ಚುನಾವಣೆ: ಗುಜರಾತ್ ಡಿ 13-17ರಂದು; ಹಿಮಾಚಲ ನ.4ಕ್ಕೆ
ನವದೆಹಲಿ,
ಅ.3: ಅತ್ತ ನರೇಂದ್ರ ಮೋದಿ ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿ ಗಾದಿಗೇರಲು 'ನಮೋ ಗುಜರಾತ್ ಟಿವಿ'ಯನ್ನು ಆನ್ ಮಾಡಿಟ್ಟಿರುವ ಘಳಿಗೆಯಲ್ಲೇ ಗುಜರಾತ್ ವಿಧಾನಸಭೆಗೆ ಚುನಾವಣೆ ವೇಳಾಪಟ್ಟಿ ಘೋಷಿಸಲಾಗಿದೆ. ಇದೇ ವೇಳೆ, ಹಿಮಾಚಲ ಪ್ರದೇಶದಲ್ಲೂ ಚುನಾವಣೆ ನಡೆಯಲಿದೆ. id="toptextpromo">ಗುಜರಾತಿನಲ್ಲಿ
ಒಟ್ಟು 182 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಹಿಮಾಚಲದಲ್ಲಿ 68 ಸ್ಥಾನಗಳಿಗೆ ಚುನಾವಣೆ ಏರ್ಪಟ್ಟಿದೆ. ಗುಜರಾತಿನಲ್ಲಿ ಒಟ್ಟು 2 ಹಂತದಲ್ಲಿ ನಡೆಯುತ್ತದೆ. ಇನ್ನು ಹಿಮಾಚಲದಲ್ಲಿ ಒಂದೇ ಹಂತದಲ್ಲಿ ಮುಗಿಯಲಿದೆ. ಈ ಎರಡೂ ರಾಜ್ಯಗಳಲ್ಲಿ ಹಾಲಿ ವಿಧಾನಸಭೆಗಳ ಅವಧಿ ಅನುಕ್ರಮವಾಗಿ ಜನವರಿ 17 ಮತ್ತು 10 ರಂದು ಕೊನೆಗೊಳ್ಳಲಿದೆ. id='are-slot-1' class='oiad oi-axt oiadv'> id='top-searched-articles'>ಹಿಮಾಚಲದಲ್ಲಿ
ನವೆಂಬರ್ 4ರಂದು ಮತ್ತು ಗುಜರಾತಿನಲ್ಲಿ ಡಿಸೆಂಬರ್ 13 ಮತ್ತು 17ರಂದು ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಡಿಸೆಂಬರ್ 20ರಂದು. ಮುಖ್ಯ ಚುನಾವಣಾಧಿಕಾರಿ ವಿ ಎಸ್ ಸಂಪತ್ ಈ ಚುನಾವಣಾ ವೇಳಾಪಟ್ಟಿಯನ್ನು ಇದೀಗತಾನೆ ಪ್ರಕಟಿಸಿದ್ದಾರೆ.











Click it and Unblock the Notifications