ಗೋವಾದಲ್ಲಿ ಹೆಲಿಕಾಪ್ಟರ್ ಅಪಘಾತ 3 ಸಾವು

Indian Navy Chetak helicopter crashes in Goa, pilots dead
ಪಣಜಿ, ಅ.15: ಭಾರತೀಯ ಜಲಸೇನೆಗೆ ಸೇರಿದ ಹೆಲಿಕಾಪ್ಟರ್ ಸೋಮವಾರ (ಅ.15) ಮುಂಜಾನೆ ಭೀಕರ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿರುವ ವರದಿಯಾಗಿದೆ.

ಭಾರತೀಯ ಜಲಸೇನೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ಗೋವಾದ ಡಬೋಲಿಮ್ ವಿಮಾನನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ.

ಮುಂಬೈನಿಂದ ಮಂಗಳೂರಿಗೆ ಗೋವಾ ಮಾರ್ಗದಲ್ಲಿ ಹೊರಟ ಚೇತಕ್ ಹೆಲಿಕಾಪ್ಟರ್ ನಲ್ಲಿದ್ದವರು ನುರಿತ ಪೈಲಟ್ ಗಳಾಗಿದ್ದರು. ಇಂಧನ ಹಾಕಿಕೊಳ್ಳಲು ಗೋವಾ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ನಂತರ ರನ್ ವೇಯಲ್ಲಿ ಚಲಿಸುತ್ತಿದ್ದಾಗ ಬೆಂಕಿ ಹತ್ತಿಕೊಂಡು ಹೆಲಿಕಾಪ್ಟರ್ ಸುಟ್ಟು ಕರಕಲಾಗಿದೆ.

ಭಾರತೀಯ ಜಲಸೇನೆಗೆ ಸೇರಿರುವ ಎರಡು ಹೆಲಿಕಾಪ್ಟರ್ ಗಳ ಅಪಘಾತದ ನಿಖರ ಕಾರಣ ಹಾಗೂ ಹೆಚ್ಚಿನ ಮಾಹಿತಿ ತಿಳಿಯಲು ಕಾಪ್ಟರ್ ಗಳಲ್ಲಿದ್ದ ಬ್ಲಾಕ್ ಬಾಕ್ಸ್ ಗಳನ್ನು ಪಡೆಯಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಎರಡು MI-17 ಹೆಲಿಕಾಪ್ಟರ್ ಗಳು ಆಕಾಶ ಮಧ್ಯೆದಲ್ಲೇ ಡಿಕ್ಕಿ ಹೊಡೆದ್ದು ನುಚ್ಚು ನೂರಾಗಿದ್ದ ಘಟನೆ ಗುಜರಾತಿನ ಸೌರಾಷ್ಟ್ರದಲ್ಲಿ ನಡೆದಿತ್ತು. ಈ ದುರಂತದಲ್ಲಿ ಭಾರತೀಯ ವಾಯುಸೇನೆಯ ಸುಮಾರು 9 ಜನ ಸಿಬ್ಬಂದಿ ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+