ರೇಪ್: ನಟಿ ರಾಣಿ ಮುಖರ್ಜಿ ಸೋದರನ ಬಂಧನ

ಕಿರುತೆರೆ ನಟಿಯೊಬ್ಬರು ರಾಜಾ ಮುಖರ್ಜಿ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾರೆ. ಆದರೆ ಪೊಲೀಸರು ಆಕೆಯ ಹೆಸರು, ವಿವರವನ್ನು ಬಹಿರಂಗಪಡಿಸಿಲ್ಲ. ನಟಿ ರಾಣಿ ಮುಖರ್ಜಿ ಅವರ ಸೋದರ ರಾಜಾ ಮುಖರ್ಜಿ ಅನೇಕ ಟಿವಿ ಧಾರಾವಹಿಗಳು ಮತ್ತು ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ವರ್ಸೋವಾ ಪೊಲೀಸರು ರಾಜಾ ಮುಖರ್ಜಿಯನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇಂದು ಸೋಮವಾರ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ.
'ಸದರಿ ಬಾಧಿತ ನಟಿ, ನಿರ್ದೇಶಕ ರಾಜಾ ಮುಖರ್ಜಿಗೆ ಸ್ಕ್ರಿಪ್ಟ್ ತೋರಿಸಲು ಹೋಗಿದ್ದರು. ಆಗ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ' ಎಂದು ಎಸಿಪಿ ನರಸಿಂಗ ಶೇರ್ ಖಾನ್ ತಿಳಿಸಿದ್ದಾರೆ.
ಅಂಧೇರಿ ಜೈಲಿನಲ್ಲಿರುವ ಆರೋಪಿ ರಾಜಾ ಮುಖರ್ಜಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354ರ ಅನುಸಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications