ಟೆಕ್ಕಿ ಮೇಲೆ ಅತ್ಯಾಚಾರ: ಸಿಇಒ ಅರೆಸ್ಟ್

CEO ಆಶೀಷ್ ಪಾಂಡೆ ತನ್ನ ಕೈಕೆಳಗಿನ ಮಹಿಳಾ ಅಸಿಸ್ಟೆಂಟ್ ಮ್ಯಾನೇಜರ್ ಅವರನ್ನು ಲಖ್ನೋ ಮತ್ತು ಚಂಡೀಗಢಕ್ಕೆ ಬಿಸಿನೆಸ್ ಟ್ರಿಪ್ ಗೆ ಕರೆದುಕೊಂಡು ಹೋಗಿದ್ದ. ಪ್ರವಾಸದಲ್ಲಿರುವಾಗ ಲಖ್ನೋದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಕಳೆದ ಭಾನುವಾರ ಟ್ರಿಪ್ ನಲ್ಲಿದ್ದಾಗ ಹೋಟೆಲೊಂದರಲ್ಲಿ ಮತ್ತು ಬರಿಸುವ ಪಾನೀಯ ಕುಡಿಸಿ, ಪ್ರಜ್ಞೆ ತಪ್ಪಿಸಿದ್ದಾನೆ. ಆನಂತರ ನನ್ನ ಮೇಲೆ ಲೈಂಗಿಕವಾಗಿ ಆಕ್ರಮಣ ನಡೆಸಿದ್ದಾನೆ. ಅದನ್ನು MMS ಮಾಡಿರುವುದಾಗಿಯೂ ಹೇಳಿದ್ದಾನೆ. ಮತ್ತು ಅದನ್ನೇ ನೆಪವಾಗಿಟ್ಟುಕೊಂಡು ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಸದರಿ ಮಹಿಳಾ ಅಸಿಸ್ಟೆಂಟ್ ಮ್ಯಾನೇಜರ್ ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾರೆ.
ಮೂಲತಃ ಲೂಧಿಯಾನಾದವರಾದ ಬಾಧಿತೆ ಅಸಿಸ್ಟೆಂಟ್ ಮ್ಯಾನೇಜರ್, ನಾಲ್ಕು ತಿಂಗಳ ಹಿಂದೆ ಆಶೀಷ್ ಪಾಂಡೆ ಮಾಲೀಕತ್ವದ Auric Solutions Private Limited ಸೇರಿಕೊಂಡಿದ್ದರು.












Click it and Unblock the Notifications