ಬಂಧನ ಭೀತಿಯಲ್ಲಿ 'ಕಿಂಗ್' ವಿಜಯ ಮಲ್ಯ

Vijay Mallya
ಹೈದರಾಬಾದ್, ಅ.12: ಕಿಂಗ್ ಫಿಷರ್ ಸಂಸ್ಥೆ ಒಡೆಯ ವಿಜಯ್ ಮಲ್ಯ ಅವರ ವಿರುದ್ಧ ಹೈದರಾಬಾದಿನ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಹೈದರಾಬಾದಿನ ಜಿಎಂಅರ್ ಸಮೂಹದ GHIAL ಸಂಸ್ಥೆ ಕಿಂಗ್ ಫಿಷರ್ ಸಂಸ್ಥೆ ವಿರುದ್ಧ 10.3 ಕೋಟಿ ಮೊತ್ತದ ಚೆಕ್ ಹಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುವ GHIAL ಸಂಸ್ಥೆಗೆ ಕಿಂಗ್ ಫಿಷರ್ ಸಂಸ್ಥೆಯಿಂದ 10.3 ಕೋಟಿ ರು ಗಳಿಗೆ 4 ಚೆಕ್ ಗಳು ಬಂದಿತ್ತು. ವಿಮಾನನಿಲ್ದಾಣದ ಪಾರ್ಕಿಂಗ್, ಲ್ಯಾಂಡಿಂಗ್, ನ್ಯಾವಿಗೇಷನ್ ಮುಂತಾದ ಸೌಲಭ್ಯಕ್ಕೆ ನೀಡಿದ ಮೊತ್ತ ಇದಾಗಿತ್ತು. ಅದರೆ, ನಾಲ್ಕು ಚೆಕ್ ಗಳು ಬೌನ್ಸ್ ಆದ ಕಾರಣ, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಜೂನ್ 2012ರಲ್ಲಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉಸ್ತುವಾರಿ ಹೊತ್ತಿರುವ ಜಿವಿಕೆ ಸಮೂಹ ಕೂಡಾ ಕಿಂಗ್ ಫಿಷರ್ ಸಂಸ್ಥೆ ಮೇಲೆ ಚೆಕ್ ಬೌನ್ಸ್ ದೂರು ದಾಖಲಿಸಿತ್ತು.

ಹೈದರಾಬಾದ್ ವಿಮಾನ ನಿಲ್ದಾಣದಂತೆ ದೆಹಲಿ ವಿಮಾನ ನಿಲ್ದಾಣದ ವ್ಯವಸ್ಥೆಯನ್ನು ನೋಡಿಕೊಳ್ಳುವ ಜಿಎಂಆರ್ ಸಮೂಹ ದೆಹಲಿಯಲ್ಲೂ 3 ಕೋಟಿ ಮೊತ್ತಕ್ಕೆ ಚೆಕ್ ಪಡೆದಿತ್ತು. ಆದರೆ, ಯಥಾ ಪ್ರಕಾರ ಚೆಕ್ ಕ್ಯಾಶ್ ಆಗಿರಲಿಲ್ಲ.

ಕಿಂಗ್ ಫಿಷರ್ ಸಂಸ್ಥೆ ಜೂ 30, 2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸುಮಾರು 651 ಕೋಟಿ ರು ನಷ್ಟು ನಷ್ಟ ಅನುಭವಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 264 ಕೋಟಿ ರು ನಷ್ಟ ದಾಖಲಿಸಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಗಾಯಗೊಂಡಿರುವ ವಿಜಯ್ ಮಲ್ಯ ಅವರ ಗಾಯದ ಮೇಲೆ ಈ ಆದೇಶ ಉಪ್ಪು ಸವರಿದಂತೆ ಆಗಿದೆ.

ತೀವ್ರ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿಂಗ್ ಫಿಷರ್ ಉದ್ಯೋಗಿ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಸ್ಥೆ ಒಡೆಯ ಮಲ್ಯರಿಗೆ ಕುತ್ತುಂಟು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆ ಒಡೆಯ ವಿಜಯ್ ಮಲ್ಯ ಅವರ ವಿರುದ್ಧ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೋಮವಾರ(ಅ.8) ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ 4000 ಉದ್ಯೋಗಿಗಳ ಪೈಕಿ 2000 ಉದ್ಯೋಗಿಗಳಿಗೆ ಈ ವರ್ಷದ ಮಾರ್ಚ್ ತಿಂಗಳಿನ ತನಕ ಸಂಬಳ ನೀಡಿದೆ. ನಂತರ ಯಾರೊಬ್ಬರಿಗೂ ಸಂಬಳ ನೀಡುವಲ್ಲಿ ವಿಫಲವಾಗಿದೆ.

ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ. ನಾಗರೀಕ ವಿಮಾನಯಾನ ನಿರ್ದೇಶನಾಲಯ(DGCA) ನಡೆಸಿದ ವಿಮಾನಯಾನ ಸುರಕ್ಷತಾ ಸಮೀಕ್ಷೆಯಲ್ಲಿ ಹಾಗೂ ಹೀಗೂ ಪಾಸ್ ಆಗಿ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಲೈಸನ್ಸ್ ಉಳಿಸಿಕೊಂಡಿದ್ದರು. ಅದರೆ, ಅ.21 ರವರೆಗೂ ವಿಮಾನ ಬುಕ್ಕಿಂಗ್ ಓಪನ್ ಇಲ್ಲದ್ದಂತಾಗಿದೆ.

ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.

ಯುನೈಟೆಡ್ ಬ್ರೂವೆರೀಸ್ ಸಂಸ್ಥೆ ಕಾರ್ಪೊರೇಟ್ ಗ್ಯಾರಂಟಿ ಮೊತ್ತ 1,601.43 ಕೋಟಿ ರು ದಾಟುತ್ತದೆ.ಇದಲ್ಲದೆ ಕಿಂಗ್ ಫಿಷರ್ ಸಂಸ್ಥೆ ಸಾಲದ ಪಾವತಿಗೆ ಆಧಾರವಾಗಿ 5,238.59 ಕೋಟಿ ಹಣ ಇದ್ದು, ಕಿಂಗ್ ಫಿಷರ್ ಹೌಸ್, ಗೋವಾ ವಿಲ್ಲಾ, ಹೆಲಿಕಾಪ್ಟರ್ ಅಡವಾಗಿ ಇಟ್ಟಿರುವ ಸುದ್ದಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+