ಶುಕ್ರವಾರದಿಂದ ಲೋಡ್ ಶೆಡ್ಡಿಂಗ್ ಜಾರಿ: ಬೆಸ್ಕಾಂ

Bescom MD P Manivannan
ಬೆಂಗಳೂರು, ಅ.4: ಬೆಂಗಳೂರಿನ ವಿದ್ಯುತ್ ಸರಬರಾಜಿನ ಪ್ರತಿ ದಿನದ ಕೊರತೆ ನೀಗಿಸಲು ಶುಕ್ರವಾರ (ಅ.5)ದಿಂದ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ ಮಣಿವಣ್ಣನ್ ಹೇಳಿದ್ದಾರೆ.

ಆದರೆ, ಈ ಲೋಡ್ ಶೆಡ್ದಿಂಗ್ ಸದ್ಯಕ್ಕೆ ಕೈಗಾರಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಗೃಹ ಬಳಕೆದಾರರು ಆತಂಕಪಡುವ ಅಗತ್ಯವಿಲ್ಲ. ಕೈಗಾರಿಕೆಗಳಿಗೆ ಬೆಳಗ್ಗೆ ಹಾಗೂ ಸಂಜೆ 6 ಗಂಟೆಯಿಂದ 9 ಗಂಟೆ ತನಕ ವಿದ್ಯುತ್ ಪೂರೈಕೆ ಇರುವುದಿಲ್ಲ. ನಿರಂತರವಾಗಿ ವಿದ್ಯುತ್ ಬಳಕೆ ಮಾಡುವ ಕೈಗಾರಿಕೆಗಳಿಗೆ ಇದರಿಂದ ಹೊಡೆತ ಬೀಳಲಿದೆ.

ಕೈಗಾರಿಕೆಗಳಿಗೆ ಈಗಾಗಲೇ ಈ ಬಗ್ಗೆ ನೋಟಿಸ್ ನೀಡಲಾಗಿದೆ. ಇದು ತಾತ್ಕಾಲಿಕ ವಿದ್ಯುತ್ ಕಡಿತವಾಗಿದ್ದು, ನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ ಬೆಸ್ಕಾಂ ನಂತರ ಸೂಚನೆ ನೀಡಲಿದೆ ಎಂದು ಮಣಿವಣ್ಣನ್ ಹೇಳಿದರು.

ನಗರವಾಸಿಗಳಿಗೆ ಲೋಡ್ ಶೆಡ್ಡಿಂಗ್ ಭೀತಿ ಸದ್ಯಕ್ಕಿಲ್ಲ ಆದರೆ, ಸಣ್ಣ ಪುಟ್ಟ ಗ್ರಾಮಗಳಲ್ಲಿ 3 ಗಂಟೆಗಳ ವಿದ್ಯುತ್ ಕಡಿತ ಅನಿವಾರ್ಯ. ಬೆಳಗ್ಗೆ 9 ರಿಂದ ಮಧ್ಯಾಹ್ನದವರೆಗೆ ಅಥವಾ ಮಧ್ಯಾಹ್ನ 3 ರಿಂದ 6 ಗಂಟೆವರೆಗೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ. ರೈತರಿಗೆ 6 ಗಂಟೆಗಳ ವಿದ್ಯುತ್ ಪೂರೈಕೆ ಒದಗಿಸಲಾಗುವುದು ಎಂದು ಮಣಿವಣ್ಣನ್ ಹೇಳಿದ್ದಾರೆ.

ಬೆಸ್ಕಾಂ ಸಂಸ್ಥೆ ಪ್ರತಿದಿನ ಸುಮಾರು 150 ಮೆಗಾವ್ಯಾಟ್ ನಿಂದ 600 ಮೆ.ವ್ಯಾ ತನಕ ವಿದ್ಯುತ್ ಕೊರತೆ ಅನುಭವಿಸುತ್ತಿದೆ.

ಕೆಪಿಟಿಸಿಲ್ ಪ್ರತಿದಿನ 37 ದಶಲಕ್ಷ ಯೂನಿಟ್ ಉತ್ಪಾದನೆ ಮಾಡುತ್ತಿದ್ದು, ಪ್ರತಿ ತಿಂಗಳು ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಪ್ರತಿ ದಿನ 10 ರಿಂದ 15 ದಶಲಕ್ಷ ಯೂನಿಟ್ ಕೊರತೆ ಅನುಭವಿಸಲಾಗುತ್ತಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೇಡಿಕೆ ಹೆಚ್ಚಾಗಿತ್ತು.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಬೃಹತ್, ಸಣ್ಣ ಜಲವಿದ್ಯುತ್ ಹಾಗೂ ಅಣು ವಿದ್ಯುತ್ ಸೇರಿದಂತೆ ಐದು ರೀತಿಯಲ್ಲಿ ಸುಮಾರು 175ಕ್ಕೂ ಅಧಿಕ ಮಿಲಿಯನ್ ಯೂನಿಟ್ ಉತ್ಪಾದಿಸಲಾಗುತ್ತದೆ.

ವಿದ್ಯುತ್ ಆನ್ನು ಐದು ವಿದ್ಯುತ್ ಪ್ರಸರಣ ಸಂಸ್ಥೆ ಮೂಲಕ ವಿವಿಧೆಡೆ ಹಂಚಲಾಗುತ್ತದೆ. ಬೆಸ್ಕಾಂ(ಬೆಂಗಳೂರು) ಹೆಸ್ಕಾಂ(ಹುಬ್ಬಳ್ಳಿ), ಜೆಸ್ಕಾಂ(ಗುಲ್ಬರ್ಗಾ), ಮೆಸ್ಕಾಂ(ಮಂಗಳೂರು), ಚೆಸ್ಕಾಂ(ಮೈಸೂರು)

ಬೆಂಗಳೂರಿನಲ್ಲಿ ಸುಮಾರು 4.5 ಲಕ್ಷ ವಾಣಿಜ್ಯ ಉದ್ದೇಶಿತ ವಿದ್ಯುತ್ ಬಳಕೆ ದಾರರಿದ್ದಾರೆ. ಮಾಲ್, ಕಾಂಪ್ಲೆಕ್ಸ್ ಗಳಲ್ಲಿ ಬಳಕೆ ಮಾಡುವ ವಿದ್ಯುತ್ ಬಗ್ಗೆ ನಿಗಾವಹಿಸಲು ಬೆಸ್ಕಾಂ ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+