ವಿಪ್ರೋ ಮಹಿಳಾ ಟೆಕ್ಕಿಯ ಜೀವತಿನ್ನುತ್ತಿರುವ ಅನಾಮಿಕ

ಈ ಅಪರಿಚಿತ ವ್ಯಕ್ತಿ ಒಂದು ತಿಂಗಳಿಂದ ಸದರಿ ಮಹಿಳೆಗೆ ಯಾವಗಂದರೆ ಆವಾಗಲೇ ಮೊಬೈಲಿನಲ್ಲಿ ಕರೆ ಮಾಡುವುದು, ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ. ಅಷ್ಟೇ ಅಲ್ಲ ಆಕೆಯ ಗಂಡನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಕರೆ ಮಾಡಿದಾಗ ಗತ್ಯಂತರವಿಲ್ಲದೆ ಆಕೆ ಸೀದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಬಾಧಿತ ಮಹಿಳೆ ಹೆಬ್ಬಾಳ ಬಳಿಯಿರುವ ಅಶ್ವತ್ಥನಗರದ ಅಪಾರ್ಟ್ ಮೆಂಟ್ ನಿವಾಸಿ. ಅವರು Wipro Technologies ಕಂಪನಿಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗಮನಾರ್ಹವೆಂದರೆ ಮಹಿಳಾ ಟೆಕ್ಕಿಯ ಕಾಡುತ್ತಿರುವ ವ್ಯಕ್ತಿಯು ತಾನೂ ವಿಪ್ರೋ ಕಂಪನಿಯ ಉದ್ಯೋಗಿ ಎಂದು ಹೇಳಿಕೊಂಡಿದ್ದಾನೆ. ಅದರಂತೆ, ಮೊದಲು ವಿಪ್ರೋ ಕಂಪನಿಯ ಮಾನವ ಸಂಪನ್ಮೂಲ ವಿಭಾಗದವರು ಅನಾಮಿಕನ ಪತ್ತೆ ಹಚ್ಚಲು ಮುಂದಾದಾಗ ಆತ ಚೆನ್ನೈ ವಿಪ್ರೋದಲ್ಲಿರುವ ಅರ್ಜುನ ರಾಜ ಎಂದು ತಿಳಿದುಬಂದಿದೆ. ಸದರಿ ವ್ಯಕ್ತಿ ಇತರೆ ಮಹಿಳಾ ಉದ್ಯೋಗಿಗಳನ್ನು ಹೀಗೇ ಗೋಳುಹೊಯ್ದುಕೊಂಡಿದ್ದಾನೆ ಎಂಬುದು ಎಚ್ ಆರ್ ಡಿಪಾರ್ಟ್ ಮೆಂಟಿಗೆ ತಿಳಿದುಬಂದಾಗ ಅವನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ತಿಳೀದುಬಂದಿದೆ.
ಇದೀಗ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಸದರಿ ಬಾಧಿತ ಮಹಿಳೆ ನೀಡಿದ ಎರಡು ಮೊಬೈಲ್ ನಂಬರುಗಳ ಬೆನ್ನುಹತ್ತಿದಾಗ ಚಿತ್ತೂರು ಮತ್ತು ತಿರುಪತಿ ವಿಳಾಸಗಳನ್ನು ನೀಡಿರುವುದು ಪತ್ತೆಯಾಗಿದೆ. ಆದರೆ ಅವನು ಪ್ರಸ್ತುತ ಹೈದರಾಬಾದಿನಲ್ಲಿ ಕಾಪ್ರಾ ಪ್ರದೇಶದಲ್ಲಿ ವಾಸವಾಗಿರುವುದಾಗಿ ತಿಳಿದುಬಂದಿದೆ. ಪೊಲೀಸರು ಅವನನ್ನು ಬಂಧಿಸಿ, ಕರೆತರಲು ಹೈದರಾಬಾದಿಗೆ ತೆರಳಿದ್ದಾರೆ.












Click it and Unblock the Notifications