು. ಕೇರಳದ ಎರ್ನಾಕುಲಂನಲ್ಲಿ ವಾಸವಾಗಿದ್ದ ವೇಳೆ 2005ರಲ್ಲಿ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. 2008ರಲ್ಲಿ ಅಲ್ಲಿದ ಬೆಂಗಳೂರಿಗೆ ವರ್ಗಾವಣೆಯಾದ ನಂತರ ಆಗಸ್ಟ್ ನಲ್ಲಿ ಹೆಣ್ಣು ಮಗು ಜನ್ಮತಾಳಿತು. ಅದಾದ ನಂತರ ಮತ್ತೊಂದು ಮಗು ಹುಟ್ಟಿದ್ದು ಮೂರು ಮಕ್ಕಳೊಂದಿಗೆ ವಸಂತನಗರದ ಪೈನ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ ಕುಟುಂಬ ವಾಸವಾಗಿದ್ದರು.
ಪಶುವಿನಂತೆ ವರ್ತಿಸುತ್ತಿದ್ದ ಈತ 2010ರಿಂದ ತನ್ನ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಮಗಳ ಮೇಲೆ ಹಲ್ಲೆ, ದೈಹಿಕ ಹಿಂಸೆ ನೀಡುತ್ತಿದ್ದ. ದಿನಗಳು ಕಳೆದಂತೆ ಮಗಳು ಮೂರು ವರ್ಷ 10 ತಿಂಗಳು ತುಂಬಿದ ಮಗಳಿಗೆ ಬುದ್ದಿ ಬಂದು ತಾಯಿಯೊಂದಿಗೆ ತನ್ನ ನೋವು ಹೇಳಿಕೊಳ್ಳುವುದಕ್ಕೆ ಮುಂದಾಗುತ್ತದೆ.
ಆ ವೇಳೆ ಪಾಸ್ಕಲ್ ವರ್ತನೆ ಮಿತಿಮೀರುತ್ತದೆ. 2012ರಲ್ಲಿ ಹಿಂಸೆಗೆ ಒಳಗಾಗಿದ್ದ ಹಸುಗೂಸು ನಿತ್ಯಕರ್ಮಕ್ಕೆ ಹೋಗಬೇಕಾದರೆ ನೋವು ಆಗುತ್ತದೆ ಎಂದು ತಾಯಿ ಬಳಿ ನೋವು ತೋರಿಕೊಂಡಿತ್ತು. ಏನೂ ಅರಿಯದ ಈ ಕಂದಮ್ಮ ತಂದೆ ಮಾಡುತ್ತಿದ್ದ ಕ್ರೌರ್ಯವನ್ನು ತಾಯಿಯ ಬಳಿ ಬಿಚ್ಚಿಟ್ಟಿತು.
ಮಗಳು ಎರಡು ವರ್ಷ ಹಸುಗೂಸು ಆಗಿದ್ದಾಗಿಂದಲೇ ಈತ ಇಂತಹ ಹೇಯ ಕೃತ್ಯ ನಡೆಸುತ್ತಿದ್ದನು. ತನ್ನ ಕರಳಕುಡಿಯ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ತಪ್ಪಿಸಲು ಶತಾಯುಗತಾಯು ಪ್ರಯತ್ನಿಸಿ ವಿಫಲಳಾದ ತಾಯಿ ಕೊನೆಗೆ ಹೈಗ್ರೌಂಡ್ ಪೋಲೀಸರ ಮೊರೆ ಹೋಗಿದ್ದರು.
ನಗರದ ಅರಮನೆ ಮೈದಾನದ ಸಮೀಪವಿರುವ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಮುಖ್ಯ ಜಂಟಿ ಛಾನ್ಸಿಲರ್ ಅಧಿಕಾರಿಯಾಗಿದ್ದ ಪಾಸ್ಕಲ್ ಪತ್ನಿ ನೀಡಿದ ದೂರಿನ ಅನ್ವಯ ಹೈಗ್ರೌಂಡ್ ಪೊಲೀಸರು ಈತನನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು.












Click it and Unblock the Notifications