ಬೆಂಗಳೂರು ಲಿಂಕ್: ಮುಂಬೈ ಮಸೂದ್ ಸ್ವಿಸ್ ಖಾತೆ ಜಪ್ತಿ

ಈತ ಬೇರೆ ಯಾರೂ ಅಲ್ಲ, ಮುಂಬೈ ಮೂಲದ ಉದ್ಯಮಿ ಸೈಯದ್ ಮಹಮ್ಮದ್ ಮಸೂದ್. ವಂಚನೆ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಸೈಯದ್ನನ್ನು ಮಹಾರಾಷ್ಟ್ರದಿಂದ ಕರೆತಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಟ್ಟಿದ್ದರು. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಂತೆ ಮಹಾರಾಷ್ಟ್ರ ಜೈಲು ಅಧಿಕಾರಿಗಳ ಸ್ಪಷ್ಟ ಸೂಚನೆ ನೀಡಿದ್ದರು.
ಜೈಲಾಧಿಕಾರಿಗೆ ಮುಳುಗು ನೀರು ತಂದಿದ್ದ: ಆದರೆ, ದೆಹಲಿ ಕೋರ್ಟ್ನ ಬಾಡಿ ವಾರಂಟನ್ನೇ ಗೋಲ್ಮಾಲ್ ಮಾಡಿ 2011ರ ಡಿ.27ರಂದು ಸೈಯದ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ. ಈ ಸಂಬಂಧ ತನಿಖೆ ನಡೆಸಿದ್ದ ಅಧಿಕಾರಿಗಳು ಜೈಲಾಧಿಕಾರಿಯನ್ನು ಅಮಾನತುಪಡಿಸಿದ್ದರು.
ಹೌದು ಈತ ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭಾರಿ ಹಣ ವಂಚನೆ ಮಾಡಿದ್ದ 95 ಸಾವಿರ ರೂ. ಬಂಡವಾಳ ಹೂಡಿದರೆ (ponzi) ಮುಂದಿನ 5 ವರ್ಷಗಳ ಕಾಲ ಪ್ರತಿ ತಿಂಗಳು 4000 ರೂ. ನೀಡುವುದಾಗಿ ಸೈಯದ್ ತನ್ನ ಸಿಟಿ ಲಿಮೋಸಿನ್ (City Limousine) ಸಂಸ್ಥೆಯ ಮೂಲಕ ಆಮಿಷವೊಡ್ಡುತ್ತಿದ್ದ. ಇದನ್ನು ನಂಬಿ ಸಾವಿರಾರು ಜನ ಹಣ ಹೂಡಿಕೆ ಮಾಡಿ, ಕಳೆದುಕೊಂಡಿದ್ದರು.
ಈ ಕುರಿತು ತನಿಖೆ ನಡೆಸಿದ್ದ ಅಧಿಕಾರಿಗಳಿಗೆ ಸೈಯದ್ ಭಾರಿ ಅಕ್ರಮ ಹಣ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಜಾಲದಲ್ಲಿ ( money laundering) ಭಾಗಿಯಾಗಿರುವ ಸುಳಿವು ಸಿಕ್ಕಿತ್ತು. ತನಿಖೆ ನಡೆಸಿದಾಗ ಆತ ಸ್ವಿಜರ್ಲೆಂಡ್ನ ಬ್ಯಾಂಕ್ನಲ್ಲಿ 6 ಕೋಟಿ ರೂ. ಅಕ್ರಮ ಹಣ ಇಟ್ಟಿರುವುದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಇರುವ 130 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲಿಗೆ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿತ್ತು. ಜತೆಗೆ ಸೈಯದ್ ಹಾಗೂ ಆತನ ಮಿತ್ರನ ಹೆಸರಲ್ಲಿರುವ 2 ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಸ್ವಿಸ್ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿರುವ ಸ್ವಿಸ್ ಬ್ಯಾಂಕ್ ಸೈಯದ್ನ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡಿದೆ.


Click it and Unblock the Notifications
