ಚೆನ್ನೈನಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಗಗನಸಖಿ ಸಾವು

kf-air-hostess-aphimak-killed-evp-amuse-park-chennai
ಚೆನ್ನೈ, ಅ.3: ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿದ್ದ 20 ವರ್ಷದ ಯುವತಿ ಆಕಸ್ಮಿಕ ಘಟನೆಯೊಂದರಲ್ಲಿ ಸಾವಿಗೀಡಾಗಿದ್ದಾರೆ.

ಕಿಂಗ್ ಫಿಷರ್ ಏರ್ ಲೈನ್ಸ್ ವಿಮಾನಗಳು ಆಗಸದತ್ತ ಚಿಮ್ಮದೆ ಕೆಲಸದವಿಲ್ಲದ ಕಾರಣ ಸ್ನೇಹಿತರ ಜತೆಗೂಡಿ ಇಲ್ಲಿನ ಅಮ್ಯೂಸ್ ಮೆಂಟ್ ಪಾರ್ಕಿಗೆ ಬಂದಿದ್ದ ಈ ಗಗನಸಖಿ ಮಂಗಳವಾರ ಮೃತಪಟ್ಟಿದ್ದಾರೆ.

ನಾಗಾಲ್ಯಾಂಡ್ ಮೂಲದ ಆಂಫಿಮಕ್ ಮೃತಪಟ್ಟ ಕಿಂಗ್ ಫಿಷರ್ ಏರ್ ಲೈನ್ಸ್ ಗಗನಸಖಿ. ಈಕೆ ಚೆನ್ನೈನ ಹೊರವಲಯದಲ್ಲಿರುವ EVP Amusement Parkನಲ್ಲಿರುವ Giant Wheelನಲ್ಲಿ ಸ್ನೇಹಿತ ಜತೆಗೂಡಿ ವಿಹರಿಸುತ್ತಿದ್ದಳು.

ಆದರೆ ಯಾವುದೋ ಘಳಿಗೆಯಲ್ಲಿ Giant Wheelನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದಾಳೆ. ಕೆಳಗೆ ಬಿದ್ದ ಆಂಫಿಮಕ್ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ತಕ್ಷಣ ಾಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಆಂಫಿಮಕ್ ಉಸಿರಾಟ ನಿಂತುಹೋಗಿತ್ತು.

ಕಿಂಗ್ ಫಿಷರ್ ಏರ್ ಲೈನ್ಸ್ ಗಗನಸಖಿ ಆಂಫಿಮಕ್ ಸಾವು ಪ್ರಕರಣದಲ್ಲಿ EVP Amusement Parkನ ವ್ಯವಸ್ಥಾಪಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+