ಕ್ರೈಂ ಸ್ಕ್ವಾಡ್ ಅಧಿಕಾರಿ ಕ್ರಿಮಿನಲ್, ಸಸ್ಪೆಂಡ್

ಮಲಯಾಳಂ ಸಿನಿಮಾಗಳಲ್ಲಿ ಕಾಣುವ ಕ್ರಿಮಿನಲ್/ ವಿಲನ್ ನಂತಿರುವ ಹಿರಿಯ ಅಧಿಕಾರಿಯ ಓ.ಟಿ. ಫಿರೋಜ್ ನನ್ನು ಮನೆಗೆ ಕಳಿಸಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದ ಈ ಅಧಿಕಾರಿ ತ್ರಿಕಾರಿಪುರ ಮತ್ತು ಚೆರ್ವತ್ತೂರು ಪ್ರದೇಶಗಳ ಆಭರಣ ಮಳಿಗೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಇಲ್ಲಿನ ಅಂಗಡಿಯೊಂದನ್ನು ದೋಚುವಂತೆ ಸದರಿ ಪೊಲೀಸ್ ಅಧಿಕಾರಿ ಕಳ್ಳರಿಗೆ 'ಮಾರ್ಗದರ್ಶನ' ನೀಡಿದ್ದ.
ಕಣ್ಣೂರಿನಲ್ಲಿ ಆಭರಣ ಮಳಿಗೆಯೊಂದರ ಕಳ್ಳತನ ಪ್ರಕರಣದಲ್ಲಿ ಬಶೀರ್ ಎಂಬುವವನ್ನು ಬಂಧಿಸಿದ, ಪೊಲೀಸರು ಅವನನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದಾಗ ಫಿರೋಜ್ ಕೈವಾಡ ಬೆಳಕಿಗೆ ಬಂದಿದೆ.
ಬಶೀರನ ಮೊಬೈಲಿನಲ್ಲಿ ಫಿರೋಜನ ಸಂಖ್ಯೆ ಪತ್ತಾಯಾದಾಗ ಸ್ವತಃ ಹಿರಿಯ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಕ್ರೈಂ ಸ್ಕ್ವಾಡಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅಧಿಕಾರಿ ಫಿರೋಜ್ ಮೊಬೈಲಿನ ಕಾಲ್ ಡಿಟೇಲ್ಸ್ ತೆಗೆದು ನೋಡಿದಾಗ ಫಿರೋಜನ ಕ್ರೈಂ ಡಿಟೇಲ್ಸ್ ಒಂದೊಂದಾಗಿ ಬಿಚ್ಚಿಕೊಂಡಿದೆ.
ಫಿರೋಜ್ ಇತರೆ ಕ್ರಿಮಿನಲ್ ಗಳ ಜತೆ ಕೈಜೋಡಿಸಿ, ದೇವಸ್ಥಾನಗಳು, ಆಭರಣದಂಗಡಿಗಳು ಎನ್ನದೆ ಎಲ್ಲೆಲ್ಲೂ ತನ್ನ ಕೈಚಳಕ ತೋರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications