ಎಸ್ ಬಿಐ: ಸುರಂಗ ತೋಡಿ 70 ಲಕ್ಷ ರೂ ದರೋಡೆ

tunnel-to-strongroom-sbi-bank-jaisalmer-r-70-lakh-loot
ಜೈಸಲ್ಮೇರ್, ಅ.3: ಮೊನ್ನೆಯಷ್ಟೇ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಐಸಿಐಸಿಐ ಬ್ಯಾಂಕಿಗೆ ಸೇರಿದ ಐದಾರು ಕೋಟಿ ರೂ ನಗದನ್ನು ಖದೀಮರು ದೋಚಿದ್ದು, ಆನಂತರ ಅವರೆಲ್ಲ ನಗದು ಸಮೇತ 3-4 ದಿನದಲ್ಲೆ ಸಿಕ್ಕಿ ಬಿದ್ದಿದ್ದು ಇನ್ನೂ ಹಸಿರಾಗಿದೆ.

ಹೀಗಿರುವಾಗಲೇ ಜೈಸಲ್ಮೇರ್ ನಗರದ State Bank of India ಶಾಖೆಯ ಖಜಾನೆಯಿರುವ ಭದ್ರತಾ ಕೊಠಡಿಗೆ ನೇರವಾಗಿ ಸುರಂಗ ತೋಡಿದ ದುಷ್ಕರ್ಮಿಗಳು ಬರೋಬ್ಬರಿ 70 ಲಕ್ಷ ರೂಪಾಯಿಯನ್ನು ಕದ್ದೊಯ್ದಿದ್ದಾರೆ. ಆದರೆ ದರೋಡೆಕೋರರು ಲೂಟಿಗೈದ ಒಟ್ಟು ಮೊತ್ತವೆಷ್ಟು ಎಂಬುದನ್ನು ಅಧಿಕೃತ ಮೂಲಗಳು ತಿಳಿಸುತ್ತಿಲ್ಲ. ಆದಾಗ್ಯೂ ರೂ. 1.50 ಕೋಟಿ ಲೂಟಿಗೈಯಲಾಗಿದೆ ಎಂದು ಅಂದಾಜಿಸಲಾಗಿದೆ.

ಸುಮಾರು 15 ಅಡಿ ಉದ್ದದ ಸುರಂಗವನ್ನು ತೋಡಿರುವ ದುಷ್ಕರ್ಮಿಗಳು ಹಣ ದರೋಡೆ ಮಾಡಿರುವುದು ನಿನ್ನೆ ಮಂಗಳವಾರ ಬ್ಯಾಂಕ್ ನೌಕರರ ಗಮನಕ್ಕೆ ಬಂದಿದೆ. ಬ್ಯಾಂಕಿನ ಹಿಂದೆ ಜನ ಓಡಾಡದಂತಹ ಜಾಗವಿದೆ. ಅದರ ದುರುಪಯೋಗ ಪಡಿಸಿಕೊಂಡ ದುಷ್ಕರ್ಮಿಗಳು ನೇರವಾಗಿ ಸ್ಟ್ರಾಂಗ್ ರೂಮಿಗೇ ಸುರಂಗ ಕೊರೆದು 70 ಲಕ್ಷ ರೂ ದೋಚಿದ್ದಾರೆ. ಬಹುಶಃ ಭಾನುವಾರ ಈ ಕಳ್ಳತನ ನಡೆದಿರಬಹುದು ಎಂದು ಹೆಚ್ಚುವರು ಪೊಲೀಸ್ ವರಿಷ್ಠಾಧಿಕಾರಿ ಗಣಪತ್ ಲಾಲ್ ಹೇಳಿದ್ದಾರೆ.

ಇತ್ತೀಚೆಗೆ ಬ್ಯಾಂಕ್ ಸಮೀಪ ಕೆಲಸ ಮಾಡುತ್ತಿದ್ದ ಕಟ್ಟಡ ನಿರ್ಮಾಣಕಾರರು ಈ ಕುಕೃತ್ಯದಲ್ಲಿ ಭಾಗಿಯಾಗಿರಬಹುದು ಅಥವಾ ಬ್ಯಾಂಕ್ ಉದ್ಯೋಗಿಗಳು ಶಾಮೀಲಾಗಿ ಈ ದರೋಡೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಿಸಿಟಿವಿ? : ದರೋಡೆಕೋರರು ಕಟ್ಟಡದ ಅಡಿಯಲ್ಲಿ ಈ ಸುರಂಗವನ್ನು ಕೊರೆಯಲು 15-20 ದಿನಗಳನ್ನು ತೆಗೆದುಕೊಂಡಿರಬಹುದು. ಅದಕ್ಕಾಗಿ ಅವರು ಎಲೆಕ್ಟ್ರಾನಿಕ್ ಸ್ಟೋನ್ ಕಟ್ಟರ್ ನ್ನೂ ಬಳಸಿರಬಹುದು. ಅಚ್ಚರಿಯೆಂದರೆ, ಬ್ಯಾಂಕ್ ನ ಸ್ಟ್ರಾಂಗ್ ರೂಂನಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಸಿಸಿಟಿವಿ ತುಣುಕುಗಳನ್ನು ಗಮನಿಸಿದಾಗ ದರೋಡೆಕೋರರು ಬ್ಯಾಂಕ್ ನ ಸ್ಟ್ರಾಂಗ್ ರೂಂಗೆ ನಡು ರಾತ್ರಿ 12.40ಕ್ಕೆ ನುಗ್ಗಿದ್ದಾರೆ ಎಂಬುದು ತಿಳಿಯುತ್ತದೆ. ಆದರೆ ಕೋಣೆ ತುಂಬಾ ಕತ್ತಲಾಗಿತ್ತು. ಹೀಗಾಗಿ ದರೋಡೆಕೋರರ ಮುಖಗಳನ್ನು ಸ್ಪಷ್ಟವಾಗಿ ಗುರುತಿಸುವುದು ಕಷ್ಟ ಎನ್ನಲಾಗಿದೆ.

ದರೋಡೆಕೋರರು ಟಾರ್ಚ್ ಗಳನ್ನು ಬಳಸಿದ್ದರು. ಬ್ಯಾಂಕ್ ಕಟ್ಟಡದ ಹೊರಗೆ ಅಥವಾ ಸುರಂಗದಲ್ಲಿ ಇನ್ನಿಬ್ಬರು ದರೋಡೆಕೋರರಿದ್ದಿರಬಹುದಾದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗಡಿಸಾರ್ ರಸ್ತೆಯಲ್ಲಿರುವ ಈ ಶಾಖೆ ಇದೆ. ಕಟ್ಟಡದ ಮೊದಲ ಮಹಡಿಯಲ್ಲಿ ಎಲ್ ಐ ಸಿ ಕಚೇರಿಯಿದೆ. ಕಟ್ಟಡದ ಪ್ರತಿಯೊಂದು ಮಹಡಿಗೆ ಒಬ್ಬರೊಬ್ಬರು ಗಾರ್ಡ್ ಗಳಿದ್ದಾರೆ. ಕಟ್ಟಡದ ಪ್ರದೇಶದಲ್ಲೇ ಎಸ್ ಬಿ ಐ ಹಾಗೂ ಎಲ್ ಐ ಸಿ ಅಧಿಕಾರಿಗಳ ಅಧಿಕೃತ ನಿವಾಸಗಳೂ ಇವೆ. ಇದನ್ನು ಹೊರತು ಪಡಿಸಿದಲ್ಲಿ ಕಟ್ಟಡದ ಹಿಂಬದಿಯಲ್ಲಿ ಖಾಲಿ ಜಾಗವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+