ಗೂಗಲ್ ಕ್ಯಾಮರಾ ಕಣ್ಣಿಗೆ ಬಿದ್ದ ಆ ಅನ್ಯಗ್ರಹ ಯಾವುದು?

google-street-view-camera-captures-ufo-sun-halo
ಟೆಕ್ಸಾಸ್, ಅ.1: ಕಳೆದ ವಾರ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಮಟಮಟ ಮಧ್ಯಾಹ್ನ ಆಕಾಶದಲ್ಲಿ ಸುಮಾರು ಅರ್ಧ ಗಂಟೆ ಕಾಲ ಸೂರ್ಯನ ಸುತ್ತ ಮೂಡಿದ್ದ ಪ್ರಭಾವಳಿಯ ಮಧ್ಯೆ ಹಾರಿಹೋದ ವಸ್ತುವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಇದೇನು ಏಲಿಯನ್ನಾ, ಯುಎಫ್ಓನಾ, ಸ್ಪೇಸ್ ಶಿಪ್ಪಾ? ಏನೀ ಲೀಲೆ? ಎಂದು 'ಒನ್ ಇಂಡಿಯಾ ಕನ್ನಡ' ಓದುಗರಾದ ಎನ್ ಕೃಷ್ಣ ಅವರು ಆತಂಕ/ ಕೌತುಕದಿಂದ ಕೇಳಿದ್ದರು.

ಈಗ, ಮೊನ್ನೆ 14ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಇಂಟರನ್ ನೆಟ್ ದೈತ್ಯ ಗೂಗಲ್ ಖುದ್ದಾಗಿ ತನ್ನ Google Street View camera ಬಳಸಿ ಅನ್ಯಗ್ರಹವೊಂದರ ಚಿತ್ರವನ್ನು 'ಸೆರೆ' ಹಿಡಿದಿದೆ.

ಅಮೆರಿಕದ ಟೆಕ್ಸಾಸ್ ನಲ್ಲಿ ಸ್ಥಳೀಯರು ಎರಡು ಕಡೆ Google Mapsನಲ್ಲಿ ಇಣುಕುತ್ತಿದ್ದಾಗ ಗುರುತೇ ಸಿಗದಂತಹ ಎರಡು ನಿಗೂಢ ಆದರೆ ಒಂದೇ ಸ್ವರೂಪದ ವಸ್ತು ಕಣ್ಣಿಗೆ ಬಿದ್ದಿದೆ (ಚಿತ್ರದ ನೋಡಿ). ಆದರೆ ಇವೆರಡೂ ಸುಮಾರು 1,000 ಕಿ.ಮೀ. ದೂರದ ಅಂತದರಲ್ಲಿ ಕಾಣಿಸಿಕೊಂಡಿವೆ.

ಇದರಿಂದ ಗಾಬರಿಗೆ ಬಿದ್ದ ಜನ ತಕ್ಷಣ ಗೂಗಲ್ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಕೇಳತೊಡಗಿದ್ದಾರೆ. Google Maps ಅನ್ನು ಇಣುಕಿದ ಎಲ್ಲರ ಕಣ್ಣಿಗೂ ಇದು ಗೋಚರವಾಗಿರುವುದು ಸೋಜಿಗ ತಂದಿದೆ.

Dailymail ವರದಿಯ ಪ್ರಕಾರ ಕೆಂಪು ಕೆಂಪಾದ ಈ ಆಕೃತಿ ನ್ಯೂ ಮೆಕ್ಸಿಕೊ ಮತ್ತು ಟೆಕ್ಸಾಸ್ ನಲ್ಲಿ ಕಂಡುಬಂದಿದೆ. ಇತ್ತೀಚೆಗೆ ಎಲ್ಲಡೆಯೂ ಕಾಣಿಸುತ್ತಿರುವ (ಚಿಂತಾಮಣಿ ಸೇರಿದಂತೆ) ಆಕೃತಿಯೇ ಅಥವಾ ಇದೇನು ಏಲಿಯನ್ನಾ, ಯುಎಫ್ಓನಾ, ಸ್ಪೇಸ್ ಶಿಪ್ಪಾ? ಅಥವಾ ಮೆಕ್ ಡೊನಾಲ್ಡ್ ರೆಸ್ಟೋರೆಂಟಿನಿಂದ ತೆಗೆದ ಚಿತ್ರವೋ ಎಂದು ಜನ ಆಶ್ಚರ್ಯಚಕಿತರಾಗಿ ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+